IPL Winners List 2023: ಐಪಿಎಲ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

IPL Winners List 2008 To 2023: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ ಸೀಸನ್ 16 ಗೆ ತೆರೆ ಬಿದ್ದಿದೆ. ಈ ಬಾರಿಯ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆಗಿದ್ರೆ ಕಳೆದ 15 ಸೀಸನ್​ ಐಪಿಎಲ್ ಇತಿಹಾಸದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ಯಾವುದು, ರನ್ನರ್ ಆದ ತಂಡ ಯಾವುದೆಂದು ನೋಡೋಣ...IPL 2022- ಗುಜರಾತ್ ಟೈಟಾನ್ಸ್: ಕಳೆದ ಸೀಸನ್​ ಐಪಿಎಲ್​ನಲ್ಲಿ ​ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಗುಜರಾತ್ ಟೈಟಾನ್ಸ್ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಕೇವಲ 130 ರನ್​ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 18.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಐಪಿಎಲ್​ ಹಾರ್ದಿಕ್ ಪಾಂಡ್ಯ ಪಡೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.IPL 2021-ಚೆನ್ನೈ ಸೂಪರ್ ಕಿಂಗ್ಸ್: ಐಪಿಎಲ್​ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್​ ವಿರುದ್ದ ಆಡಿದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು CSK 3 ವಿಕೆಟ್ ನಷ್ಟಕ್ಕೆ 192 ರನ್​ ಕಲೆಹಾಕಿತು. ಈ ಬೃಹಯ್ ಮೊತ್ತವನ್ನು ಬೆನ್ನತ್ತಿ ಕೆಕೆಆರ್​ 9 ವಿಕೆಟ್ ಕಳೆದುಕೊಂಡು 165 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸಿಎಸ್​ಕೆ 27 ರನ್‌ಗಳಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.IPL 2020-ಮುಂಬೈ ಇಂಡಿಯನ್ಸ್: 2020ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ 5 ವಿಕೆಟ್​ಗಳ ಗೆಲುವು ದಾಖಲಿಸುವ ಮೂಲಕ ಮುಂಬೈ ಇಂಡಿಯನ್ಸ್ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.IPL 2019-ಮುಂಬೈ ಇಂಡಿಯನ್ಸ್: ಐಪಿಎಲ್ 12ನೇ ಸೀಸನ್​ ಫೈನಲ್​ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಫೈನಲ್​ನ ಕೊನೆಯ ಎಸೆತದಲ್ಲಿ 1 ರನ್​ಗಳಿಂದ ಜಯಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಚಾಂಪಿಯನ್​ ಪಟ್ಟ ಅಲಂಕರಿಸಿದ್ದು ಇತಿಹಾಸ.IPL 2018-ಚೆನ್ನೈ ಸೂಪರ್ ಕಿಂಗ್ಸ್: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನಲ್ಲಿ ಎರಡಕ್ಕಿಂತ ಹೆಚ್ಚು ಟ್ರೋಫಿಗಳನ್ನು ಗೆದ್ದ ಎರಡನೇ ತಂಡವಾಗಿದೆ. 2018 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ದ ಗೆಲ್ಲುವ ಮೂಲಕ ಸಿಎಸ್​ಕೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.IPL 2017-ಮುಂಬೈ ಇಂಡಿಯನ್ಸ್: ಐಪಿಎಲ್ 2017 ರ ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಕೇವಲ ಒಂದು ರನ್​ಗಳಿಂದ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.IPL 2016-ಸನ್‌ರೈಸರ್ಸ್ ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 8 ರನ್‌ಗಳಿಂದ ಗೆದ್ದು ಎಸ್​ಆರ್​ಹೆಚ್ ಹೆಸರಿನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.IPL 2015-ಮುಂಬೈ ಇಂಡಿಯನ್ಸ್: 2015 ರ ಫೈನಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 41 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.IPL 2014-ಕೋಲ್ಕತ್ತಾ ನೈಟ್ ರೈಡರ್ಸ್: 2012ರ ಆವೃತ್ತಿಯ ಫೈನಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 199 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತುವ ಮೂಲಕ ಕೆಕೆಆರ್ ತಂಡವು 3 ವಿಕೆಟ್ ರೋಚಕ ಜಯದೊಂದಿಗೆ ಚಾಂಪಿಯನ್ ಪಟ್ಟಕ್ಕೇರಿತು.IPL 2013-ಮುಂಬೈ ಇಂಡಿಯನ್ಸ್: ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ದದ ಫೈನಲ್ ಪಂದ್ಯದಲ್ಲಿ 23 ರನ್​ಗಳ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.IPL 2012-ಕೋಲ್ಕತ್ತಾ ನೈಟ್ ರೈಡರ್ಸ್:ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್​ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.IPL 2011-ಚೆನ್ನೈ ಸೂಪರ್ ಕಿಂಗ್ಸ್: ಚನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಬ್ಯಾಕ್ ಟು ಬ್ಯಾಕ್ ಫೈನಲ್ಸ್ ಗೆದ್ದ ಮೊದಲ ತಂಡವಾಗಿದೆ. ಫೈನಲ್​ಲ್ಲಿ ಆರ್​ಸಿಬಿ ವಿರುದ್ದ 58 ರನ್​ಗಳಿಂದ ಜಯಗಳಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು.IPL 2010-ಚೆನ್ನೈ ಸೂಪರ್ ಕಿಂಗ್ಸ್: 2010ರ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 22 ರನ್​ಗಳಿಂದ ಸೋಲಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.IPL 2009-ಡೆಕ್ಕನ್ ಚಾರ್ಜರ್ಸ್: ಐಪಿಎಲ್​ನ 2ನೇ ಸೀಸನ್​ನ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು 6 ರನ್​ಗಳಿಂದ ಸೋಲಿಸುವ ಮೂಲಕ ಡೆಕ್ಕನ್ ಚಾರ್ಜರ್ಸ್​ (ಈಗಿನ ಎಸ್​ಆರ್​ಹೆಚ್​) ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.IPL 2008-ರಾಜಸ್ಥಾನ್ ರಾಯಲ್ಸ್: ಚೊಚ್ಚಲ ಐಪಿಎಲ್ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ 163 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಕೊನೆಯ ಎಸೆತದಲ್ಲಿ ಗೆಲ್ಲುವ ಮೂಲಕ ರೋಚಕ ಜಯ ಸಾಧಿಸಿ ಮೊದಲ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

source https://tv9kannada.com/photo-gallery/cricket-photos/ipl-winners-and-runner-up-list-checkout-the-indian-premier-league-winning-teams-from-2008-to-2023-in-kannada-zp-589005.html

Leave a Reply

Your email address will not be published. Required fields are marked *