IPL Jio Cinema: ಜಿಯೋಸಿನಿಮಾದಲ್ಲಿ ಹೆಚ್ಚಳ ಕಂಡ ಡಿಜಿಟಲ್​​ ವೀಕ್ಷಕರ ಸಂಖ್ಯೆ! ಲೀಗ್​​ ಹಂತದಲ್ಲೇ ಈ ಪಾಟಿ, ಮುಂದೆ ಇನ್ನೂ ಹೆಚ್ಚಾಗಲಿದೆ!

IPL Jio Cinema: ಜಿಯೋಸಿನಿಮಾದಲ್ಲಿ ಹೆಚ್ಚಳ ಕಂಡ ಡಿಜಿಟಲ್​​ ವೀಕ್ಷಕರ ಸಂಖ್ಯೆ! ಲೀಗ್​​ ಹಂತದಲ್ಲೇ ಈ ಪಾಟಿ, ಮುಂದೆ ಇನ್ನೂ ಹೆಚ್ಚಾಗಲಿದೆ!
RCB vs CSK League match on April 17 witnessed by 2.4 crore people

ನವದೆಹಲಿ: ಜಿಯೋಸಿನಿಮಾ ತನ್ನದೇ ವೀಕ್ಷಕರ ದಾಖಲೆಯನ್ನು ಮುರಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್​ ಕಿಂಗ್ಸ್ (CSK) ನಡುವಿನ ಪಂದ್ಯದ ವೇಳೆ ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ ಬಹುತೇಕ ಎರಡೂವರೆ ಕೋಟಿ ತಲುಪಿದೆ (Viewership record). ಇದು ಪ್ರಸಕ್ತ ಐಪಿಎಲ್-2023ರ ಆವೃತ್ತಿಯ (IPL 2023) ಆನ್​ಲೈನ್​​ ಲೈವ್ ಸ್ಟ್ರೀಮಿಂಗ್ ಪ್ಲಾಟ್​​ಫಾರ್ಮ್ (Online Live Streaming) ಜಿಯೋಸಿನಿಮಾದಲ್ಲಿ (Jio Cinema) ಇದುವರೆಗಿನ ಅತಿ ಹೆಚ್ಚು ವೀಕ್ಷಕರ ಸಂಖ್ಯೆಯಾಗಿದೆ. ಈ ಹಿಂದೆ ಏಪ್ರಿಲ್ 12ರಂದು ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆ 2.2 ಕೋಟಿ ತಲುಪಿತ್ತು. ಈ ಬಾರಿ ಆರ್​​ಸಿಬಿ-ಸಿಎಸ್​ಕೆ ಪಂದ್ಯದ ಎರಡನೇ ಇನಿಂಗ್ಸ್​​ನ ಕೊನೆಯ ಓವರ್​​ನಲ್ಲಿ ಜಿಯೋಸಿನಿಮಾದ ವೀಕ್ಷಕರ ಸಂಖ್ಯೆ 24 ದಶಲಕ್ಷ ತಲುಪಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಈ ರೋಚಕ ಪಂದ್ಯದಲ್ಲಿ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್​​ ಕಿಂಗ್ಸ್ ತಂಡ 8 ರನ್​ಗಳಿಂದ ಗೆದ್ದುಕೊಂಡಿತು. ಒಟ್ಟಾರೆ 444 ರನ್​​ಗಳ ಪ್ರವಾಹ ಹರಿದ ಈ ಪಂದ್ಯದಲ್ಲಿ ದಾಖಲೆಯ 33 ಸಿಕ್ಸರ್​​ಗಳೂ ಸಿಡಿದವು.

ಟಾಟಾ ಐಪಿಎಲ್-2023ರ ಆವೃತ್ತಿಯ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಬಿಸಿಸಿಐ ಪ್ರತ್ಯೇಕ ಕಂಪನಿಗಳಿಗೆ ನೀಡಿದೆ. ಈಗ ಡಿಜಿಟಲ್ ಪ್ರಸಾರ ವೇದಿಕೆ ಅದರ ನೇರ ಲಾಭವನ್ನು ಕಾಣುತ್ತಿದೆ. ಜಿಯೋಸಿನಿಮಾ ಈ ಬಾರಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರವನ್ನು ಮಾಡುತ್ತಿದೆ. ಡಿಜಿಟಲ್ ಪ್ಲಾಟ್​​ಫಾರ್ಮ್ ನಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಇದು ಹೆಚ್ಚಿನ ಸಹಾಯವನ್ನು ಮಾಡಿದೆ.

2019ರ ಆವೃತ್ತಿಯ ಫೈನಲ್ ಪಂದ್ಯವನ್ನು ಡಿಸ್ನಿ-ಹಾಟ್​​ಸ್ಟಾರ್​​​ನಲ್ಲಿ ಗರಿಷ್ಠ 1.86 ಕೋಟಿ ವೀಕ್ಷಕರು ನೋಡಿದ್ದರು ಎಂಬ ಅಂಶದಿಂದ, ಜಿಯೋಸಿನಿಮಾದಲ್ಲಿ 2.4 ಕೋಟಿ ವೀಕ್ಷಕರ ಸಂಪೂರ್ಣ ಮಹತ್ವವನ್ನು ಅರಿತುಕೊಳ್ಳಬಹುದಾಗಿದೆ. ಪ್ರಸಕ್ತ ಐಪಿಎಲ್ ಟೂರ್ನಿ ಇನ್ನೂ ತನ್ನ ಲೀಗ್ ಹಂತದಲ್ಲಿದ್ದು (RCB vs CSK League match), ಜಿಯೋಸಿನಿಮಾ ಈಗಾಗಲೆ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಐಪಿಎಲ್-2023 ಫೈನಲ್ ಹಂತದತ್ತ ಸಾಗುತ್ತಿರುವಂತೆ, ಜಿಯೋಸಿನಿಮಾದಲ್ಲಿ ವೀಕ್ಷಕರ ಸಂಖ್ಯೆಯು ಹೊಸ ಎತ್ತರವನ್ನು ತಲುಪಲಿದೆ. ತನ್ನ ಸ್ಟ್ರೀಮಿಂಗ್ ಅಪ್ಲಿಕೇಶನ್ ಮೂಲಕ ಪ್ರತಿದಿನ ಲಕ್ಷಾಂತರ ಹೊಸ ವೀಕ್ಷಕರು ಐಪಿಎಲ್ ಪಂದ್ಯವನ್ನು ನೋಡುತ್ತಿದ್ದಾರೆ.

ಪ್ರಾಯೋಜಕರು ಮತ್ತು ಜಾಹೀರಾತುದಾರರ ವಿಷಯದಲ್ಲಿಯೂ ಜಿಯೋಸಿನಿಮಾ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಅಗ್ರ ಜಾಗತಿಕ ಮತ್ತು ಭಾರತೀಯ ಬ್ರ್ಯಾಂಡ್​​ಗಳು ಈಗಾಗಲೆ ಜಿಯೋಸಿನಿಮಾದತ್ತ ಆಕರ್ಷಿತವಾಗಿವೆ. ಟಿವಿಯನ್ನು ಬಿಟ್ಟು, ಜಿಯೋಸಿನಿಮಾ ಕೂಡ 23 ಪ್ರಮುಖ ಪ್ರಾಯೋಜಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

source https://tv9kannada.com/sports/cricket-news/jio-cinema-and-ipl-2023-rcb-vs-csk-league-match-on-april-17-witnessed-by-2-4-crore-people-sas-au4-558739.html

Views: 0

Leave a Reply

Your email address will not be published. Required fields are marked *