ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 30: ಚಿತ್ರದುರ್ಗ ನಗರಸಭೆ ಸದಸ್ಯೆ ಶ್ರೀಮತಿ ನಾಗಮ್ಮ ಅವರ ಪತಿ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿದ್ದ ಜಯರಾಮ್ ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.ಅವರಿಗೆ 82 ವರ್ಷ ವಯಸ್ಸು ಆಗಿತ್ತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಲ್ಲಿಂದ ಬಿಡುಗಡೆಯಾದ ಬಳಿಕ ಚಿತ್ರದುರ್ಗದ ವೇದಾಂತ ಆಸ್ಪತ್ರೆಗೆ ಸೇರಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.
ಮೃತರು ಪತ್ನಿ , ಇಬ್ಬರು ಹೆಣ್ಣು ಮಕ್ಕಳು.ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ ಜಯರಾಮ್ ಅವರ ಪುತ್ರ ಮಹೇಶ್ ಮೂರು ಅವಧಿಗೆ ನಿರಂತರವಾಗಿ ನಗರಸಭೆಗೆ ಸದಸ್ಯರಾಗಿ ಆಯ್ಕೆ ಆಗಿದ್ದರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪತ್ನಿ ಶ್ರೀಮತಿ ನಾಗಮ್ಮ ಅವರು ಚುನಾವಣೆ ಸ್ಪರ್ಧೆ ಮಾಡಿ ಗೆದ್ದಿದ್ದರು. ಮೃತರ ಅಂತ್ಯ ಕ್ರಿಯೆ ಶುಕ್ರವಾರ ಸಂಜೆ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ಜಯರಾಮ್ ಅವರ ನಿಧನ ವಿಷಯ ತಿಳಿದ ಕೂಡಲೇ ಅಪಾರ ಸಂಖ್ಯೆಯಲ್ಲಿ ಬಂಧುಗಳು, ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರು ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ನಗರ ಸಭೆ ಅಧ್ಯಕ್ಷೆ ಸುಮಿತಾ,ಉಪಾದ್ಯಕ್ಷರಾದ ಶ್ರೀದೇವಿ ಸದಸ್ಯರಾದ ಹೆಚ್ ಭಾಸ್ಕರ್ , ಹೆಚ್ .ಶ್ರೀನಿವಾಸ್ . ರಮೇಶ್,ವೆಂಕಟೇಶಪ್ಪ,ದಾರುಕ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ರಾಮಸ್ವಾಮಿ. ಗುತ್ತಿಗೆದಾರ ಶಿವಕುಮಾರ್,ಅಶೋಕ್ ಸೇರಿದಂತೆ ಹಲವಾರು ಆಗಮಿಸಿ ನಮನ ಸಲ್ಲಿಸಿದರು.