Mumbai Indians’ Unbeatable Streak: ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 100 ರನ್‌ಗಳಿಂದ ಅದ್ಭುತ ಜಯ ಸಾಧಿಸಿದೆ. ಇದು ಮುಂಬೈ ತಂಡದ ಸತತ ಆರನೇ ಗೆಲುವಾಗಿದೆ. ರೋಹಿತ್ ಶರ್ಮಾ ಮತ್ತು ರಿಕಲ್ಟನ್ ಅವರ ಅರ್ಧಶತಕಗಳು ಹಾಗೂ ಬೌಲ್ಟ್ ಮತ್ತು ಬುಮ್ರಾ ಅವರ ಮಾರಕ ಬೌಲಿಂಗ್ ರಾಜಸ್ಥಾನದ ಸೋಲಿಗೆ ಕಾರಣವಾಯಿತು. ಈ ಗೆಲುವಿನೊಂದಿಗೆ ಮುಂಬೈ ತಂಡವು ಐಪಿಎಲ್ ಪ್ಲೇ ಆಫ್ಸ್‌ಗೆ ಇನ್ನಷ್ಟು ಸನಿಹವಾದರೆ, ರಾಜಸ್ಥಾನ್ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸಿತು.

ಸತತ 6ನೇ ಪಂದ್ಯವನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ತಡೆಯುವುದು ಕಷ್ಟ ಮಾತ್ರವಲ್ಲ, ಅಸಾಧ್ಯವೂ ಹೌದು ಎನಿಸುತ್ತಿದೆ. ಲೀಗ್ನಲ್ಲಿ ಕೆಟ್ಟ ಆರಂಭವನ್ನು ಹೊಂದಿದ್ದ ಮುಂಬೈ ತಂಡ ಇದೀಗ ಅಜೇಯ ಓಟವನ್ನು ಮುಂದುವರೆಸಿದೆ. ತನ್ನ 11 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಅದ್ಭುತ ಪ್ರದರ್ಶನ ನೀಡಿ 100 ರನ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 217 ರನ್ ಗಳಿಸಿತು. ಉತ್ತರವಾಗಿ ರಾಜಸ್ಥಾನ 20 ಓವರ್‌ಗಳನ್ನು ಸಹ ಆಡಲು ಸಾಧ್ಯವಾಗದೆ 16.1 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 117 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮುಂಬೈಗೆ ಅಮೋಘ ಆರಂಭ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ರೋಹಿತ್ ಮತ್ತು ರಿಕಲ್ಟನ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಇದಲ್ಲದೆ ಇಬ್ಬರೂ ಆಟಗಾರರು ಮೊದಲ ವಿಕೆಟ್‌ಗೆ 116 ರನ್‌ಗಳ ಜೊತೆಯಾಟ ನೀಡಿದರು. ರಿಕಲ್ಟನ್ ಕೇವಲ 38 ಎಸೆತಗಳಲ್ಲಿ 61 ರನ್ ಗಳಿಸಿದರೆ, ರೋಹಿತ್ 36 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಇಬ್ಬರಲ್ಲದೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ತಲಾ 48 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 217 ರನ್‌ಗಳಿಗೆ ಕೊಂಡೊಯ್ದರು.
ಬುಮ್ರಾ-ಬೋಲ್ಟ್ ಮಾರಕ ದಾಳಿ
ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ನಂತೆಯೇ ಬ್ಯಾಟಿಂಗ್ ಪ್ರದರ್ಶನ ನೀಡುತ್ತೇವೆ ಎಂದು ರಾಜಸ್ಥಾನ್ ರಾಯಲ್ಸ್ ಆಶಿಸಿತ್ತು. ಆದರೆ ಬೋಲ್ಟ್ ಮತ್ತು ಬುಮ್ರಾ ಈ ಭರವಸೆಯನ್ನು ಹುಸಿಗೊಳಿಸಿದರು. ಮೊದಲಿಗೆ ದೀಪಕ್ ಚಹಾರ್, ವೈಭವ್ ಸೂರ್ಯವಂಶಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ಬೌಲ್ಟ್ ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ರಾಣಾ ಅವರ ವಿಕೆಟ್ ಪಡೆದರು. ಆ ಬಳಿಕ ಬಂದ ಬುಮ್ರಾ ರಾಜಸ್ಥಾನ ನಾಯಕ ರಿಯಾನ್ ಪರಾಗ್‌ಗೆ ಪೆವಿಲಿಯನ್‌ಗೆ ಹೋಗುವ ದಾರಿ ತೋರಿಸಿದರು. ಮುಂದಿನ ಎಸೆತದಲ್ಲಿ ಶಿಮ್ರಾನ್ ಹೆಟ್ಮೆಯರ್ ಕೂಡ ಔಟಾದರು.
117 ರನ್‌ಗಳಿಗೆ ಆಲೌಟ್
ಹೀಗಾಗಿ ಪವರ್ ಪ್ಲೇನಲ್ಲಿ ರಾಜಸ್ಥಾನ್ ರಾಯಲ್ಸ್ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ಬಳಿಕವೂ ತಂಡದ ಪೆವಿಲಿಯನ್ ಪರೇಡ್ ಮುಂದುವರೆಯಿತು. ಶುಭಂ ದುಬೆ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ರಾಜಸ್ಥಾನದ ಕೊನೆಯ ಭರವಸೆಯನ್ನು ಕೊನೆಗೊಳಿಸಿದರು. ಉಳಿದ ಕೆಲಸವನ್ನು ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಪೂರ್ಣಗೊಳಿಸಿದರು. ಅವರು ಧ್ರುವ್ ಜುರೆಲ್ ಅವರನ್ನು 11 ರನ್‌ಗಳಿಗೆ ಔಟ್ ಮಾಡಿದರೆ, ಮಹೇಶ್ ತೀಕ್ಷಣ ಮತ್ತು ಕುಮಾರ್ ಕಾರ್ತಿಕೇಯ ಅವರ ವಿಕೆಟ್‌ಗಳನ್ನು ಸಹ ಪಡೆದರು. ಕೊನೆಯಲ್ಲಿ ಬೌಲ್ಟ್, ಆರ್ಚರ್ ಅವರನ್ನು ಔಟ್ ಮಾಡಿ ರಾಜಸ್ಥಾನದ ಇನ್ನಿಂಗ್ಸ್ ಅನ್ನು 117 ರನ್‌ಗಳಿಗೆ ಕೊನೆಗೊಳಿಸಿದರು. ಮುಂಬೈ ವಿರುದ್ಧದ ಈ ಸೋಲಿನ ನಂತರ ರಾಜಸ್ಥಾನ ತಂಡವು ಅಧಿಕೃತವಾಗಿ ಲೀಗ್ ಹಂತದಲ್ಲೇ ಐಪಿಎಲ್ 2025 ರ ಪ್ರಯಾಣವನ್ನು ಅಂತ್ಯಗೊಳಿಸಿದರೆ, ಇತ್ತ ಮುಂಬೈ ತಂಡ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1