ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 10 ವರ್ಷಗಳ ಗೆಲುವಿನ ಬರವನ್ನ ನೀಗಿಸಿಕೊಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ 12 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 10 ವರ್ಷಗಳ ಗೆಲುವಿನ ಬರವನ್ನ ನೀಗಿಸಿಕೊಂಡಿದೆ. ಸೋಮವಾರ ನಡೆದ ಪಂದ್ಯದಲ್ಲಿ 12 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆರ್ಸಿಬಿ ನೀಡಿದ್ದ 222 ರನ್ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು 209ರನ್ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ ಪರ ಕೃನಾಲ್ ಪಾಂಡ್ಯ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮುಂಬೈಗೆ ಮತ್ತೆ ಕೈಕೊಟ್ಟ ಓಪನರ್ಸ್
222 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಇಂದೂ ಕೂಡ ಪವರ್ ಪ್ಲೇನಲ್ಲೇ ಆರಂಭಿಕರಿಬ್ಬರನ್ನ ಕಳೆದುಕೊಂಡಿತು. ಸ್ಫೋಟಕ ಆಟಕ್ಕೆ ಮುಂದಾದ ರೋಹಿತ್ ಶರ್ಮಾ 17 ರನ್ ಹಾಗೂ ರಯಾನ್ ರಿಕಲ್ಟೆನ್ 17 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಲ್ ಜಾಕ್ಸ್ 22 ರನ್ಗಳಿಸಿದರು. ಬ್ಯಾಟಿಂಗ್ ಪಿಚ್ನಲ್ಲಿ ರನ್ಗಳಿಸಿದ ಪರದಾಡಿದ 26 ಎಸೆತಗಳಲ್ಲಿ 28 ರನ್ಗಳಿಸಿ ಔಟ್ ಆದರು.

ಪಂದ್ಯವನ್ನ ರೋಚಕ ಘಟ್ಟಕ್ಕೆ ತಂದ ತಿಲಕ್-ಪಾಂಡ್ಯ
ಆದರೆ ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ 34 ಎಸೆತಗಳಲ್ಲಿ 89 ರನ್ಗಳ ಜೊತೆಯಾಟ ನಡೆಸಿ ಆರ್ಸಿಬಿ ಕೈಯಿಂದ ಗೆಲುವನ್ನ ಕಸಿದುಕೊಳ್ಳುವ ಮಟ್ಟಕ್ಕೆ ಬಂದಿದ್ದರು. ಆದರೆ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 56 ರನ್ಗಳಿಸಿದ್ದ ತಿಲಕ್ ವರ್ಮಾರನ್ನ ಯಶ್ ದಯಾಳ್ ಔಟ್ ಮಾಡಿ ಪಂದ್ಯವನ್ನ ಜೊತೆಯಾಟವನ್ನ ಬ್ರೇಕ್ ಮಾಡಿದರು. ನಂತರದ ಓವರ್ನಲ್ಲಿ 15 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ಗಳ ಸಹಿತ 42 ರನ್ಗಳಿಸಿದ್ದ ಹಾರ್ದಿಕ್ ಪಾಂಡ್ಯರನ್ನ ಹ್ಯಾಜಲ್ವುಡ್ ಔಟ್ ಮಾಡುವ ಮೂಲಕ ಪಂದ್ಯವನ್ನ ಆರ್ಸಿಬಿ ಪರ ತಿರುಗಿಸಿದರು. ನಮನ್ ಧೀರ್ 11, ಮಿಚೆಲ್ ಸ್ಯಾಂಟ್ನರ್ 8 ರನ್ಗಳಿಸಿದರು.

ರೋಚಕ ತಿರುವುಕೊಟ್ಟ ಭುವಿನೇಶ್ವರ್, ಹ್ಯಾಜಲ್ವುಡ್
12 ಓವರ್ಗೆ ಮುಂಬೈ 99ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಮುಂಬೈಗೆ 48 ಎಸೆತಗಳಲ್ಲಿ ಗೆಲ್ಲಲು 123 ರನ್ಗಳ ಅಗತ್ಯವಿತ್ತು. ಆಗ ಆರ್ಸಿಬಿ ಈ ಪಂದ್ಯವನ್ನ ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಸಿಡಿಲಿನಂತೆ ಆರ್ಭಟಿಸಿದರು. 13ನೇ ಓವರ್ನಲ್ಲಿ ಸುಯಾಶ್ ಶರ್ಮಾ ಬೌಲಿಂಗ್ನಲ್ಲಿ ತಿಲಕ್ ವರ್ಮಾ 17 ರನ್ ಚಚ್ಚಿದರೆ, 14 ಮತ್ತು 15ನೇ ಓವರ್ನಲ್ಲಿ ಹ್ಯಾಜಲ್ವುಡ್ ಮತ್ತು ಕೃನಾಲ್ ಪಾಂಡ್ಯ ಬೌಲಿಂಗ್ ಹಾರ್ದಿಕ್ ಪಾಂಡ್ಯ ಕ್ರಮವಾಗಿ 22 ಮತ್ತು 19 ರನ್ ಸಿಡಿಸಿದರು. ಕೇವಲ 9 ಎಸೆತಗಳಲ್ಲಿ 37 ರನ್ ಕಲೆಹಾಕಿದರು. 16ನೇ ಓವರ್ನಲ್ಲಿ ತಿಲಕ್ ವರ್ಮಾ ಭುವನೇಶ್ವರ್ ಕುಮಾರ್ಗೆ 13 ರನ್ ಸಿಡಿಸಿದರು. ಈ ಜೋಡಿ 24 ಎಸೆತಗಳಲ್ಲಿ 71 ರನ್ ಕಲೆಯಾಕಿತು. 17ನೇ ಓವರ್ನಲ್ಲಿ ಬೌಲಿಂಗ್ಗೆ ಬಂದ ಯಶ್ ದಯಾಳ್ 11 ರನ್ ಬಿಟ್ಟುಕೊಟ್ಟರು.
