ಬಾಹ್ಯಾಕಾಶದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ, ಇಲ್ಲಿದೆ ಆದಿತ್ಯ ಎಲ್1 ಕಳುಹಿಸಿದ ಗುಡ್ ನ್ಯೂಸ್

Aditya L1 Good News: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇದಾದ ನಂತರ ಆದಿತ್ಯ L-1 ಅನ್ನು ಸಹ ಸೂರ್ಯನ ಅಧ್ಯಯನಕ್ಕೆ ಉಡಾವಣೆ ಮಾಡಲಾಗಿದ್ದು, ಇದೀಗ ಈ ಆದಿತ್ಯ L1 ನಿಂದ ಒಳ್ಳೆಯ ಸುದ್ದಿ ಬಂದಿದೆ. Technology News In Kannada  

ಬೆಂಗಳೂರು:  ಭಾರತದ ಸನಾತನ ಸಂಪ್ರದಾಯದಲ್ಲಿ 9 ಗ್ರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅನೇಕ ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ಮಂತ್ರಗಳು ಸ್ವತಃ ವಿಜ್ಞಾನ ಎಂದು ನಂಬುತ್ತಾರೆ. ಏತನ್ಮಧ್ಯೆ, ಭಾರತೀಯ ವಿಜ್ಞಾನಿಗಳು ತಮ್ಮ ಜ್ಞಾನದಿಂದ ಇಡೀ ವಿಶ್ವದಲ್ಲಿ ತಮ್ಮ ಛಾಪನ್ನು ಬಿಟ್ಟು ಅದನ್ನು ಗೆಲ್ಲುವ ಕನಸು ಕಂಡಿದ್ದಾರೆ ಎಂಬಂತೆ ತೋರುತ್ತಿದೆ ಈ ಸರಣಿಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದರ ನಂತರ ಒಂದರಂತೆ ವಿವಿಧ ಗ್ರಹಗಳಲ್ಲಿ ಯಶಸ್ಸಿನ ಪತಾಕೆಗಳನ್ನು ನೆಡುತ್ತಿದೆ. ಚಂದ್ರಯಾನ-3 ರ ಯಶಸ್ಸಿನ ನಂತರ, ಈ ವರ್ಷ ಸೆಪ್ಟೆಂಬರ್ 2 ರಂದು, ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದ್ದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದೀಗ ಇಸ್ರೋ ಈ ಸೌರ ಮಿಷನ್ ಬಗ್ಗೆ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ.

ಮತ್ತೊಂದು ಇತಿಹಾಸ ಸೃಷ್ಟಿಸಿದ ಇಸ್ರೋ
ಆದಿತ್ಯ ಎಲ್1 ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಇದು ಭೂಮಿಯ ಪ್ರಭಾವದ ಗೋಳವನ್ನು ಯಶಸ್ವಿಯಾಗಿ ದಾಟುವ ಮೂಲಕ ಈ ದೂರವನ್ನು ಕ್ರಮಿಸಿದೆ. ಈಗ ಅದು ಸೂರ್ಯ-ಭೂಮಿಯ ಲಗ್ರೇಂಜ್ ಪಾಯಿಂಟ್ 1 (L-1) ಕಡೆಗೆ ಚಲಿಸುತ್ತಿದೆ. ಇಸ್ರೋ ಸತತ ಎರಡನೇ ಬಾರಿಗೆ ಭೂಮಿಯ ಪ್ರಭಾವದ ವ್ಯಾಪ್ತಿಯಿಂದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಮಾರ್ಸ್ ಆರ್ಬಿಟರ್ ಮಿಷನ್‌ನೊಂದಿಗೆ ಸಂಸ್ಥೆ ಮೊದಲ ಬಾರಿಗೆ ಇದನ್ನು ಸಾಧಿಸಿತ್ತು.

ಮಿಷನ್ ಬಗ್ಗೆ ಇಲ್ಲಿದೆ ಮಾಹಿತಿ
ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)-ಸಿ 57 ಮೂಲಕ ಸೆಪ್ಟೆಂಬರ್ 2 ರಂದು ದೇಶದ ಮೊದಲ ಸೂರ್ಯ ಮಿಷನ್ ಅಡಿಯಲ್ಲಿ ಇಸ್ರೋ ‘ಆದಿತ್ಯ ಎಲ್ 1’ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ‘ಆದಿತ್ಯ L1’ 7 ಪೇಲೋಡ್‌ಗಳನ್ನು ತನ್ನೊಂದಿಗೆ ಕೊಂಡೊಯ್ಯುತ್ತಿದೆ, ಇದರಲ್ಲಿ 4 ಸೂರ್ಯನ ಬೆಳಕನ್ನು ವೀಕ್ಷಿಸಲಿವೆ ಮತ್ತು ಉಳಿದ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರದ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿವೆ.

‘ಆದಿತ್ಯ L1’ ಸುಮಾರು 15 ಲಕ್ಷ ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ ಮತ್ತು ಸೂರ್ಯನಿಗೆ ಸಮೀಪವಿರುವ ‘L1’ ಬಿಂದುವಿನ ಸುತ್ತ ‘ಹಾಲೋ’ ಕಕ್ಷೆಯನ್ನು ಇದು ತಲುಪಲಿದೆ. ಇದು ಅದೇ ಸಾಪೇಕ್ಷ ಸ್ಥಾನದಲ್ಲಿ ಸೂರ್ಯನ ಸುತ್ತ ಸುತ್ತಲಿದ್ದು,  ಅಲ್ಲಿನ ಅದು ಸೂರ್ಯನ ನಿರಂತರ ವೀಕ್ಷಣೆ ನಡೆಸಲಿದೆ.

Source : https://zeenews.india.com/kannada/technology/isro-established-one-more-milestone-in-space-aditya-l1-sends-this-good-news-161899

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *