ನಿಮ್ಮ ಮಗು ಸುರಕ್ಷಿತವೇ? ಬ್ಲೂವೇಲ್ ಗೇಮ್ ಕುರಿತು ಪ್ರತಿಯೊಬ್ಬ ಪೋಷಕರು ಓದಲೇಬೇಕಾದ ವಿಶೇಷ ಲೇಖನ – ಚೇತನ್ ಕುಮಾರ್ ಸಿ

ಮಕ್ಕಳ ಹಿಡಿತದಲ್ಲಿ ಮೊಬೈಲ್ ಇದೆಯೋ? ಮೊಬೈಲ್ ಹಿಡಿತದಲ್ಲಿ ಮಕ್ಕಳಿದ್ದಾರೋ!?

✍️ ಲೇಖಕ: ಚೇತನ್ ಕುಮಾರ್ ಸಿ

ಚಿತ್ರದುರ್ಗ: ಹಲವು ವರ್ಷಗಳ ಹಿಂದೆ ‘ಬ್ಲೂವೇಲ್’ ಎನ್ನುವ ಹೆಸರಿನ ಆನ್ ಲೈನ್ ಗೇಮ್ ಮೂಲಕ ಪ್ರಪಂಚದಾದ್ಯAತ ಅನೇಕ ಯುವಕರು ಮತ್ತು ಮಕ್ಕಳು ಬಲಿಯಾಗಿದ್ದಾರೆ. ಇದು ಮಕ್ಕಳು ತಾವು ಮೊಬೈಲ್ ನಲ್ಲಿ ತಲ್ಲೀನರಾಗಿ ತೊಡಗಿಸಿಕೊಳ್ಳುವುದರ ಮೂಲಕ ಅದರೊಳಗೆ ಮುಳುಗಿರುತ್ತಾರೆ. ಆದರೆ ಮಕ್ಕಳು ಈ ರೀತಿಯಲ್ಲಿ ತೊಡಗಿಸಿಕೊಂಡಿರುವ ವಿಷಯದ ಲವಲೇಶವೂ ಪೋಷಕರಿಗೆ ಇಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಇತ್ತೀಚೆಗೆ ಬೆಂಗಳೂರಿನ ಪ್ರತಿಭಾವಂತ ಬಾಲಕನೊಬ್ಬ ಗೇಮಿಂಗ್ ಗೆ ಬಲಿಯಾದ ಘಟನೆಯನ್ನು ಕಂಡಿದ್ದೇವೆ. ಮಕ್ಕಳು ತಮ್ಮ ಏಕಾಗ್ರತೆಯನ್ನು ಮೊಬೈಲ್ ಗೇಮ್ ಗಳಿಗೆ ಮೀಸಲಿಡುವುದರ ಮೂಲಕ ಅದರ ದಾಸರಾಗುತ್ತಿದ್ದಾರೆ. ಆ ಗೇಮ್ ನಲ್ಲಿ ಬರುವ ಸವಾಲುಗಳನ್ನು ಸ್ವೀಕರಿಸಿ ತಾವು ಮಾಡಲು ಮುಂದಾಗುವುದರ ಮೂಲಕ ಅಂತಿಮವಾಗಿ ಸಾವಿಗೆ ಶರಣಾಗುತ್ತಿರುವುದು ದುಃಖದ ಸಂಗತಿ. ಆದರೆ ಇದಾವುದೂ ಪೋಷಕರ ಗಮನಕ್ಕೆ ಬರದಿರುವುದು ವಿಪರ್ಯಾಸದ ಸಂಗತಿ. ಕೊರೋನಾ ಕಾಲಘಟ್ಟದಲ್ಲಿ ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸಿದ ಪರಿಣಾಮ ಇದಾಗಿದೆ. ಇಂದು ಮಕ್ಕಳು, ಅತ್ತರೆ, ರಂಪಾಟ ಮಾಡಿದರೆ ಅವರ ಕೈಗೆ ಮೊಬೈಲ್ ಕೊಟ್ಟು ಸುಮ್ಮನಾಗಿಸುವುದು ಬಹುತೇಕ ಪೋಷಕರು ಕಂಡುಕೊAಡ ಮಾರ್ಗವಾಗಿದೆ. ಅಲ್ಲಿಗೆ ಒಂದಿಷ್ಟು ನೆಮ್ಮದಿ ಎಂದುಕೊAಡು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇದು ನಿಜಕ್ಕೂ ನಿಟ್ಟುಸಿರು ಬಿಡುವುದರ ಬದಲು ಅವರನ್ನು ನಿಬ್ಬೆರಗಾಗಿಸುವ ಸಂಗತಿಗಳು ನಡೆಯುತ್ತಿವೆ.

