ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಏಪ್ರಿಲ್ 3, ಚಿತ್ರದುರ್ಗ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ ಟ್ರಸ್ಟಿಗಳು ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾಗಿರುವಂತಹ ಡಾಕ್ಟರ್ ಹೇಮಾವತಿವಿ ಹೆಗ್ಗಡೆಯವರ ಹುಟ್ಟು ಹಬ್ಬದ ಆಚರಿಸಲಾಯಿತು.


ರಾಜ್ಯದ ಕಡುಬಡವ ಕುಟುಂಬದವರಿಗೆ ಮಾಶಾಸನ ನೀಡುತಿದ್ದು ಚಿತ್ರದುರ್ಗ ಪ್ರಾದೇಶಿಕ ಕಚೇರಿಯಲ್ಲಿ 2132 ಕುಟುಂಬಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ವಾತ್ಸಲ್ಯ ಮಿಕ್ಸ್ ಆಹಾರ ಕಿಟ್ಟನ್ನು ನೀಡುತ್ತಿದ್ದು ಜೊತೆಗೆ ವಾತ್ಸಲ್ಯ ಮನೆಗಳನ್ನು 950 ಕ್ಕೂ ಅಧಿಕ ವಾತ್ಸಲ್ಯ ಮನೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಕಡುಬಡವರ ಕುಟುಂಬಕ್ಕೆ ಆಶ್ರಯದಾತರಾಗಿರುತ್ತಾರೆ ದಿನಾಂಕ 2/3/26 ರಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾಶಾಸನ ನೀಡುತ್ತಿರುವ ಫಲಾನುಭವಿಗಳಿಗೆ ಹಣ್ಣು ಹಂಪಲು ನೀಡುವುದರ ಮೂಲಕ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಾಯಿತು.
ಈ ಸಂದರ್ಭ ಮಾಶಾಸನ ಫಲಾನುಭವಿಗಳಿಗೆ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕರ ದಂತಹ ಶ್ರೀಮತಿ ಗೀತಾ ಬಿ ಚಿತ್ರದುರ್ಗ ಜಿಲ್ಲಾ ನಿರ್ದೇಶಕರಾದಂತಹ ಕಮಲಾಕ್ಷ ಚಿತ್ರದುರ್ಗ ತಾಲ್ಲೂಕು ಯೋಜನಾಧಿಕಾರಿಗಳಾದ ಚಂದ್ರಹಾಸ್ ಬಿ ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಶ್ರೀಮತಿ ರತ್ನ ಹಾಗೂ ಚಿತ್ರದುರ್ಗ ತಾಲೂಕಿನ ಸಮನ್ವಯುಧಿಕಾರಿ ಶ್ರೀಮತಿ ಚಂದ್ರಮ್ಮ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಂದ ಹುಟ್ಟು ಹಬ್ಬದ ಪ್ರಯುಕ್ತ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಶುಭ ಕೋರಲಾಯಿತು.