IPL: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿರುವ ತಂಡ ಯಾವುದು ಗೊತ್ತಾ?

 ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡಗಳ ಪೈಕಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ರೋಹಿತ್ ಬಳಗ ಇದುವರೆಗೆ 3153 ಫೋರ್ ಬಾರಿಸಿದೆ.ಮುಂಬೈ ಬಳಿಕ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡಗಳ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ 2ನೇ ಸ್ಥಾನದಲ್ಲಿದ್ದು, ಈ ತಂಡ ಇದುವರೆಗೆ 3065 ಬೌಂಡರಿ ಹೊಡೆದಿದೆ.3ನೇ ಸ್ಥಾನದಲ್ಲಿ ಕೆಕೆಆರ್ ತಂಡವಿದ್ದು, ಈ ತಂಡ 3017 ಬೌಂಡರಿ ಬಾರಿಸಿದೆ.2975 ಬೌಂಡರಿಗಳೊಂದಿಗೆ ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.2942 ಬೌಂಡರಿಗಳೊಂದಿಗೆ ಆರ್​ಸಿಬಿ ಐದನೇ ಸ್ಥಾನದಲ್ಲಿದೆ.ಇನ್ನು 2788 ಬೌಂಡರಿ ಬಾರಿಸಿರುವ ಸಿಎಸ್​ಕೆ 6ನೇ ಸ್ಥಾನ ಸಿಕ್ಕಿದೆ.2634 ಬೌಂಡರಿ ಬಾರಿಸಿರುವ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನ ಪಡೆದುಕೊಂಡಿದೆ.8ನೇ ಸ್ಥಾನದಲ್ಲಿ 1970 ಬೌಂಡರಿ ಬಾರಿಸಿರುವ ಸನ್​ರೈಸರ್ಸ್​ ಹೈದರಾಬಾದ್ ಇದೆ.250 ಬೌಂಡರಿ ಬಾರಿಸಿರುವ ಗುಜರಾತ್ 9ನೇ ಸ್ಥಾನ ಪಡೆದುಕೊಂಡಿದೆ.ಹಾಗೆಯೇ 188 ಬೌಂಡರಿಗಳನ್ನು ಹೊಡೆದಿರುವ ಲಕ್ನೋ ತಂಡ ಕೊನೆಯ, ಅಂದರೆ 10ನೇ ಸ್ಥಾನವನ್ನು ಪಡೆದುಕೊಂಡಿದೆ.

source https://tv9kannada.com/photo-gallery/cricket-photos/ipl-2023-teams-with-moust-boundaries-in-ipl-history-see-the-full-details-in-kannada-psr-au14-541617.html

Views: 0

Leave a Reply

Your email address will not be published. Required fields are marked *