ಸಾಮಾನ್ಯವಾಗಿ ಮಕ್ಕಳ ಮನಸ್ಸು ಖಾಲಿ ಹಾಳೆಯಂತೆ ಅದರಲ್ಲಿ ಏನನ್ನು ಬರೆದರೂ ಅದು ಹಾಗೇ ಉಳಿಯುತ್ತದೆ ಎಂದುಕೊಳ್ಳುತ್ತೇವೆ. ಮೊಬೈಲ್ ವ್ಯಸನಿ ಮಕ್ಕಳ ಗುಣಲಕ್ಷಣಗಳೇ ವಿಭಿನ್ನವಾಗಿವೆ. ಸದಾ ಮೊಬೈಲ್ ಹಿಡಿದುಕೊಂಡು ಕೂಳಿತರೆ ಜಗತ್ತಿಗೂ ತಮಗೂ ಸಂಬAಧ ಇಲ್ಲದಂತಾಗುತ್ತಾರೆ. ಆ ಸಮಯದಲ್ಲಿ ಆಟ, ಊಟ ಪೋಷಕರು ಕೊನೆಗೆ ಯಾರೂ ಬೇಡ ಎಂದು ತಾವಾಯಿತು, ಮೊಬೈಲ್ ಗೇಮ್ ಆಯಿತು ಎನ್ನುವ ಹಾಗೇ ಇರುತ್ತಾರೆ. ಈ ಮಕ್ಕಳು ಯಾರೊಂದಿಗೂ ಬೆರೆಯದೇ ಅಂತರ್ಮುಖಿಯಾಗಿರುತ್ತಾರೆ. ಯಾರೊಂದಿಗೂ ಹೆಚ್ಚು ಮಾತಿಲ್ಲ, ಬೇರೆಯವರ ಮಾತನ್ನು ಕೇಳುವ ತಾಳ್ಮೆಯೂ ಇಲ್ಲ. ಆದರೆ ಕೋಪ, ಸಿಟ್ಟು, ಹಠದ ಗುಣಗಳು ಬಹುಬೇಗ ಬರುತ್ತದೆ. ಮನೆಗೆ ಯಾರಾದರು ಬಂದರೂ-ಹೋದರೂ ಇವರಿಗೇನು ವ್ಯತ್ಯಾಸವೆನಿಸುವುದಿಲ್ಲ. ಅರ‍್ಯಾರು ಬೇಕಿಲ್ಲ, ಅವರಿಂದ ಏನೂ ಆಗಬೇಕಾದಿಲ್ಲ ಎನ್ನುವುದನ್ನು ನಿರ್ಧರಿಸಿರುತ್ತಾರೆ. ಆದರೆ ಬಂದು ಹೋದವರಿಗೆ, ‘ಈ ಮಗು ಒಂಥರಾ ವಿಚಿತ್ರ ಎನಿಸುತ್ತದೆ. ಅಲ್ಲವೇ?’ ಎಂದು ತಮ್ಮ ಪರಿಚಿತದ ಬಳಗದಲ್ಲಿ ಹಂಚಿಕೊಳ್ಳುತ್ತಾರೆ. ಪೋಷಕರಿಗೆ ಈ ಮಾತನ್ನು ಹೇಳಲಾಗುವುದಿಲ್ಲ. ಏಕೆಂದರೆ ‘ಹೆತ್ತವರಿಗೆ ಹೆಗ್ಗಣ ಮುದ್ದು’ ಅನ್ನೋ ಹಾಗೇ ತಮ್ಮ ಮಕ್ಕಳ ಗುಣಾವಗುಣಗಳ ಬಗ್ಗೆ ಹೇಳಹೊರಟರೆ ಅವರು ತಮ್ಮ ಮಕ್ಕಳ ಪರವಹಿಸಿ ನಮ್ಮನ್ನೇ ಅನುಮಾನಿಸುತ್ತಾರೆ. ‘ನಮಗ್ಯಾಕೆ ಬೇಕು ಬಿಡಿ’ ಎಂದುಕೊAಡು ನಕ್ಕು ಸುಮ್ಮನಾಗುವವರೇ ಹೆಚ್ಚು. ಈ ರೀತಿ ವರ್ತನೆ ಕಂಡುಬAದಾಗ ಮಕ್ಕಳ ಮೇಲೆ ಪೋಷಕರು ಗದರುತ್ತಾರೆ. ಆ ಮಕ್ಕಳು ತಮ್ಮ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡರೆ ಇವರಿಗೆ ಹೆದರಿಕೆ, ತಳಮಳ. ಇರುವ ಒಂದೇ ಮಗು ಹೇಗಾದರೂ ಇರಲಿ. ಏನಾದರೂ ಹೆಚ್ಚುಕಡಿಮೆ ಮಾಡಿಕೊಂಡರೆ ಎಂಬ ಭಯದಿಂದಾಗಿ ಮಗು ತಪ್ಪು ಮಾಡುತ್ತಿದ್ದರೂ ಅದನ್ನು ಅಲ್ಲಿಗೆ ಮುಗಿಸುವ ಅಭ್ಯಾಸ ಪೋಷಕರು ಮಾಡಿಕೊಂಡಿರುವುದು ಮಕ್ಕಳಿಗೆ ತಮ್ಮ ಬಗ್ಗೆ ಏನಾದರೂ ಹೇಳಲು ಬಂದರೆ ಅವರನ್ನು ಹೆದರಿಸಿ ಇಟ್ಟುಕೊಳ್ಳುವ ಅಸ್ತçವಾಗಿ ಇದನ್ನು ಪ್ರಯೋಗಿಸುತ್ತಾರೆ.