ಕೊನೆಯ 18 ಎಸೆತಗಳಲ್ಲಿ ಮುಂಬೈಗೆ ಗೆಲುವಿಗೆ ಕೇವಲ 41 ರನ್ ಅಗತ್ಯವಿತ್ತು. ಭುವನೇಶ್ವರ್ ಮತ್ತು ಹ್ಯಾಜಲ್ವುಡ್ ಬಿಟ್ಟರೆ ಮತ್ತೊಂದು ಓವರ್ ಎಸೆಯಲು ಸ್ಪಿನ್ನರ್ ಕೃನಾಲ್ ಮಾತ್ರ ಇದ್ದಿದ್ದರಿಂದ ಮುಂಬೈ ಸುಲಭವಾಗಿ ಗೆಲ್ಲಬಹುದು ಎಂದೇ ಭಾವಿಸಲಾಗಿತ್ತು. ಆದರೆ ಭುವಿ ತಮ್ಮ ಅನುಭವವನ್ನೆಲ್ಲಾ ದಾರೆಯೆರೆದು 29 ಎಸೆತಗಳಲ್ಲಿ 56 ರನ್ಗಳಿಸಿ ತಿಲಕ್ರನ್ನ ಔಟ್ ಮಾಡಿ ಬಿಗ್ ಬ್ರೇಕ್ ಕೊಟ್ಟರು.
ನಂತರ 12 ಎಸೆತಗಳಲ್ಲಿ ಮುಂಬೈ ಗೆಲುವಿಗೆ 28 ರನ್ಗಳ ಅಗತ್ಯವಿತ್ತು. ಹ್ಯಾಜಲ್ವುಡ್ ಮೊದಲ ಎಸೆತದಲ್ಲೇ 15 ಎಸೆತಗಳಲ್ಲಿ 42 ರನ್ಗಳಿಸಿದ್ದ ಹಾರ್ದಿಕ್ ಪಾಂಡ್ಯರನ್ನ ಪೆವಿಲಿಯನ್ಗಟ್ಟುವ ಮೂಲಕ ಆರ್ಸಿಬಿಗೆ ಗೆಲುವು ತಂದುಕೊಟ್ಟರು. ಆ ಓವರ್ನಲ್ಲಿ ಹ್ಯಾಜಲ್ವುಡ್ 9 ರನ್ ಬಿಟ್ಟುಕೊಟ್ಟರು. ಕೊನೆ ಓವರ್ನಲ್ಲಿ ಮುಂಬೈಗೆ 19 ರನ್ಗಳ ಅಗತ್ಯವಿತ್ತು. ತಂಡದಲ್ಲಿದ್ದ ಏಕೈಕ ಬೌಲರ್ ಕೃನಾಲ್ ಪಾಂಡ್ಯಗೆ ಪಾಟಿದಾರ್ ಚೆಂಡನ್ನ ನೀಡಿದರು. ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದು ಕೇವಲ 6 ರನ್ ನೀಡಿ ತಂಡಕ್ಕೆ 12 ರನ್ಗಳ ರೋಚಕ ಜಯ ತಂದುಕೊಟ್ಟರು.
ಆರ್ಸಿಬಿ ಪರ ಕೃನಾಲ್ ಪಾಂಡ್ಯ 45ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ಜೋಶ್ ಹ್ಯಾಜಲ್ವುಡ್ 37ಕ್ಕೆ2, ಯಶ್ ದಯಾಳ್ 46ಕ್ಕೆ 2, ಭುವನೇಶ್ವರ್ ಕುಮಾರ್ 48ಕ್ಕೆ1 ವಿಕೆಟ್ ಪಡೆದರು.
ಪಾಟಿದಾರ್-ಕೊಹ್ಲಿ ಅರ್ಧಶತಕ
ಇದಕ್ಕೂ ವಾಂಖೆಡೆಯಲ್ಲಿ ವಿಜೃಭವಿಸಿದ್ದ ಆರ್ಸಿಬಿ ಬ್ಯಾಟರ್ಗಳು ಐಪಿಎಲ್ ಇತಿಹಾಸದಲ್ಲಿ ಈ ಮೈದಾನದಲ್ಲಿ 5ನೇ ಗರಿಷ್ಠ ರನ್ ದಾಖಲಿಸಿತ್ತು. ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 67 ರನ್ಗಳಿಸಿದರೆ, ನಾಯಕ ರಜತ್ ಪಾಟಿದಾರ್ ಕೂಡ ಸಿಡಿಲಬ್ಬರ ಅರ್ಧಶತಕ ಸಿಡಿಸಿದ್ದರು. ರಜತ್ ಕೇವಲ 32 ಎಸೆತಗಳಲ್ಲಿ 5ಬೌಂಡರಿ, 4 ಸಿಕ್ಸರ್ಗಳ ಸಹಿತ 64 ರನ್ಗಳಿಸಿದರು. ಕೊನೆಯ ಓವರ್ಗಳಲ್ಲಿ ಸ್ಫೋಟಕ ಆಟವಾಡಿದ ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳೊಂದಿಗೆ ಅಜೇಯ 40 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು. ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 221 ರನ್ಗಳಿಸಿತ್ತು.
ಮುಂಬೈ ಬೌಲರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ 2 ವಿಕೆಟ್, ಟ್ರೆಂಟ್ ಬೌಲ್ಟ್ 2 ಮತ್ತು ವಿಘ್ನೇಶ್ ಪುತ್ತೂರ್ ಒಂದು ವಿಕೆಟ್ ಪಡೆದರು.
Source: News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1