ಐಪಿಎಲ್ 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟ.

ಬಿಸಿಸಿಐ 19ನೇ ಆವೃತ್ತಿಯ ಐಪಿಎಲ್ (IPL 2026) ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಭಿಮಾನಿಗಳ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ಲೀಗ್ ಹಂತದ ಪಂದ್ಯಗಳ ವಿವರ ಹೊರಬಿದ್ದಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ಆರ್​ಸಿಬಿ ತನ್ನ ಟೂರ್ನಿಯ ಅಭಿಯಾನವನ್ನು ಆರಂಭಿಸಲಿದೆ.

ತವರು ಮೈದಾನವಾಗಿ ರಾಯ್ಪುರ ಸೇರ್ಪಡೆ ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಇದರಲ್ಲಿ ಆರ್​ಸಿಬಿ ಒಟ್ಟು 14 ಪಂದ್ಯಗಳನ್ನು ಆಡಲಿದೆ. ಈ ಪೈಕಿ 7 ಪಂದ್ಯಗಳು ಆರ್​ಸಿಬಿಯ ತವರು ಮೈದಾನದಲ್ಲಿ ನಡೆದರೆ, ಉಳಿದ 7 ಪಂದ್ಯಗಳು ಎದುರಾಳಿ ತಂಡಗಳ ಮೈದಾನದಲ್ಲಿ ನಡೆಯಲಿವೆ. ವಿಶೇಷವೆಂದರೆ, ಈ ಆವೃತ್ತಿಯಲ್ಲಿ ಆರ್​ಸಿಬಿ ಎರಡು ತವರು ಮೈದಾನಗಳನ್ನು ಹೊಂದಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಹಾಗೂ ಛತ್ತೀಸ್‌ಗಢದ ರಾಯ್​ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ 2 ಪಂದ್ಯಗಳನ್ನು ಆಡಲಿದೆ.

ಯಾರ ವಿರುದ್ಧ ಎಷ್ಟು ಪಂದ್ಯ? ಆರ್​ಸಿಬಿ ತನ್ನ 14 ಲೀಗ್ ಪಂದ್ಯಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ತಲಾ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಆರ್​ಸಿಬಿ ತಂಡದ ಸಂಪೂರ್ಣ ಲೀಗ್ ವೇಳಾಪಟ್ಟಿ:

  • ಮಾರ್ಚ್ 28 (ಶನಿವಾರ): vs ಸನ್‌ರೈಸರ್ಸ್ ಹೈದರಾಬಾದ್ (ಬೆಂಗಳೂರು) – ಸಂಜೆ 7:30
  • ಏಪ್ರಿಲ್ 05 (ಭಾನುವಾರ): vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು) – ಸಂಜೆ 7:30
  • ಏಪ್ರಿಲ್ 10 (ಶುಕ್ರವಾರ): vs ರಾಜಸ್ಥಾನ ರಾಯಲ್ಸ್ (ಗುವಾಹಟಿ) – ಸಂಜೆ 7:30
  • ಏಪ್ರಿಲ್ 12 (ಭಾನುವಾರ): vs ಮುಂಬೈ ಇಂಡಿಯನ್ಸ್ (ಮುಂಬೈ) – ಸಂಜೆ 7:30
  • ಏಪ್ರಿಲ್ 15 (ಬುಧವಾರ): vs ಲಕ್ನೋ ಸೂಪರ್‌ಜೈಂಟ್ಸ್ (ಬೆಂಗಳೂರು) – ಸಂಜೆ 7:30
  • ಏಪ್ರಿಲ್ 18 (ಶನಿವಾರ): vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು) – ಮಧ್ಯಾಹ್ನ 3:30
  • ಏಪ್ರಿಲ್ 24 (ಶುಕ್ರವಾರ): vs ಗುಜರಾತ್ ಟೈಟಾನ್ಸ್ (ಬೆಂಗಳೂರು) – ಸಂಜೆ 7:30
  • ಏಪ್ರಿಲ್ 27 (ಸೋಮವಾರ): vs ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ) – ಸಂಜೆ 7:30
  • ಏಪ್ರಿಲ್ 30 (ಗುರುವಾರ): vs ಗುಜರಾತ್ ಟೈಟಾನ್ಸ್ (ಅಹಮದಾಬಾದ್) – ಸಂಜೆ 7:30
  • ಮೇ 07 (ಗುರುವಾರ): vs ಲಕ್ನೋ ಸೂಪರ್‌ಜೈಂಟ್ಸ್ (ಲಕ್ನೋ) – ಸಂಜೆ 7:30
  • ಮೇ 10 (ಭಾನುವಾರ): vs ಮುಂಬೈ ಇಂಡಿಯನ್ಸ್ (ರಾಯ್ಪುರ) – ಸಂಜೆ 7:30
  • ಮೇ 13 (ಬುಧವಾರ): vs ಕೋಲ್ಕತ್ತಾ ನೈಟ್ ರೈಡರ್ಸ್ (ರಾಯ್ಪುರ) – ಸಂಜೆ 7:30
  • ಮೇ 17 (ಭಾನುವಾರ): vs ಪಂಜಾಬ್ ಕಿಂಗ್ಸ್ (ಧರ್ಮಶಾಲಾ) – ಮಧ್ಯಾಹ್ನ 3:30
  • ಮೇ 22 (ಶುಕ್ರವಾರ): vs ಸನ್ ರೈಸರ್ಸ್ ಹೈದರಾಬಾದ್ (ಹೈದರಾಬಾದ್) – ಸಂಜೆ 7:30

Leave a Reply

Your email address will not be published. Required fields are marked *