ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ: ಯುವತಿಯ ಚಿಕಿತ್ಸೆಯ ವೆಚ್ಚಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 27 ಗೂಡುರೂ ಗ್ರಾಮದಲ್ಲಿ ನಡೆದ ಲವ್ ಜೀಹಾದ್ ಕೃತ್ಯ ನಡೆಸಿದ ಕಾರಣ ಯುವತಿಯ ಜೀವನ್ಮರಣ ಹೋರಾಟದಲ್ಲಿ ವೈದ್ಯಕೀಯ ಚಿಕಿತ್ಸೆ ಅತ್ಯತ್ಯವಾಗಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಯುವತಿಯ ಚಿಕಿತ್ಸೆಯ ವೆಚ್ಚಕ್ಕೆ 1.00.000
(ಒಂದು ಲಕ್ಷ) ರೂಪಾಯಿಗಳನ್ನು ನೀಡಿದ್ದಾರೆ.

ಬಾಗಲಕೋಟ ಜಿಲ್ಲಾ ಹುನಗುಂದ ತಾಲ್ಲೂಕು ಗೂಡುರೂ ಗ್ರಾಮದ 22 ವರ್ಷದ ನೇತ್ರಾವತಿ ವಿ ಗೂಡೂರು ಎಂಬ ಯುವತಿಯ
ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಲವ್ ಜೀಹಾದ್ ಕೃತ್ಯ ನಡೆಸಿದ ಕಾರಣ ಯುವತಿಯ ಜೀವನ್ಮರಣ ಹೋರಾಟದಲ್ಲಿ
ವೈದ್ಯಕೀಯ ಚಿಕಿತ್ಸೆ ಅತ್ಯಗತ್ಯ. ಯುವತಿಗೆ ಮಾತಾ-ಪಿತಾರಿಲ್ಲದ ಕಾರಣ ತಗಡಿನ ಗುಡಿಸಲು ವಾಸಿಯಾಗಿರುವ ಬಡಕುಟುಂಬದ
ಹಿನ್ನೆಲೆಯನ್ನು ಅರಿತ ಅಶೋಕ ಲಿಂಬಾವಳಿ ಅವರು ಭೋವಿ ಗುರುಪೀಠದ ಜಗದ್ಗುರುಗಳಿಗೆ ವಿಷಯದ ಚಿಂತನ ಮಂಥನ ಮಾಡಿದ
ಫಲಶೃತಿಯಂತೆ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಯುವತಿಯ ಚಿಕಿತ್ಸೆಯ ವೆಚ್ಚಕ್ಕೆ 1.00.000ಡಿs
(ಒಂದು ಲಕ್ಷ )ರೂಪಾಯಿಗಳನ್ನು ನೀಡಿದ್ದಾರೆ.

ತಾತ್ಕಾಲಿಕ ಆಶ್ರಯ ನೀಡಿದ ಇಳಕಲ್ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳಿ, ಚೆಕ್ ಹಸ್ತಾಂತರಿಸುವ ಸಂದರ್ಭದಲ್ಲಿ ತಂಗಡಗಿಯ
ಹಡಪದ ಅಪ್ಪಣ್ಣ ಗುರುಪೀಠದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ತೆಲಸಂಗ ಕುಂಬಾರ ಗುರುಪೀಠದ
ಜಗದ್ಗುರು ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ಶಿಕಾರಿಪುರ ವಿರಕ್ತಮಠ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಭಾರತೀಯ
ರೈಲ್ವೆ ಪ್ರಾಧಿಕಾರದ ಸದಸ್ಯ ಅಶೋಕ ಲಿಂಬಾವಳಿ, ಭಾಜಪ ಪರಿಶಿಷ್ಟ ಜಾತಿಯ ರಾಜ್ಯ ಕಾರ್ಯದರ್ಶಿ ತುಮಕೂರಿನ ಓಂಕಾರೇಶ್ವರ,
ಬಾಗಲಕೋಟ ವಕೀಲ ಕುಮರಸ್ವಾಮಿ ಹಿರೇಮಠ, ಹನುಮಂತ ತುಂಬದ, ಬಸವರಾಜ ಒಡೆಯರಾಜ, ರಾಘವೇಂದ್ರ ಚಿಂಚಲಿ
ಹಾಗೂ ಭೋವಿ ಸಮಾಜದ ಮುಖಂಡರು ಸಾಕ್ಷೀಕರಿಸಿದರು.

Leave a Reply

Your email address will not be published. Required fields are marked *