ಐ ಆರ್ ಎಸ್ ಅಧಿಕಾರಿ ನೇತ್ರ ಪಾಲ್ ಅವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಕುರಿತು ಬರೆದಿರುವ ದಿ ಇನ್ ಸ್ಪೈರಿಂಗ್ ಅಂಬೇಡ್ಕರ್ (ಸ್ಪೂರ್ತಿದಾಯಕ ಅಂಬೇಡ್ಕರ್) ಪುಸ್ತಕವು ಭಾನುವಾರ ಬಿಡುಗಡೆಯಾಗಿದೆ.

ಐ ಆರ್ ಎಸ್ ಅಧಿಕಾರಿ ನೇತ್ರ ಪಾಲ್ ಅವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಕುರಿತು ಬರೆದಿರುವ ದಿ ಇನ್ ಸ್ಪೈರಿಂಗ್ ಅಂಬೇಡ್ಕರ್ (ಸ್ಪೂರ್ತಿದಾಯಕ ಅಂಬೇಡ್ಕರ್) ಪುಸ್ತಕವು ಭಾನುವಾರ ಬಿಡುಗಡೆಯಾಗಿದೆ. ಪರಿಶಿಷ್ಟರು ,ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಪಾಲಿನ ಪ್ರಜ್ಞಾವಲಯ ಆಗಿರುವ ‘ಅಹಿಂದ ಡಿಇಐ’ ಪ್ರಕಾಶನ ಸಂಸ್ಥೆಯು ಹೊರತಂದಿರುವ ಪುಸ್ತಕವನ್ನು ಬಾಬಾ ಸಾಹೇಬರ ಜಯಂತಿಯ ಲೋಕಾರ್ಪಣೆಗೊಳಿಸಲಾಯಿತು.
ಈ ಪುಸ್ತಕವು ಅಂಬೇಡ್ಕರ್ ಜೀವನ ಹೋರಾಟ ಮತ್ತು ಸಾಧನೆಗಳ ಅಭೂತಪೂರ್ವಗಳ ನೋಟವನ್ನು ಒಳಗೊಂಡಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಂಬ ಸಂಗತಿಗಳು ಜಾಗತಿಕ ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಪುಸ್ತಕವು ಅಂಬೇಡ್ಕರರ ತತ್ವಶಾಸ್ತ್ರ ಹಾಗೂ ಅವರ ದಾರ್ಶನಿಕತ್ವದ ಬಗ್ಗೆ ಹೊಸ ಬೆಳಕು ಚೆಲ್ಲುತ್ತದೆ. ಸಮಾಜದ ಮೇಲೆ ಅಂಬೇಡ್ಕರ್ ಪ್ರಭಾವ ಹೇಗೆ ಆಳವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ.
ಅಸಮರ್ಪಕ ಪ್ರಾತಿನಿಧ್ಯ ಮತ್ತು ದಕ್ಷತೆಯ ಬಗ್ಗೆ ಅಂಬೇಡ್ಕರ್ ಚಿಂತನೆಗಳನ್ನು ಈ ಕೃತಿ ಆಳವಾಗಿ ಎತ್ತಿ ತೋರಿಸುತ್ತದೆ. ಐತಿಹಾಸಿಕ ಸಂಶೋಧನೆಗಳು ಮತ್ತು ವೈಯಕ್ತಿಕ ಉಪ ವ್ಯಾಖ್ಯಾನಗಳ ಮೂಲಕ ಅಂಬೇಡ್ಕರರ ಜೀವನಗಾಥೆಯನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಹೋರಾಟದಿಂದ ಆಗುವ ಪ್ರಯೋಜನ ಅದರ ಅಗತ್ಯತೆಯನ್ನು ಸಾರಿ ಹೇಳುತ್ತದೆ. ವಿವಿಧ ಆಯೋಗಗಳ ಮುಂದೆ, ವಿವಿಧ ಸಂದರ್ಭಗಳಲ್ಲಿ ಅಂಬೇಡ್ಕರ್ ಅವರು ಮುಂದಿಟ್ಟಿರುವ ವಾದಗಳನ್ನು ಪುಸ್ತಕ ಮನೋಜ್ಞವಾಗಿ ವಿವರಿಸಿದೆ. ದೇಶದಲ್ಲಿ ಮೀಸಲು ಮತ್ತು ಜಾತಿ ವ್ಯವಸ್ಥೆ ಹೇಗೆ ರಚನೆಯಾಗಿದೆ ಹಾಗೂ ಅದು ಹೇಗೆ ಆತ್ಮದ ಚಿತ್ರಣವನ್ನು ವಿರೂಪ ಗೊಳಿಸುತ್ತದೆ ಎಂಬ ಕಲ್ಪನೆಯನ್ನು ಲೇಖಕರು ವಿಮರ್ಶೆಗೊಳಪಡಿಸಿದ್ದಾರೆ.
ಅಂಬೇಡ್ಕರರ ಆಳವಾದ ವಿಚಾರಧಾರೆಯು ಭಾರತದಲ್ಲಿನ ಅಸ್ಪೃಶ್ಯರಿಗೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಮಾನತೆಯ ಹೋರಾಟಕ್ಕೂ ಮುಖ್ಯವಾಗಿದೆ. ಪುಸ್ತಕವು ನಿಜವಾದ ಪುರಾವೆಗಳನ್ನು ಪ್ರಸ್ತುತಪಡಿಸುತ್ತದೆ. ಅಸ್ತಿತ್ವದಲ್ಲಿರುವ ಊಹೆಗಳನ್ನು ಸವಾಲಿಗೆ ಒಡ್ಡುತ್ತದೆ. ಸಂವಿಧಾನ ರಚನೆಯ ಆಚೆಗೆ ಅಂಬೇಡ್ಕರ್ ಕೊಡುಗೆಗಳ ಸಮಗ್ರ ವ್ಯಾಪ್ತಿಯನ್ನು ಒಳಗೊಂಡಿದೆ. ಒಟ್ಟಾರೆ 32 ಪುಟಗಳ ಈ ಪುಸ್ತಕದಲ್ಲಿ 31 ಅಧ್ಯಾಯಗಳಿವೆ. ಈ ಪುಸ್ತಕ ಎಲ್ಲಾ ಪ್ರಮುಖ ಪುಸ್ತಕ ಮಳಿಗೆ ಹಾಗೂ ಆನ್ಲೈನ್ ನಲ್ಲಿ ಖರೀದಿಗೆ ಲಭ್ಯವಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1
Views: 0