ಇತ್ತೀಚೆಗೆ ‘ಕೊರಿಯನ್ ಲವರ್ ಗೇಮ್‘ ಎನ್ನುವುದರಲ್ಲಿ ಮುಳುಗಿದ್ದ ಉತ್ತರಪ್ರದೇಶದ ಗಾಜಿಯಾಬಾದ್ ನ ಕಟ್ಟಡವೊಂದರ 9ನೇ ಮಹಡಿಯಿಂದ ಮಕ್ಕಳು ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಎಂಬ ಸುದ್ಧಿಯನ್ನು ಕಂಡಾಗ ಇವರು ನಿಜಕ್ಕೂ ದುರ್ಬಲ ಮನಸ್ಸಿನವರೋ ಅಥವಾ ಪ್ರಾಣ ಕಳೆದುಕೊಳ್ಳಲು ಸಿದ್ಧರಾಗಿರಲು ಅದೆಷ್ಟು ದೃಢ ನಿರ್ಧಾರ ಮಾಡಿದ್ದಾರಲ್ಲ ಎನಿಸುತ್ತದೆ. ಚಟ್ಟಕಟ್ಟುವ ಚಟಗಳಾಗಿ ಈ ಮೊಬೈಲ ಗೇಮಿಂಗ್ ಗಳನ್ನು ನೋಡುತ್ತಿದ್ದೇವೆ. ಫ್ರೀಫೈರ್ ಗೇಮ್ ಆಡಲು ಅಮ್ಮ ಅವಕಾಶ ನೀಡುತ್ತಿಲ್ಲ ಆತ್ಮಹತ್ಯೆ, ಎಲ್ಲಾ ರೀತಿಯಲ್ಲೂ ಚಟುವಟಿಕೆಯಿಂದ ಮಗು, ‘ನನ್ನ ಬಗ್ಗೆ ಯೋಚನೆಬೇಡ ನಾನು ಸ್ವರ್ಗಕ್ಕೆ ಹೋಗುತ್ತೇನೆ’ ಎನ್ನವು ಮಾತು, ಗೇಮ್ ಆಡಿ ಪೋಷಕರ ಲಕ್ಷಾಂತರ ಹಣವನ್ನು ನಷ್ಟಮಾಡಿ ಅವರಿಗೆ ಹೆದರಿ ಮಾಡಿಕೊಂಡ ಆತ್ಮಹತ್ಯೆ, ಬ್ಲೂವೇಲ್ ಗೇಮ್ ನ ಒಂದು ಟಾಸ್ಕ್ ಮುಗಿಸಲು ಆತ್ಮಹತ್ಯೆ… ಹೀಗೇ ಸಾಲು ಸಾಲಾಗಿ ನೋಡುತ್ತ ಹೋದಲ್ಲಿ ಇದಕ್ಕೆ ಮಕ್ಕಳೇ ಬಲಿಯಾಗುತ್ತಿದ್ದಾರೆ.

