ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ನಿಶ್ಚಿತ : ಚಳ್ಳಕೆರೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್

ಚಿತ್ರದುರ್ಗ, (ಏ.22) :  ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಯಾವ ಗ್ರಾಮಕ್ಕೆ ಹೋದರೂ ಮತದಾರರು ಆತ್ಮೀಯವಾಗಿ ಸ್ವಾಗತ ನೀಡುತ್ತಿರುವುದು ಕಂಡರೆ ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲುವುದು ಖಚಿತ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ನಿಶ್ಚಿತ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ ರವೀಶ್ ಕುಮಾರ್ ಹೇಳಿದರು.

ನಗರದ ಪಾವಗಡ ರಸ್ತೆಯಲ್ಲಿ ಕೆಲವು ಯುವಕರು ಇಂದು ವಿವಿಧ ಪಕ್ಷದ  ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದ ಅವರು ನಂತರ ನಗರದ ಟಿಎಟಿ ಟಾಕೀಸ್ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ರಸ್ತೆಯವರೆಗೂ ಪ್ರತಿ ಮನೆ ಮನೆಗೆ ಭೇಟಿ ನೀಡಿ  ಮತಯಾಚನೆ ಮಾಡಿದರು

ನಂತರ ಮಾಧ್ಯಮದೊಂದಿಗೆ ಮಾತನಾಡಿ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರು ಮಾಡಿದ ಜನಪರ ಕಾರ್ಯಗಳು ಹಾಗೂ ರೈತರ ಸಾಲ ಮನ್ನಾ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಲಾಟರಿ ನಿಷೇಧ ಜನಪರ ಯೋಜನೆಗಳನ್ನ  ರೈತರಿಗೆ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಕುಮಾರಸ್ವಾಮಿಯವರು ಯಾವತ್ತೂ ರೈತರ ಪರ ಯೋಚನೆ ಮಾಡುವಂತಹ ನಾಯಕರಾಗಿದ್ದು ಈ ಬಾರಿ ಎಲ್ಲಾ ಕಡೆಯೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಚಳ್ಳಕೆರೆ ಕ್ಷೇತ್ರದಲ್ಲಿ ಯಾವ ಗ್ರಾಮಕ್ಕೆ ಹೋದರು ಇಲ್ಲಿನ ಜನ ತುಂಬಾ ಆತ್ಮೀಯ ಸಂತೋಷದಿಂದ ನಮ್ಮನ್ನು ಬರ ಮಾಡಿಕೊಳ್ಳುತ್ತಿದ್ದು ಅಭಿಮಾನದ ಜೊತೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ತಾಲೂಕಿನಲ್ಲಿ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಸಂಖ್ಯೆಯು ಸಹ ಹೆಚ್ಚಿದೆ ಹಾಗಾಗಿ ಈ ಬಾರಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆದ್ದು ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ.ಈದಿನ ವಿವಿಧ ವಾರ್ಡ್ಗಳಲ್ಲಿ ಮತ ಪ್ರಚಾರ ಮಾಡಲಾಗಿದ್ದು ನಗರದಲ್ಲಿಯೂ ಸಹ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹಾಗಾಗಿ ಈ ಬಾರಿ ಜನ ನಮ್ಮ ಕೈ ಹಿಡಿದೆ ಹಿಡಿಯುತ್ತಾರೆ ಎನ್ನುವ ಪೂರ್ತಿ ಭರವಸೆ  ಇದೆ ಎಂದರು.

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ. ತಿಪ್ಪೇಸ್ವಾಮಿ ಮಾತನಾಡಿ ಎರಡು ರಾಷ್ಟ್ರೀಯ ಪಕ್ಷಗಳ ರಾಜಕೀಯ ದೊಂಬರಾಟದಿಂದ ಜನ ಬೇಸತ್ತಿದ್ದು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ನೀಡಲಿದ್ದಾರೆ ಕಳೆದ ಬಾರಿ ಕಡಿಮೆ ಅಂತರದಲ್ಲಿ ಪರಭೌಗೊಂಡಿದ್ದ ನಮ್ಮ ಅಭ್ಯರ್ಥಿ ಎಂ ರವೀಶ್ ಕುಮಾರ್ ಈ ಬಾರಿ ಜಯಗಳಿಸುತ್ತಾರೆ  . ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಅದಕ್ಕಾಗಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀನಿವಾಸ್ ತಿಪ್ಪಕ್ಕ ವಿ ವೈ ಪ್ರಮೋದ್ ವಿಶುಕುಮಾರ್ ಹಾಗೂ ಮುಖಂಡರಾದ ಶಾಂತಕುಮಾರ್ ಜಿಕೆ ವೀರಣ್ಣ ಶ್ರೀನಿವಾಸ್ ಪ್ರಸನ್ನ ಮಹೇಶ್ ಮನು ದೊರೆ ಏಕಾಂತ. ಡಿ ಚಂದ್ರು ಮಂಜುನಾಥ್ ಶ್ರೀನಿವಾಸ್ ಅಭಿ ಸೇರಿದಂತೆ ಜೆಡಿಎಸ್ ಮುಖಂಡರು ಕಾರ್ಯಕರ್ತರು ಇದ್ದರು.

The post ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ನಿಶ್ಚಿತ : ಚಳ್ಳಕೆರೆ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/XMpN9kx
via IFTTT

Views: 0

Leave a Reply

Your email address will not be published. Required fields are marked *