ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನತೆಗೆ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಸಹಾಯ ಹಸ್ತ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 20 ತಾಲ್ಲೂಕಿನ ಓಬಣ್ಣನ ಹಳ್ಳಿಯಲ್ಲಿ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಅಲ್ಲಿನ ಮನೆಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದವು, ಇದರಿಂದ ಮನೆಯಲ್ಲಿ ನಿಲ್ಲಲು ಜಾಗ ವಿಲ್ಲದೆ ಜನತೆ ಪರದಾಡಿದರು ಮನೆಯಲ್ಲಿ ಇದ್ದ ಸಾಮಾನುಗಳು ಸಹಾ ನೀರಿನಲ್ಲಿ ಹೋಗಿದೆ ಇದನ್ನು ಮನಗಂಡ ಭೋವಿ ಗುರುಪೀಠ ಇಂದು ಸ್ಥಳಕ್ಕೆ ಭೇಟಿ ನೀಡುವುದರ ಮೂಲಕ ಅಲ್ಲಿನ ಜನತೆಯ ಸಂಕಷ್ಟಕ್ಕೆ ಮಿಡಿದು ಸಾಂತ್ವಾನ ಹೇಳುವುದರ ಮೂಲಕ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡುವುದರ ಮೂಲಕ ಸಹಾಯವನ್ನು ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾಡಿದ್ದಾರೆ.

ಚಿತ್ರದುರ್ಗ ತಾಲೂಕು. ಓಬಣ್ಣನಹಳ್ಳಿ ಸುತ್ತಾ-ಮುತ್ತಲೂ ಸಹಾ ಗುಡ್ಡದಿಂದ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡು ಹಾನಿಗೊಳಗಾಗಿವೆ. ಇದರಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ, ಈ ಮಳೆಯಿಂದಾಗಿ ಗ್ರಾಮದಲ್ಲಿನ ಮನೆಗಳು ಹಾನಿಯಾಗಿದ್ದು ಹಲವಾರು ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ, ಮಳೆಯ ದಿನದಂದು ಮನೆಯವರು ಪೂರ್ಣವಾಗಿ ನೀರಿನಿಂದ ಜಾಗರಣೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಮ್ಮಡಿ ಶ್ರೀಗಳು ಮನೆಗಳನ್ನು ಪರಿಶೀಲಿಸಿದರು, ಮಳೆಯಿಂದ ಆದ ಅನಾಹುತವನ್ನು ಖುದ್ದಾಗಿ ವೀಕ್ಷಣೆ ಮಾಡಿದರು. ತದ ನಂತರ ಮಾತನಾಡಿದ ಶ್ರೀಗಳು, ನಮ್ಮ ಜನತೆ ಸಂಕಟ ಬಂದಾಗ ಮಾತ್ರ ವೆಂಕಟರಮಣನನ್ನು ನೆನೆಯುತ್ತಾರೆ. ದೇವರೆ ಯಾಕೆ ನನಗೆ ಕಷ್ಠವನ್ನು ಕೊಟ್ಟೆ ನನ್ನ ಸಂಸಾರವನ್ನು ಯಾಕೆ ಬೀದಿಗೆ ತಂದೆ ಎಂದು ಪ್ರಶ್ನಿಸುತ್ತಿದ್ದಾರೆ. ಮಳೆ ಬಂದರು ಸಹಾ ನೀವುಗಳು ಧೃತಿಗೆಟ್ಟಿಲ್ಲ ಯಾಕೆಂದರೆ ನಿಮ್ಮ ಶಕ್ತಿಯನ್ನು ನೀವುಗಳು ನಂಬಿದ್ದಾರೆ ಇದರ ಮೇಲೆ ನಿಮಗೆ ನಂಬಿಕೆ ಇದೆ ಇದರಿಂದ ಇಂತಹ ತೊಂದರೆಗಳು ಬಂದರೂ ಸಹಾ ಧೃತಿಗೆಡದೆ ಧೈರ್ಯದಿಂದ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ನಿಮ್ಮದು ಶ್ರಮಿಕ ವರ್ಗವಾಗಿದೆ ದಿನ ಕಾಯಕವನ್ನು ಮಾಡುವುದರ ಮೂಲಕ ಬದುಕನ್ನು ಸಾಗಿಸಲಾಗುತ್ತಿದೆ. ಸರ್ಕಾರ ನಿಮ್ಮ ಸಹಾಯಕ್ಕೆ ಬರುತ್ತದೆ ಆದರೆ ಸ್ವಲ್ಪ ತಡವಾಗಬಹುದು ಅಲ್ಲಿಯವರೆಗೂ ಕಾಯದ ಮಳೆಯಿಂದ ಬಿದ್ದಿರುವ ನಿಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಶ್ರೀಗಳು ಕರೆ ನೀಡಿದರು.

