Fake Intelligence Officer : ಊರಿನಲ್ಲಿ ಎಲ್ಲರೂ ತನಗೆ ಗೌರವ, ಮಾರ್ಯಾದೆ ಕೊಡಬೇಕೆಂದು ಯುವಕನೊರ್ವ ಇಂಟಲಿಜೆನ್ಸ್ ಬ್ಯೂರೋ ಅಧಿಕಾರಿಯ ವೇಷ ಧರಿಸಿ ಓಡಾಡುತ್ತಿದ್ದ. ಇದೀಗ ಬನಹಟ್ಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಬಾಗಲಕೋಟೆ: ಊರಲ್ಲಿ ಗೌರವ ಸಿಗಬೇಕು, ನನ್ನ ನೋಡಿದರೆ ಒಂದು ಹವಾ ಇರಬೇಕೆಂದು ಯುವಕನೊರ್ವ ನಕಲಿ ಅಧಿಕಾರಿ ವೇಷ ಹಾಕಿ ಸಿಕ್ಕಿಬಿದ್ದಿದ್ದಾನೆ. ಸಂಗಮೇಶ್ ಲಕ್ಕಪ್ಪಗೋಳ (19) ಎಂಬಾತ ಇಂಟಲಿಜೆನ್ಸ್ ಬ್ಯೂರೋ (Fake Intelligence Officer) ಅಧಿಕಾರಿ ವೇಷ ಧರಿಸಿದವನು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿಯಲ್ಲಿ ಘಟನೆ ನಡೆದಿದೆ.
ಇಂಟಲಿಜೆನ್ಸ್ ಬ್ಯೂರೋದ ನಕಲಿ ಐಡಿ ಕಾರ್ಡ್, ಕ್ಯಾಪ್ ಹೊಂದಿದ್ದ ಸಂಗಮೇಶ್ ಬೈಕ್ ಮೇಲೂ ಐಬಿ ಲೋಗೋ ಹಾಕಿಕೊಂಡಿದ್ದ. ಟಾಯ್ ಗನ್, ವಾಕಿಟಾಕಿ ಕೂಡಾ ಇಟ್ಟಕೊಂಡು ಪೋಸ್ ಕೊಡುತ್ತಿದ್ದ. ಸದ್ಯ ಆರೋಪಿ ಸಂಗಮೇಶನನ್ನು ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಹಿಪ್ಪರಗಿ ಗ್ರಾಮದ ಸಂಗಮೇಶ್ ಲಕ್ಕಪ್ಪಗೋಳ ಜತೆಗೆ ಇನ್ನೂ ಎಂಟು ಮಂದಿ ಯುವಕರು ಇದ್ದಾರೆ ಎನ್ನಲಾಗಿದೆ. ಸದ್ಯ ಸಂಗಮೇಶನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ. ಇಂಟಲಿಜೆನ್ಸ್ ಬ್ಯೂರೋ ಹೆಸರಲಿನಲ್ಲಿ ಯಾರಿಗಾದರೂ ಮೋಸ ಮಾಡಿ, ಹಣ ಪಡೆದಿದ್ದನಾ ಎಂಬ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.