53ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ ಜವಳಿ ಶಾಂತಕುಮಾರರ ಹಂಪಿಯ ಕಮಲಮಹಲ್ ಚಿತ್ರ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 02

ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ನಡೆಯುವ 2025ನೇ ಸಾಲಿನ 53ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ ಚಿತ್ರದುರ್ಗ ನಗರದಿಂದ ಕಲಾವಿದ ಜವಳಿ ಶಾಂತಕುಮಾರ ಇವರು ಚಿತ್ರಕಲೆ ಆಯ್ಕೆಯಾಗಿದೆ ಎಂದು ಕರ್ನಾಟಕ ಲಿಲಿತಾ ಆಕಾಡೆಮಿಯ ರಿಜಿಸ್ಟಾರ್ ಎನ್. ನಮ್ರತ ತಿಳಿಸಿದ್ದಾರೆ.

ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ನಡೆಯುವ 2025 ನೇ ಸಾಲಿನ 53ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ ಚಿತ್ರದುರ್ಗ ನಗರದಿಂದ ಜವಳಿ ಶಾಂತಕುಮಾರ ಇವರು ಆಯ್ಕೆ ಆಗಿರುತ್ತಾರೆ. ಕಳೆದ 30 ವರ್ಷಗಳಿಂದ ಅನೇಕ ಚಿತ್ರಗಳನ್ನು ಬೇರೆ ಬೇರೆಮಾಧ್ಯಮಗಳಿಂದ ರಚಿಸುತ್ತಾ ಬಂದಿದ್ದು ವೃತ್ತಿಪರ ಕಲಾವಿದರಾಗಿದ್ದಾರೆ. ಜಲ ವರ್ಣದಿಂದ ರಚಿಸಿರುವ ಹಂಪಿಯ ಕಮಲ ಮಹಲ್ ಎತ್ತರ 18 ಇಂಚು ಘಿ 24 ಇಂಚು ಅಗಲತೆಯ ಪ್ರಕೃತಿಚಿತ್ರ ಕಲಾಕೃತಿ ಆಯ್ಕೆ ಆಗಿದೆ.

ಈ ಹಿಂದೆ ಆಯಿಲ್ ಪೇಸ್ಟಲ್ಸ್‍ನಿಂದ ರಚಿಸಿರುವ ಅಜ್ಜಿಯ ಭಾವಚಿತ್ರಕ್ಕೆ ಹೈದರಾಬಾದ್‍ನಲ್ಲಿ ನಡೆದ 81ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಬಹುಮಾನ ಪಡೆದಿದ್ದು ಸ್ಮರಣೀಯ ಹಾಗೂ ಚಿತ್ರದುರ್ಗದ ಕಾಡುಗೊಲ್ಲರ ಭಾವಚಿತ್ರಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಬಂದಿದ್ದು ಗಮನಾರ್ಹ ಇವರು ಎಸ್‍ಜೆಎಂ ಚಿತ್ರಕಲಾ ಮಹಾವಿದ್ಯಾಲಯದಿಂದ ಐದನೇ ವರ್ಷದ ವಿಶೇಷ ಪರಿಣತಿ ಪೇಂಟಿಂಗ್ ಹಾಗೂ ಹುಬ್ಬಳ್ಳಿಯ ಎಂವಿ ಮಿಣಜಿಗಿ ಫೈನ್ ಆರ್ಟ್ ಕಾಲೇಜಿನಲ್ಲಿ ಎಂಎಫ್ ಎ ಪದವಿಯನ್ನು ಮುಗಿಸಿರುತ್ತಾರೆ.

ನಗರದ ಎಸ್.ಜೆ.ಎಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಲವರ್ಣದಿಂದ ರಚಿಸಿರುವ ಹಂಪಿಯ ಕಮಲಮಹಲ್ ಎತ್ತರ 18 ಇಂಟು 24 ಇಂಚು ಆಗಲ ಅಳತೆಯ ಪ್ರಕೃತಿಚಿತ್ರ ಕಲಾಕೃತಿ 2025ನೇ ಸಾಲಿನ 53ನೇ ವಾರ್ಷಿಕ ಕಲಾ ಪ್ರದರ್ಶನಕ್ಕೆ ಬಹುಮಾನಕ್ಕೆ ಪರಿಗಣಿಸಲು ಆಯ್ಕೆ ಆಗಿದೆ.

Views: 18

Leave a Reply

Your email address will not be published. Required fields are marked *