ನಿಮ್ಮ ಗ್ರಾಮ ಸುತ್ತಾ-ಮುತ್ತಾ ಗುಡ್ಡಗಾಡಿನ ಪ್ರದೇಶವಾಗಿದೆ ಮಳೆಯಿಂದ ಬಿದ್ದ ನೀರು ಪೂರ್ಣವಾಗಿ ಹರಿದು ಕೆಳಗಡೆ ಬರುತ್ತದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಮಾನದಲ್ಲಿಯ ನಿಮ್ಮ ಮನೆಗಳು ಭದ್ರವಾಗಿ ಇರಬೇಕಾದರೆ ಎಲ್ಲಿ ನೀರು ಹರಿದು ಬರುತ್ತದೆ ಅಂತಹ ಸ್ಥಳದಲ್ಲಿ ಸುಭದ್ರವಾದ ತಡೆ ಗೋಡೆಯನ್ನು ನಿರ್ಮಾಣ ಮಾಡುವುದರ ಮೂಲಕ ನೀರು ಬಾರದಂತೆ ತಡೆಯಬೇಕಿದೆ ಎಂದ ಶ್ರೀಗಳು, ಮುಂದಿನ ದಿನದಲ್ಲಿ ಗ್ರಾಮವನ್ನು ನಿರ್ಮಾಣ ಮಾಡುವಾಗ ಸರಿಯಾದ ರೀತಿಯಲ್ಲಿ ವೈಜ್ಞಾನಿಕವಾಗಿ ನಿರ್ಮಾಣ ಮಾಡುವಂತಾಗಬೇಕಿದೆ. ಇದರಿಂದ ಮಳೆಯ ನೀರನ್ನು ತಡೆಯಬಹುದಾಗಿದೆ. ನಮ್ಮ ಮಠವು ಮಾನವೀಯತೆಯನ್ನು ಮಿಡಿಯುವ ಮಠವಾಗಿದೆ ಕಷ್ಠದಲ್ಲಿರುವವರೆಗೆ ಸಹಾಯ, ಸಹಕಾರವನ್ನು ನೀಡಲಾಗುವುದು ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು. ನೀವುಗಳು ದುಡಿದ ಗಳಿಸಿದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡದೇ ಗಳಿಕೆಯನ್ನು ಉಳಿಸಬೇಕು ಉಳಿಸಿದ ಗಳಿಕೆಯ ಹಣವನ್ನು ಈ ರೀತಿಯಾದ ಆಪತ್ಕಾಲದಲ್ಲಿ ಬಳಕೆಯನ್ನು ಮಾಡಕೊಳ್ಳಬೇಕಿದೆ ಆದರೆ ನಮ್ಮ ಜನಗಳಿಸುವುದಕ್ಕಿಂತ ಖರ್ಚು ಮಾಡುವುದು ಹೆಚ್ಚಾಗಿದೆ ಈ ರೀತಿಯ ಸಮಯದಲ್ಲಿ ಹಣ ಇಲ್ಲದೆ ಧೃತಿಗೆಡುತ್ತಾರೆ ಮುಂದಿನ ದಿನದಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳುವಂತೆ ಕಿವಿ ಮಾತು ಹೇಳಿದ ಶ್ರೀಗಳು, ಮುಂದಿನ ದಿನದಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಬರಬಹುದು ನಾವು ಸಹಾ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು. ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ಜನಾಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಒಗ್ಗಟ್ಟಿನಿಂದ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮ ಧ್ವನಿ ವಿಧಾನಸೌಧವನ್ನು ನಡೆಸುವಂತಿರಬೇಕು,ಆಗ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೂರಾರು ಮನೆಗಳಿಗೆ ನೀರು ನುಗ್ಗಿದರು ಸಹ ಇದುವರೆಗೂ ರಾಜಕಾರಣಿಗಳು ಬಂದು ಸಾಂತ್ವನ ಹೇಳಿಲ್ಲ. ರಾಜಕಾರಣಿಗಳಿಗೆ ಜನರ ಸಮಸ್ಯೆಗಳನ್ನು ಆಲಿಸುವಾಗ ವ್ಯವಧಾನ ಇಲ್ಲ ಎಂದು ಹೇಳಿದರು. ಮಾಜಿ ಜಿಲ್ಲಾಧ್ಯಕ್ಷ ತಿಮ್ಮಣ್ಣ ಮಾತನಾಡಿ, ನಮ್ಮ ಕಷ್ಟಕ್ಕೆ ಯಾವ ರಾಜಕಾರಣಿಯು ಆಗುವುದಿಲ್ಲ. ಮಠದ ಜೊತೆ ನಾವಿದ್ದರೆ. ಮಠ ನಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ಮಠದ ಕಾರ್ಯಕ್ರಮಗಳಿಗೆ ಸ್ವಯಂಘೋಷಿತವಾಗಿ, ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ಹೇಳಿದರು. ಎಸ್ ಜೆ ಎಸ್ ಸಂಸ್ಥೆ ಕಾರ್ಯದರ್ಶಿ ಡಿಸಿ ಮೋಹನ್ ಮಾತನಾಡಿ, ಮಠದ ಶಾಲೆಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಇರುವುದರಿಂದ ಬಡತನದಲ್ಲಿರುವ ಕುಟುಂಬದವರು ಮಕ್ಕಳನ್ನ ಕೂಲಿ ಕಳಿಸದೆ ಶಾಲೆಗೆ ಕಳಿಸಬೇಕು ಎಂದು ತಿಳಿಸಿದರು. ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ. ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಉಮೇಶ್. ಪಿಡಿಒ ಆಂಜನೇಯ. ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಮ್ಮ. ಜಯಪ್ಪ. ಮುಖಂಡರಾದ ಚಂದ್ರಪ್ಪ ಯಲ್ಲಪ್ಪ. ಓಬಳೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಅಕ್ಕಿ, ಬೇಳೆ, ರಾಗಿ, ಜೋಳ, ಖಾರದ ಪುಡಿ, ಉಪ್ಪು, ಸಕ್ಕರೆ, ಗೋಧಿ ಸೇರಿದಂತೆ ಸುಮಾರು 20 ವಿವಿಧ ರೀತಿಯ ದವಸ ಧಾನ್ಯಗಳನ್ನು ಒಳಗೊಂಡ ಕಿಟ್ ಗಳನ್ನು ಅಲ್ಲಿನ 120 ಜನರಿಗೆ ಹಂಚಿಕೆ ಮಾಡಲಾಯಿತು.

Leave a Reply

Your email address will not be published. Required fields are marked *