ಅನೇಕ ಮಕ್ಕಳಿಗೆ ಏಕಾಂಗಿತನ ಕಾಡುತ್ತಿರಬಹುದು, ಅಥವಾ ಪೋಷಕರು ತಮ್ಮೆಡೆಗೆ ಗಮನ ನೀಡುತ್ತಿಲ್ಲ ಎಂಬ ಖಿನ್ನತೆಯಿಂದ ಬಳಲುತ್ತಿರಬಹುದು, ಇತರರೊಂದಿಗೆ ಹೋಲಿಸುವ ಮಾತುಗಳು, ನಾನು ಅವರಂತಿಲ್ಲ ಎಂಬ ಮನಸ್ಥಿತಿ, ಸದಾ ಕೆಲಸದಲ್ಲಿ ಮುಳುಗಿರುವ ಪೋಷಕರು, ಏನನ್ನೂ ಹಂಚಿಕೊಳ್ಳಲು ಯಾರೂ ಸಿಗದ ಸ್ಥಿತಿಯಿಂದಾಗಿ ‘ಮೊಬೈಲ್’ ಗೆ ದಾಸರಾಗಲು ಇರುವ ಮಾರ್ಗವಾಗಿಬಿಟ್ಟಿದೆ. ಈ ರೀತಿಯ ಮಕ್ಕಳು ಯಾವುದರಲ್ಲೂ ತೊಡಗಿಸಿಕೊಳ್ಳು ಆಸಕ್ತಿತೋರದೇ ದೂರವೇ ಉಳಿದು ಬಿಡುತ್ತಾರೆ. ಮೊಬೈಲ್ ಗೇಮ್ ಗಳಲ್ಲಿ ಬರುವ ಟಾಸ್ಕ್ ಗಳು, ಅಲ್ಲಿಯ ಚಾಲೆಂಜ್ ಗಳು ತನ್ನ ಬಗ್ಗೆ ತೋರುಸುವ ಕಾಳಜಿ ಎಂದೆನಿಸಿಕೊAಡು ಅವರು ಹೇಳುವ ಎಲ್ಲಾ ಮಾತುಗಳನ್ನು ಚಾಚೂತಪ್ಪದೇ ಪಾಲಿಸುತ್ತ, ಕಡೆಯದಾಗಿ ಅಲ್ಲಿ ಬರುವ ಸೂಚನೆಯಂತೆ ‘ಸಾವು ನನ್ನನ್ನು ದೂರ ಮಾಡುವುದಿಲ್ಲ, ಇದರ ಆಚೆಗೂ ಒಂದು ಜೀವನವಿದೆ ಅಲ್ಲಿ ತಾನು ಸುಖವನ್ನು ಅನುಭವಿಸಬಹುದು ಎಂಬ ಭ್ರಮಾಲೋಕದಲ್ಲಿರುತ್ತಾರೆ.

