
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 13: ಸಂಗೀತಕ್ಕೆ ಮೂಲ ಬೇರು ಜನಪದ. ಈ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಮದಕರಿ ಯುವಕ ಸಂಘ ರಿ. ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ,
ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದ ಅವರು, ಗ್ರಾಮೀಣ ಸೊಗಡಿನ ಜನಪದ ಕಲೆಗಳಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ. ಜನಪದ ಕಲೆಗಳು
ಉಳಿದಿರುವುದು ತಳ ಸಮುದಾಯದವರಿಂದ ಮಾತ್ರ ಜನಪದ ಕಲೆಗಳು ಗ್ರಾಮೀಣ ಭಾರತದ ಸಂಸ್ಕೃತಿಯ ಸೊಗಡಾಗಿವೆ.
ಅವುಗಳ ಉಳಿವಿನ ಜವಾಬ್ದಾರಿಯನ್ನು ಇವತ್ತಿಗೂ ತಳ ಸಮುದಾಯಗಳೇ ಹೊತ್ತಿವೆ. ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೂ
ಉಳಿಸಿ ಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಪ್ರಾಚೀನ ಮತ್ತು ಗ್ರಾಮೀಣ ಭಾರತದ ಸೊಗಡಾಗಿರುವ ಜನಪದ ಕಲೆಗಳ ಪ್ರಾರಂಭ ಮತ್ತು ಅವುಗಳ ಉಳಿವು ತಳ ಸಮುದಾಯದವರಿಂದ ಮಾತ್ರ ಸಾಧ್ಯ ಜಾನಪದ ಕಲೆಗಳು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ
ವರ್ಗಾವಣೆಯಾಗುವ ಸಾಂಸ್ಕೃತಿಕ ಬೇರುಗಳು, ಬೀಸುವಾಗ, ಕುಟ್ಟುವಾಗ ಹಾಡುವ ಪದಗಳು, ಸೋಬಾನೆ ಪದಗಳು, ಗೊರವರ ಕುಣಿತ, ಬೀಸುವ ಕಲ್ಲಿನ ಪದಗಳು, ಚೌಡಿಕೆ ಪದ, ತಮಟೆ ವಾದ್ಯ, ಭಜನೆ, ಕೋಲಾಟ, ಬದುಕಿನಲ್ಲಿ ಹೊಂದಾಣಿಕೆ, ಭಾವೈಕ್ಯ ತರುವ
ಮೂಲಕ ಸಾಮಾಜಿಕ ಸಂಬಂಧ ಗಟ್ಟಿಗೊಳಿಸಲಿದೆ ಎಂದು ತಿಳಿಸಿದರು.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎ.ನಾಗರಾಜ್, ಮಾತನಾಡಿ, ಜಾಗತೀಕರಣ, ಖಾಸಗೀಕರಣ ಮತ್ತು ಆಧುನೀಕರಣದಿಂದ ಜಾನಪದ ಕಲೆಗಳು ಕಣ್ಮರೆಯಾಗಿದ್ದು, ದೇಶೀಯ ಭಾಷೆ ಮತ್ತು ಸಂಸ್ಕೃತಿಗೆ ಪೆಟ್ಟು ಬಿದ್ದಿದೆ. ಮೊಬೈಲ್, ಜಾಲತಾಣದ ಹಾವಳಿಯಿಂದ ಸಾಮಾಜಿಕ ಸಂಬಂಧ, ಮಾನವೀಯತೆ ಮರೆಯಾಗಿದೆ. ಸಾಹಿತ್ಯ, ಸಂಗೀತ, ರಂಗಕಲೆ ಕಡೆ ಬಂದಾಗ ಜನರು ಮಾನಸಿಕ ಪಡೆಯುತ್ತಾರೆ. ಮಕ್ಕಳನ್ನು ಕಾಳಜಿಯಿಂದ ನೆಮ್ಮದಿ ಇಲ್ಲವಾದರೆ ಅಡ್ಡ ದಾರಿ ತುಳಿಯುವ ಕ್ಷಣಗಳು
ಇರುತ್ತವೆ. ಮುನ್ನೆಚ್ಚರಿಕೆಯಿಂದ ಮಕ್ಕಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಮೊದಲಿನಿಂದಲೂ ಎಲ್ಲಾ ಪೂಜಾ ಕಾರ್ಯಗಳು, ರಥೋತ್ಸವಗಳು, ದೇವರ ಮೆರವಣಿಗೆಗಳು ಜನಪದ ಕಲೆಗಳಿಲ್ಲದೇ
ನಡೆಯುತ್ತಿರಲಿಲ್ಲ ತಮ್ಮ ಜೀವನದ ಆಸರೆ, ಬೇಸರ ಕಳೆಯಲು ಸಂಜೆಯ ಬಿಡುವಿನ ಸಮಯದಲ್ಲಿ ಹಾಡು, ಅಭಿನಯದ ಮೂಲಕ
ಜಾನಪದ ಕಲೆ, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ಪೂಜಾಕುಣಿತ, ಪಟ ಕುಣಿತ, ಕೊಂಬು ಕಹಳೆ, ಯಕ್ಷಗಾನ, ನಡೆಯುತ್ತವೆ
ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಡಿ.ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಪ್ರಾಚೀನ ಕಾಲದ ಜನರು ತಮ್ಮ ಜೀವನದ
ಆಸರೆ, ಬೇಸರ ಕಳೆಯಲು ಸಂಜೆಯ ಬಿಡುವಿನ ಸಮಯದಲ್ಲಿ ಹಾಡು, ಅಭಿನಯದ ಮೂಲಕ ಪ್ರಾರಂಭಿಸಿದ ಕಲೆ ಜನರಿಂದ ಜನರಿಗೆ,
ಬಾಯಿಂದ ಬಾಯಿಗೆ ಮುಂದುವರೆದು ಜನಪದವಾಯಿತು. ಜನಪದ ಕಳೆಯು ಪ್ರಾಚೀನ ಗ್ರಾಮೀಣ ಭಾರತದ ತಾಯಿಬೇರಾಗಿದೆ
ಎಂದು ತಿಳಿಸಿದರು.
ಸಂಗೀತವು ಕಾರ್ಯಕ್ಷಮತೆ, ಆರೋಗ್ಯ, ನೆಮ್ಮದಿ, ಯೋಗಕ್ಷೇಮ, ಏಕಾಗ್ರತೆ ಮತ್ತು ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯ
ಮಾಡುತ್ತದೆ. ಅಲ್ಲದೆ ಅಪಾರ ಶಾಂತಿಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಗೀತ ಕಲೆಯನ್ನು
ಮೈಗೂಡಿಸಿಕೊಂಡು ಸಂಸ್ಕಾರವಂತರಾಗಬೇಕು ಸಂಗೀತ ಕಲಾ ಪ್ರಕಾರಗಳನ್ನು ಅರಿತುಕೊಂಡು ಕಲೆ ಮತ್ತು ಕಲಾವಿದರನ್ನು
ಪೋಷಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವದ್ದಿಕೆರೆಯ ಶ್ರೀ ಗುರು ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜು, ರಾಜ್ಯ ಯುವ ಪ್ರಶಸ್ತಿ
ಪುರಸ್ಕøತರಾದ, ಶ್ರೀನಿವಾಸ್ ಮಳಲಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಗಾರಡಿ ಗೊಂಬೆ, ಕೀಲು ಕುದುರೆ, ನವಿಲು ಕುಣಿತ,
ಜಾನಪದ ಸಂಗೀತ, ಭಜನೆ, ಕೋಲಾಟ, ಕಹಳೆ, ಗೊರವ ಕುಣಿತ ತತ್ವ ಪದಗಳ ಗಾಯನ ಕಾರ್ಯಕ್ರಮ ನಡೆಯಿತು. ಮದಕರಿ
ಯುವಕ ಸಂಘದ ಅಧ್ಯಕ್ಷರಾದ ಸೋಮಶೇಖರ್ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾಗಿ ನೇಮಕವಾಗಿರುವ ಡಾ.ಜೆ.ಕರಿಯಪ್ಪ
ಮಾಳಿಗೆಯವರನ್ನು ಮದಕರಿ ಯುವಕ ಸಂಘದಿಂದ ಸನ್ಮಾನಿಸಲಾಯಿತು.