
IPL 2025 Qualifier 1: 2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿ ಈ ಸೀಸನ್ನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಸುಲಭವಾಗಿ ಗುರಿ ಮುಟ್ಟಿತು. ಇದು ಆರ್‌ಸಿಬಿಗೆ ಐಪಿಎಲ್‌ನಲ್ಲಿ ನಾಲ್ಕನೇ ಫೈನಲ್ ಪ್ರವೇಶ. ಇತ್ತ ಸೋತ ಪಂಜಾಬ್ ಎಲಿಮಿನೇಟರ್‌ನಲ್ಲಿ ಗೆದ್ದ ತಂಡವನ್ನು ಕ್ವಾಲಿಫೈಯರ್ 2ರಲ್ಲಿ ಎದುರಿಸಲಿದೆ.
ಪಂಜಾಬ್‌ನ ಮುಲ್ಲನ್‌ಪುರದ ಮಹಾರಾಜ ಯದ್ವಿಂದರ್ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025 ರ ಐಪಿಎಲ್ (IPL 2025) ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ (RCB vs PBKS) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದ ಆರ್‌ಸಿಬಿ, ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಆರ್‌ಸಿಬಿ ಬೌಲರ್ಗಳ ಮಾರಕ ದಾಳಿಯ ಮುಂದೆ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಆರ್‌ಸಿಬಿ ಸುಲಭವಾಗಿ ಬೆನ್ನಟ್ಟಿತು. ಇನ್ನು ಆರ್‌ಸಿಬಿ ವಿರುದ್ಧ ಸೋತಿರುವ ಪಂಜಾಬ್, ನಾಳೆ ನಡೆಯಲ್ಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವನ್ನು, ಕ್ವಾಲಿಫೈಯರ್ 2 ರಲ್ಲಿ ಎದುರಿಸಲಿದೆ. ಆ ಪಂದ್ಯದಲ್ಲಿ ಗೆದ್ದ ತಂಡ ಬರುವ ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
ದಾಖಲೆಯ ಗೆಲುವು
ಐಪಿಎಲ್ ಪ್ಲೇಆಫ್ ಇತಿಹಾಸದಲ್ಲಿ ಆರ್‌ಸಿಬಿ ಅತಿ ದೊಡ್ಡ ಗೆಲುವು ದಾಖಲಿಸಿದೆ. ರಜತ್ ಪಡೆ 60 ಎಸೆತಗಳ ಮೊದಲೇ ಈ ಪಂದ್ಯವನ್ನು ಗೆದ್ದುಕೊಂಡಿತು. ಕಳೆದ ವರ್ಷ ಕೆಕೆಆರ್ ತಂಡ ಚೆನ್ನೈ ತಂಡವನ್ನು 57 ಎಸೆತಗಳಲ್ಲಿ ಸೋಲಿಸಿತ್ತು. ಇದಕ್ಕೂ ಮೊದಲು ಕೆಕೆಆರ್ ತಂಡವು 38 ಎಸೆತಗಳು ಬಾಕಿ ಇರುವಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತ್ತು. 2017 ರ ಐಪಿಎಲ್‌ನಲ್ಲಿ ಮುಂಬೈ 33 ಎಸೆತಗಳು ಬಾಕಿ ಇರುವಂತೆಯೇ ಗೆದಿದ್ದರೆ, 2008 ರಲ್ಲಿ ಚೆನ್ನೈ ತಂಡವು ಪಂಜಾಬ್ ತಂಡವನ್ನು 31 ಎಸೆತಗಳಿಂದ ಸೋಲಿಸಿತ್ತು.
ಮೊದಲ ಕ್ವಾಲಿಫೈಯರ್ ಹೀಗಿತ್ತು
ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮುಲ್ಲನ್‌ಪುರದ ಕಷ್ಟಕರವಾದ ಪಿಚ್‌ನಲ್ಲಿ ಆರ್‌ಸಿಬಿಗೆ ಈ ನಿರ್ಧಾರ ನಿರ್ಣಾಯಕವೆಂದು ಸಾಬೀತಾಯಿತು, ಏಕೆಂದರೆ ಪಂಜಾಬ್ ತಂಡವು ಎರಡನೇ ಓವರ್‌ನಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ಪಂದ್ಯದ 8ನೇ ಎಸೆತದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಯಶ್ ದಯಾಳ್ ಔಟ್ ಮಾಡಿದರು. ಮುಂದಿನ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಅವರು ಪ್ರಭ್ಸಿಮ್ರನ್ ಸಿಂಗ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಹೇಜಲ್‌ವುಡ್ ಪಂಜಾಬ್ ಕಿಂಗ್ಸ್‌ನ ಬ್ಯಾಟಿಂಗ್ ಬೆನ್ನೇಲುಬು ಮುರಿದರು. ಹೇಜಲ್‌ವುಡ್, ಜೋಶ್ ಇಂಗ್ಲಿಷ್ ಮತ್ತು ಶ್ರೇಯಸ್ ಅಯ್ಯರ್ ಅವರ ವಿಕೆಟ್‌ಗಳನ್ನು ಪಡೆದರು.
ನೆಹಾಲ್ ವಧೇರಾ ಅವರನ್ನು ವಜಾ ಮಾಡುವ ಮೂಲಕ ಯಶ್ ದಯಾಳ್ ಉಳಿದ ಕೆಲಸವನ್ನು ಪೂರ್ಣಗೊಳಿಸಿದರು. ಹೀಗಾಗಿ ಪಂಜಾಬ್ ಕೇವಲ 50 ರನ್‌ಗಳಿಗೆ ತನ್ನ ಅರ್ಧದಷ್ಟು ತಂಡವನ್ನು ಕಳೆದುಕೊಂಡಿತು. ಉಳಿದಂತೆ ಪಂಜಾಬ್‌ನ ಮಧ್ಯಮ ಕ್ರಮಾಂಕವನ್ನು ಕಾಡಿದ ಸುಯಾಶ್ ಶರ್ಮಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮುಶೀರ್ ಖಾನ್ ಅವರನ್ನು ಔಟ್ ಮಾಡಿದರು. ಅಂತಿಮವಾಗಿ ಪಂಜಾಬ್ ತಂಡ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು.
ಆರ್‌ಸಿಬಿಗೆ ಉತ್ತಮ ಆರಂಭ
ಈ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಆದಾಗ್ಯೂ ಕೈಲ್ ಜೇಮಿಸನ್, ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಪ್ರತಿರೋಧ ತೋರಿಸಲು ಯತ್ನಿಸಿದರು. ಆದರೆ ಆ ಬಳಿಕ ಬಂದ ಮಯಾಂಕ್ ಅಗರ್ವಾಲ್, ಫಿಲ್ ಸಾಲ್ಟ್ಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರ ನಡುವೆ ಅರ್ಧಶತಕದ ಜೊತೆಯಾಟವೂ ಇತ್ತು. ಆದರೆ ಮಯಾಂಕ್ ಅವರನ್ನು ಮುಶೀರ್ ಖಾನ್ ಔಟ್ ಮಾಡುವ ಮೂಲಕ ಆರ್‌ಸಿಬಿಗೆ 2ನೇ ಆಘಾತ ನೀಡಿದರು.
ಫಿಲ್ ಸಾಲ್ಟ್ ಅರ್ಧಶತಕ
ಆದರೆ ಅಷ್ಟರಲ್ಲಾಗಲೇ ಆರ್‌ಸಿಬಿ ಗೆಲುವು ಖಚಿತವಾಗಿತ್ತು. ಆರಂಭಿಕ ಫಿಲ್ ಸಾಲ್ಟ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಅವರು 27 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 56 ರನ್ ಗಳಿಸಿ ಅಜೇಯರಾಗಿ ಉಳಿದರು. ಅದೇ ಸಮಯದಲ್ಲಿ, ರಜತ್ ಪಾಟಿದಾರ್ 15* ರನ್ ಗಳಿಸಿದರು. ಪಂಜಾಬ್ ಪರ ಕೈಲ್ ಜೇಮಿಸನ್ ಮತ್ತು ಮುಶೀರ್ ಖಾನ್ ತಲಾ ಒಂದು ವಿಕೆಟ್ ಪಡೆದರು.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1