ಉತ್ತರಪ್ರದೇಶದ ಈ ಸಹೋದರಿಯರು ತಾವು ಕೊರಿಯಾದ ರಾಜಕುಮಾರಿಯರು ಎನ್ನುವಂತೆ ನಡೆದುಕೊಳ್ಳುತ್ತ , ತಮ್ಮ ಹೆಸರನ್ನು ಕೊರಿಯಾದ ಹೆಸರಿನಂತೆ ಬದಲಾಯಿಸಿಕೊಂಡು ತಾವೇ ಕರೆದುಕೊಳ್ಳುತ್ತ, ಇಲ್ಲಿಯ ಸಂಸ್ಕೃತಿಗಿAತ ಕೊರಿಯಾ ಸಂಸ್ಕೃತಿಯೇ ಚೆಂದವೆAದುಕೊAಡು, ಅದೇ ನಮಗೆ ಪ್ರೇಮ, ನಮ್ಮ ಜೀವನವೇ ಕೊರಿಯಾದಲ್ಲಿದೆ ಎನ್ನುವಷ್ಟರ ಮಟ್ಟಿಗೆ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುತ್ತಾರೆಂದರೆ ಮೊಬೈಲ್ ನಲ್ಲಿ ಯಾವ ಪರಿಯಲ್ಲಿ ಮುಳುಗಿದ್ದಾರೆ ಎಂಬುದಕ್ಕೆ ಬೇರೆ ವಿವರಬೇಕಿಲ್ಲ ಎನಿಸುತ್ತದೆ.

ಮಕ್ಕಳ ಆತ್ಮಹತ್ಯೆಗೆ ಮೊಬೈಲ್ ಗೇಮ್ ಗಳು ಹೆಚ್ಚು ಪ್ರೇರಣೆ ನೀಡಿರುವ ಹಲವಾರು ಸುದ್ಧಿಗಳನ್ನು ಕೇಳಿದ್ದರೂ, ಓದಿದ್ದರೂ ‘ನಮ್ಮ ಮಕ್ಕಳು ಹಾಗಿಲ್ಲ ಬಿಡಿ. ನಮಗೆ ಚೆನ್ನಾಗಿ ಗೊತ್ತು’ ಎಂದ ಪೋಷಕರೇ ‘ನಮ್ಮ ಮಗು ಹೀಗೆ ಮಾಡ್ತಾ ಇತ್ತು ಅನ್ನೋದು ನಮಗೆ ಗೊತ್ತೇ ಆಗಲಿಲ್ಲ. ಗೊತ್ತಾಗಿದ್ದರೆ ನಾವು ಹೇಗಾದರೂ ಅದರಿಂದ ಮಾಡಿ ನಮ್ಮ ಮಗುವನ್ನು ನಾವು ಕಾಪಾಡಿಕೊಳ್ತಾ ಇದ್ದೆವು’ ಎಂದು ಗೋಳಾಡುವಾಗ ಅಯ್ಯೋ ಎನಿಸುತ್ತದೆ. ಆದರೆ ಆಗಿಹೋಗಿರುವುದುನ್ನು ಬದಲಾಯಿಸಲು ಸಾಧ್ಯವಿಲ್ಲವಲ್ಲ.

