ಜ್ಞಾನದ ಅಭಿವೃದ್ಧಿಗೆ ಗುರು ಪರಂಪರೆ ಅತ್ಯಂತ ಮಹತ್ವವಾದ ಕೊಡುಗೆ: ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಚಿತ್ರದುರ್ಗ ಜು. 22 ಜ್ಞಾನ ಅಭಿವೃದ್ಧಿಗೆ ಗುರು ಪರಂಪರೆ ಅತ್ಯಂತ ಮಹತ್ವವಾದ ಕೊಡುಗೆಯನ್ನ ನೀಡಿದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಹೊರ ವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಗುರು ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವನ ಬೆಳವಣಿಗೆಗೆ ಜ್ಞಾನ ಮುಖ್ಯವಾದ ಪತ್ರವಹಿಸುತ್ತದೆ. ಜ್ಞಾನದ ಸೃಜನಶೀಲತೆಯನ್ನು ಹಂತ ಹಂತವಾಗಿ ಮುನ್ನಡೆಸುವ ಮಹಾನ್ ಕಾರ್ಯ ಗುರು ಪರಂಪರೆಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ಸಮಾಜದ ಪರಿವರ್ತನೆಗೆ ಅಗತ್ಯವಾದ ಮಾಹಿತಿಯನ್ನ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾವಣೆಯೊಂದಿಗೆ ಕೊಂಡೊಯ್ಯುವ ಕಾರ್ಯ ಗುರು ಪರಂಪರೆಯಲ್ಲಿ ಸಾಗಿದೆ. ಮೌಖಿಕ ಜ್ಞಾನದ ಸಂದರ್ಭದಿಂದ ಹಿಡಿದು ಪ್ರಸ್ತುತ ಕಾಲದವರೆಗೆ ಜ್ಞಾನವನ್ನ ಮತ್ತು ಜ್ಞಾನದ ಅಭಿವೃದ್ಧಿಗೆ ಗುರು ಪರಂಪರೆ ಸದೃಢವಾಗಿ ನಿಂತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಯಣ್ಣ, ಭೋವಿ ಗುರುಪೀಠದ ಸಿ.ಇ.ಓ ಗೌನಹಳ್ಳಿ ಗೋವಿಂದಪ್ಪ, ಗುರುಕುಲದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *