ಭಕ್ತರ ಭಕ್ತಿಗೆ ಮೆಚ್ಚಿ ಶೀಘ್ರವಾಗಿ ವರ ನೀಡುವ ದೇವರೆಂದರೆ ಅದು ಶಿವ ಮಾತ್ರ : ಶ್ರೀ ಶಿವಲಿಂಗಾನಂದ ಶ್ರೀಗಳು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 27 : ಭಕ್ತರ ಭಕ್ತಿಗೆ ಮೆಚ್ಚಿ ಶೀಘ್ರವಾಗಿ ವರವನ್ನು ನೀಡುವ ಯಾವುದಾದರೂ ದೇವರು ಇದ್ದಾರೆ ಎಂದು ಅದು ಶಿವ ಮಾತ್ರ ಎಂದು
ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ 95ನೇ ಮಹಾ ಶಿವರಾತ್ರಿ
ಮಹೋತ್ಸವದ ಐದನೇ ದಿನದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದು ಶಿವರಾತ್ರಿ ಅಂದರೆ ವರ್ಷದ 364
ದಿನಗಳು ನಮ್ಮ ರಾತ್ರಿಯಾದರೆ ಈ ಒಂದು ದಿನ ಮಾತ್ರ ಶಿವನಿಗೆ ಮೀಸಲಾಗಿದೆ ಇಲ್ಲಿ ಶಿವನ ಸ್ಮರಣೆಯನ್ನು ಮಾಡುವುದರ
ಮೂಲಕ ಆತನ ಕೃಪೆಗೆ ಪಾತ್ರರಾಗಬೇಕಿದೆ. ಶಿವ ಯಾವ ಅಡಂಬರವನ್ನು ಸಹಾ ಬೇಡುವುದಿಲ್ಲ ಆತ ಸದಾ ಸರಳವಾದ ದೇವನಾಗಿದ್ದಾನೆ, ಆತನ ಪೂಜೆಯೂ ಸಹಾ ಸರಳವಾಗಿದೆ ಬಿಲ್ವ ಪತ್ರೆಯೊಂದಿಗೆ ಪೂಜೆಯನ್ನು ಮಾಡಿದರೆ ಸಾಕು ಅತ ಭಕ್ತರಿಗೆ
ಒಲಿಯುತ್ತಾನೆ ಶಿವನ ಪೂಜೆಯಲ್ಲಿ ತಲೀನವಾದಾಗ ಆತ ಶೀಘ್ರವಾಗಿ ಭಕ್ತರಿಗೆ ಒಲಿಯುತ್ತಾನೆ. ಅವರ ಇಷ್ಠಾರ್ಥಗಳನ್ನು
ಈಡೇರಿಸುತ್ತಾನೆ ಎಂದರು. ಬೇರೆ ದೇವರುಗಳು ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವಲ್ಲಿ ವಿಚಾರವನ್ನು ಮಾಡುತ್ತಾರೆ ಆದರೆ ಶಿವ ತನ್ನ ಭಕ್ತರಿಗೆ ವರವನ್ನು ನೀಡುವಲ್ಲಿ ಯಾವುದೆ ತಡ ಮಾಡದೇ ಶೀಘ್ರವಾಗಿ ವರವನ್ನು ನೀಡುತ್ತಾನೆ, ಅವರ ಇಷ್ಠಾರ್ಥಗಳನ್ನು ಈಡೇರಿಸುತ್ತಾನೆ ಇದಕ್ಕೆ ಅತನ
ಮೇಲೆ ಭಕ್ತಿಯೊಂದು ಇರಬೇಕಿದೆ. ಶಿವನ್ನು ಶ್ರದ್ದೆಯಿಂದ ಪೂಜಿಸಿದರೆ ಮಹಾ ಶಕ್ತಿ ಲಭ್ಯವಾಗುತ್ತದೆ. ಮಹಾ ಶಿವರಾತ್ರಿಯಂದು ಆತನನ್ನು ಧ್ಯಾನ, ಭಜನೆಯನ್ನು ಮಾಡುವುದರ ಮೂಲಕ ಒಲಿಸಿಕೊಳ್ಳಬಹುದಾಗಿದೆ ಎಂದು ಶ್ರೀಗಳು ತಿಳಿಸಿದರು.

ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀಗಳು ಮಾತನಾಡಿ, ಶಿವನಾಮ ಸ್ಮರಣೆಯನ್ನು ಮಾಡುವುದರ
ಮೂಲಕ ಶಿವರಾತ್ರಿಯಂದು ಶಿವನ ಆರಾಧಣೆಯನ್ನು ಮಾಡಬೇಕಿದೆ. ಶಿವನಾಮ ಸಪ್ತಾಹವನ್ನು ಆಚರಣೆ ಮಾಡುವುದರ ಮೂಲಕ
ಕಬೀರಾನಂದಾಶ್ರಮದ ಶ್ರೀಗಳು ಭಕ್ತರನ್ನು ಶಿವನ ಬಳಿ ಕರೆದ್ಯೂತ್ತಿದ್ದಾರೆ. ಕಬೀರಾನಂದಾಶ್ರಮ ಮಾತು ಬರುವವರಿಗೂ ಹಾಗೂ
ಮಾತು ಬಾರದವರಿಗೂ ಸಹಾ ಆಶ್ರಯವನ್ನು ನೀಡಿದೆ. ಇದ್ದಲ್ಲದೆ ನೊಂದವರಿಗೂ ಸಹಾ ನೆರವಿನ ಹಸ್ತವನ್ನು ನೀಡಿದೆ. ಭಕ್ತರ
ಸಂಕಷ್ಠಕ್ಕೆ ಶ್ರೀಗಳು ಸ್ಪಂದಿಸುತ್ತಿದ್ದಾರೆ ಎಂದರು.

ಶಾಸಕರಾದ ಎಂ.ಚಂದ್ರಪ್ಪ ಮಾತನಾಡಿ, ಸಮಾಜದಲ್ಲಿನ ಅಂಕು ಡೂಂಕುಗಳನ್ನು ತಿದ್ದುವ ಕಾರ್ಯವನ್ನು ಈ ಆಶ್ರಮ ಮಾಡುತ್ತಿದೆ.
ಶಿಕ್ಷಣ, ದಾಸೋಹ, ಧರ್ಮ ಪ್ರಸಾರ, ಗೋವುಗಳಿಗೆ ಆಶ್ರಯವನ್ನು ನೀಡುವಂತ ಕಾರ್ಯವನ್ನು ಶಿವಲಿಂಗಾನಂದ ಶ್ರೀಗಳು
ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಜಾತಿ, ಧರ್ಮ ಜನಾಂಗ ಎಂದು ನೀಡದೇ ಎಲ್ಲರನ್ನು ಸಹಾ ಆರ್ಶೀವದಿಸುವ ಕಾರ್ಯವನ್ನು
ಶ್ರೀಗಳು ಮಾಡುತ್ತಿದ್ದಾರೆ ಎಂದ ತಿಳಿಸಿದರು.

95ನೇ ಮಹಾ ಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾದ ವಿಜಯಕುಮಾರ್ ಮಾತನಾಡಿ, ಇಲ್ಲಿ ಈ ಹಿಂದೆ ಗೋಶಾಲೆ ಇತ್ತು
ಗೋವುಗಳನ್ನು ಸಂರಕ್ಷಣೆ ಮಾಡುವ ಕಾರ್ಯವಾಗುತ್ತಿತ್ತು ಆದರೆ ಈಗ ಇದು ಪಾಠಶಾಲೆಯಾಗಿದೆ ಮಕ್ಕಳಿಗೆ ಅಕ್ಷರ ದಾಸೋಹವನ್ನು
ಮಾಡುವುದರ ಮೂಲಕ ಪ್ರಜ್ಞಾವಂತರನ್ನಾಗಿ ಮಾಡಲಾಗುತ್ತಿದೆ. ಶಿವಲಿಂಗಾನಂದ ಶ್ರೀಗಳ ಹೆಸರಿನಲ್ಲೇ ಶಿವನಿದ್ದಾನೆ, ಶ್ರೀಗಳು
ಪ್ರಮಾಣಿಕವಾದ ಭಕ್ತರನ್ನು ಸಂಪಾದಿಸಿದ್ದಾರೆ. ಅನಾಥರಿಗೆ ಸ್ಫಂದಿಸಿ ಮೂಕ ಪ್ರಾಣಿಗಳಿಗೆ ದಾರಿಯನ್ನು ತೋರಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪರಿಸರಾಮೃತ ರಾಜ್ಯ ಪ್ರಶಸ್ತಿ ವಿಜೇತರಾದ ಎ.ಜಯರಾಮಯ್ಯ, ಹಾಗೂ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕøತರಾದ ಟಿ.ಸೋಮೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಹಾವೇರಿಯ ಕೂಸನೂರಿನ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಶ್ರೀಗಳು
ವಹಿಸಿದ್ದರು. ನಗರಸಭಾ ಸದಸ್ಯರಾದ ವೆಂಕಟೇಶ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಪಿವಿಎಸ್
ಆಸ್ಪತ್ರೆಯ ಡಾ.ಶೀಧರ ಮೂರ್ತಿ, ಭಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶೀ ಕೆ.ಎಂ.ವಿರೇಶ್, ನಿವೃತ್ತ ಇಂಜಿನಿಯರ್ ವಾಗೀಶ್,
ಶಿವಮೊಗ್ಗದ ಬೆನಕಪ್ಪ, ಧರ್ಮ ಪ್ರಸಾದ್, ರಾಮಮೂರ್ತಿ, ಕೆಡಿಪಿ ಸದಸ್ಯರಾದ ನಾಗರಾಜ್ ಸಿದ್ದವ್ವನಹಳ್ಳಿ ಪರಮೇಶ್, ಬದರಿನಾಥ್
ಸೇರಿದಂತೆ ಇತರರು ಭಾಗವಹಿಸಿದ್ದರು.

ಶ್ರೀ ಶಾರಾದ ಮೆಲೋಡಿಸ್ ರವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸುಬ್ರಾಯ ಭಟ್ಟರು ವೇದ ಘೋಷ ಮಾಡಿದರೆ,
ಶ್ರೀಕಾಂತ ಪ್ರಾರ್ಥಿಸಿದರು, ನಿರಂಜನ ಮೂರ್ತಿ ಸ್ವಾಗತಿಸಿದರು ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *