ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ, ಜುಲೈ 12:
ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವುದು, ಕ್ರೀಡೆಯನ್ನು ಬೆಳೆಯಲು ಸಹಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಕರೆ ನೀಡಿದರು.

ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ಬೆಂಗಳೂರು) ಹಾಗೂ ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 25 ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ 2025 – ಪ್ರೀಮಿಯರ್ ಲೀಗ್ ಸೀಜನ್–4 ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು.
🔸 ಶ್ರೀಗಳ ಸಂದೇಶ:
“ಚಿತ್ರದುರ್ಗದ ಕ್ರೀಡಾ ಪಟುಗಳು ಸಾಕಷ್ಟು ಪ್ರತಿಭಾಶಾಲಿಗಳಾಗಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಕ್ರೀಡೆಗಳಲ್ಲಿ ಭಾಗವಹಿಸುವವರು ಧರ್ಮ, ಜಾತಿ ಮೀರಿದ ನಾಯಕತ್ವದ ಗುಣಗಳನ್ನು ತೋರಿಸುತ್ತಾರೆ. ಶಾರೀರಿಕ ಮತ್ತು ಮಾನಸಿಕ ಸದೃಢತೆಗಾಗಿ ಪಾಠದೊಂದಿಗೆ ಕ್ರೀಡೆಗೂ ಆದ್ಯತೆ ನೀಡಬೇಕು,” ಎಂದರು.
ಇದೇ ಮೈದಾನದಲ್ಲಿ ಈಗಾಗಲೇ ವಾಲಿಬಾಲ್, ಕ್ರಿಕೆಟ್, ಹಾಕಿ, ಕಬಡ್ಡಿ ಸೇರಿದಂತೆ ಹಲವಾರು ಕ್ರೀಡೆಗಳು ನಡೆಯುತ್ತಿದ್ದು, ಯುವ ಜನತೆಯು ಇದರಿಂದ ಪ್ರೇರಿತರಾಗುತ್ತಿದ್ದಾರೆ ಎಂದರು.
ಜಮುರ ಕಪ್ ಎಂಬ ಹೆಸರಿನಲ್ಲಿ ದಸರಾ ಸಂದರ್ಭ ಶಾಲಾ ಕಾಲೇಜು ಮಕ್ಕಳಿಗಾಗಿ ಸ್ಪರ್ಧೆಗಳನ್ನು ಆಯೋಜಿಸಿ ಶ್ರೀಮಠ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದನ್ನೂ ಶ್ರೀಗಳು ಹತ್ತಿರದಿಂದ ಹೇಳಿದರು.
🔹 ರಾಜಕೀಯ ಮುಖಂಡರ ಅಭಿಪ್ರಾಯ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ. ತಾಜ್‍ಪೀರ್ ಮಾತನಾಡುತ್ತಾ, “ಕ್ರೀಡೆಯನ್ನು ಒಂದು ದಿನ ಮಾತ್ರ ಆಡಬಾರದು. ನಿರಂತರ ಅಭ್ಯಾಸವೇ ಯಶಸ್ಸಿಗೆ ಕೀಲಿಕೈ,” ಎಂದು ಕರೆ ನೀಡಿದರು. ಅವರು ಕ್ರೀಡಾಪಟುಗಳ ಅನುಕೂಲಕ್ಕಾಗಿ ಮೈದಾನದಲ್ಲಿ ಸಿಮೆಂಟ್ ಕುರ್ಚಿಗಳನ್ನು ಸ್ಥಾಪಿಸಿದ್ದಾಗಿ ತಿಳಿಸಿದರು.
🏅 ಪದಾಧಿಕಾರಿಗಳ ಉಪಸ್ಥಿತಿ:
ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ರಾಜ್ಯಸಭಾ ಸದಸ್ಯ ಎಚ್. ಹನುಮಂತಪ್ಪ
ತಾ.ಪಂ ಮಾಜಿ ಸದಸ್ಯರು ಸುರೇಶ್ ನಾಯ್ಕ್, ನಾಗರಾಜ್
ಕಂದಾಯ ಅಧಿಕಾರಿ ಮಂಜುನಾಥ್
ಎಸ್.ಬಿ.ಐ ಡಿವಿಜನ್ ಮ್ಯಾನೇಜರ್ ವೀರಯ್ಯ,
ಶಿವಲಿಂಗಪ್ಪ, ಮಧು ಶ್ರೀನಿವಾಸ್,
ಆಗ್ರಹಾರ ಗೋವಿಂದ (7 ಸ್ಟಾರ್ ಬಳ್ಳಾರಿ ಮಾಲಿಕ),
ದೇವರಾಜ್ (ಕೆಳಗೋಟೆ ಕಿಂಗ್),
ಚಂದ್ರಶೇಖರ್ (SBI ಲೈಫ್),
ಪ್ರಜ್ವಲ್ (ಸರ್ಕಲ್ ಅಡ್ಡ),
ನಾಗಭೂಷಣ್ (ಚಿತ್ರದುರ್ಗ ಸ್ಪೋಟ್ಸ್ ಕ್ಲಬ್) ಇತರರು ಭಾಗವಹಿಸಿದರು.
🏆 ಪಂದ್ಯ ಫಲಿತಾಂಶ (ಉದ್ಘಾಟನೆ ದಿನ):
ತಂಡಗಳು ಅಂಕಗಳು
ಚಿತ್ರದುರ್ಗ ಸ್ಪೋಟ್ಸ್ ಕ್ಲಬ್ 25 ಅಂಕಗಳು
ರಾಯರಸೇನೆ 24 ಅಂಕಗಳು
ಕೆಳಗೋಟೆ ಕಿಂಗ್ 38 ಅಂಕಗಳು
7 ಸ್ಟಾರ್ ಬಳ್ಳಾರಿ 24 ಅಂಕಗಳು
ಎಸ್.ಬಿ.ಐ. ಲೈಫ್ 28 ಅಂಕಗಳು
ಸರ್ಕಲ್ ಅಡ್ಡ 22 ಅಂಕಗಳು
🎤 ಪ್ರಾರ್ಥನೆ: ಗಂಗಾಧರ್
🙌 ಸ್ವಾಗತ: ಮುರುಗೇಶ್