ಈ ರೀತಿಯ ಹಲವಾರು ಘಟನೆಗಳನ್ನು ಕಂಡ ನಂತರವೂ ನಮ್ಮ ಮಕ್ಕಳ ಬಗ್ಗೆ ಗಮನ ಹರಿಸದಿದ್ದರೆ ಇನ್ನೆಷ್ಟು ಮಕ್ಕಳು ಬಲಿಯಾಗಬೇಕೋ? ಅದಕ್ಕೆ ಆಸ್ಪದ ನೀಡದೆ ಇಂದಿನಿAದಲೇ ನಿಮ್ಮ ವ್ಯಹವಾರ, ಉದ್ದಿಮೆ, ಕೆಲಸ, ಒತ್ತಡ ಇವೆಲ್ಲದರ ನಡುವೆಯೂ ನಿಮ್ಮ ಮಕ್ಕಳಿಗಾಗಿ ಒಂದಷ್ಟು ಸಮಯ ಮೀಸಲಿಡಿ, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಮೊಬೈಲ್ ನಲ್ಲಿ ಮಕ್ಕಳು ಏನೇನು ನೋಡುತ್ತಿದ್ದಾರೆ ಎಂಬುದರ ಬಗ್ಗೆ ಗಮನವಿಡಿ, ಒಳಿತಿನ ರೀತಿಯಲ್ಲಿ ಮೊಬೈಲ್ ಬಳಕೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿ, ಅವರ ಜೊತೆಗೆ ನೀವು ಮಕ್ಕಳಾಗಿ ಆಟ ಆಡಿ, ಒಟ್ಟಿಗೆ ಸೇರಿ ಅಡುಗೆ ಮಾಡುವುದೋ, ಗಿಡಗಳಿಗೆ ನೀರು ಹಾಕುವುದು, ಮನೆಯ ಸ್ವಚ್ಛತೆ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಜೊತೆಯಾಗಿ ಇದ್ದೇವೆ ಎಂಬುದನ್ನು ಅಥೈಸಿ. ಏನೇ ಇದ್ದರೂ ನಿಮ್ಮೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಪ್ರೇರೇಪಿಸಿ. ಆಗಾಗ ಮಕ್ಕಳಿಗೆ ಆಪ್ತಸಮಾಲೋಚಕರೊಂದಿಗೆ ಮಾತನಾಡಿಸಿ, ಇವೆಲ್ಲವೂ ಏನು ಮಹಾ ಬದಲಾವಣೆ ಉಂಟು ಮಾಡಿಬಿಡುತ್ತವಾ? ಎಂದೆನಿಸಬಹುದು. ಆದರೆ ನೆನಪಿರಲಿ ಎಲ್ಲವೂ ಕೈಮೀರಿದ ಹಂತಕ್ಕೆ ಹೋಗುವುದಕ್ಕಿಂತಲೂ ಅದು ನಮ್ಮ ಹಿಡಿತದಲ್ಲಿ ಇದ್ದಾಗ ವಹಿಸುವ ಒಂದಿಷ್ಟು ಕಾಳಜಿಯು ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದಲ್ಲವೇ? ಪರೀಕ್ಷೆಯಲ್ಲಿ ಮಕ್ಕಳು ಫೇಲ್ ಆದಾಗ ‘ನಮ್ಮ ಮಕ್ಕಳು’ ಎಂದುಕೊಳ್ಳುವ ನಾವು ಆ ಮಕ್ಕಳು ಜೀವನದಲ್ಲಿ ಫೇಲ್ ಆಗದಂತೆ ನೋಡಿಕೊಳ್ಳಬೇಕಿದೆಯಲ್ಲವೇ…

ಚೇತನ್ ಕುಮಾರ್ ಸಿ
ಗ್ರಂಥಪಾಲಕರು
ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಗಳು
ಚಿತ್ರದುರ್ಗ

Leave a Reply

Your email address will not be published. Required fields are marked *