RECRUITMENT IN ARMY THROUGH JEE : ಈಗ ಜೆಇಇ ಮುಖ್ಯ ಪರೀಕ್ಷೆ 2025 ಮೂಲಕ ಸೇನೆಗೆ ಸೇರಲು ಅವಕಾಶವಿದೆ. ಹೇಗೆ ಅಂತ ಇಲ್ಲಿ ತಿಳಿಯಿರಿ.

ಕೋಟಾ, ರಾಜಸ್ಥಾನ: ದೇಶದ ಅತಿದೊಡ್ಡ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ JEE MAIN 2025 ರಲ್ಲಿ ಭಾಗವಹಿಸಿದ ಲಕ್ಷಾಂತರ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿಯೊಂದು ಬಂದಿದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೂಲಕ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದುಕೊಳ್ಳಬಹುದು. ಅವರು ಈ ತಾಂತ್ರಿಕ ಪ್ರವೇಶ ಯೋಜನೆಯ ಮೂಲಕ ಸೇನೆಗೆ ಸೇರಬಹುದು. ಇದು ಶಾಶ್ವತ ಆಯೋಗವಾಗಿರುತ್ತದೆ. ಗಮನಿಸಬೇಕಾದ ಅಂಶ ಎಂದರೆ ನೇಮಕಾತಿಯಲ್ಲಿ ಅವಿವಾಹಿತ ಪುರುಷರನ್ನು ಮಾತ್ರ ನಿಯೋಜಿಸಲಾಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.
ಇದಕ್ಕಾಗಿ ಆನ್‌ಲೈನ್ ಅರ್ಜಿಗಳು ಮೇ 13 ರಿಂದಲೇ ಪ್ರಾರಂಭವಾಗಿವೆ. ಅಭ್ಯರ್ಥಿಗಳು ಜೂನ್ 12, 2025 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಾದ ನಂತರ ಆಯ್ಕೆ ಪಟ್ಟಿಯನ್ನು ಘೋಷಿಸಲಾಗುತ್ತದೆ. ಸೇವಾ ಆಯ್ಕೆ ಮಂಡಳಿ ಈ ಪ್ರಕ್ರಿಯೆ ನಡೆಸಲಿದೆ. ನಂತರ ವೈದ್ಯಕೀಯ, ಮೆರಿಟ್ ಪಟ್ಟಿ ಮತ್ತು ಸೇರ್ಪಡೆ ಪತ್ರವನ್ನು ನೀಡಲಾಗುತ್ತದೆ.
ಇಲ್ಲಿ ಆಯ್ಕೆ ಆದರೆ ವರ್ಷಕ್ಕೆ 17- 18 ಲಕ್ಷ ರೂ.: ಇದರಲ್ಲಿ ಎಂಜಿನಿಯರಿಂಗ್ ಪದವಿಯೊಂದಿಗೆ ಲೆಫ್ಟಿನೆಂಟ್ ಆಗಿ ಸೇರ್ಪಡೆ ಆಗುವ ಸಾಧ್ಯತೆಗಳಿರುತ್ತವೆ. ತರಬೇತಿ ನಂತರ ಅವರು ವಾರ್ಷಿಕವಾಗಿ ಸುಮಾರು 17 ರಿಂದ 18 ಲಕ್ಷ ರೂ.ಗಳ ಸಂಬಳವನ್ನು ಪಡೆಯುತ್ತಾರೆ. ಇದಲ್ಲದೇ ಉಚಿತ ವೈದ್ಯಕೀಯ ಸೌಲಭ್ಯ ಮತ್ತು ಮನೆಗೆ ಪ್ರಯಾಣ ಭತ್ಯೆ ಸಹ ನೀಡಲಾಗುತ್ತದೆ.
ಆಯ್ಕೆ ಅಭ್ಯರ್ಥಿಗಳಿಗೆ ಈ ಎಲ್ಲ ಹುದ್ದೆಗಳಿಗೆ ಬಡ್ತಿ ಪಡೆಯುವ ಅವಕಾಶ: ತಾಂತ್ರಿಕ ಪ್ರವೇಶ ಯೋಜನೆಯ ಮೂಲಕ ನೇಮಕಗೊಂಡ ಅಭ್ಯರ್ಥಿಗಳಿಗೆ ಸೇನೆಯ ಎಂಜಿನಿಯರಿಂಗ್, ಸಿಗ್ನಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಲೆಫ್ಟಿನೆಂಟ್ ಹುದ್ದೆಗೆ ನೇಮಕಗೊಂಡ ನಂತರ, ಅವರು ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್ ಕರ್ನಲ್, ಬ್ರಿಗೇಡಿಯರ್, ಮೇಜರ್ ಜನರಲ್ ನಿಂದ ಲೆಫ್ಟಿನೆಂಟ್ ಜನರಲ್ ಮತ್ತು ಜನರಲ್ ವರೆಗೆ ಬಡ್ತಿಗಳನ್ನು ಪಡೆಯಬಹುದು.
ತರಬೇತಿಯ ನಂತರ ಎಂಜಿನಿಯರಿಂಗ್ ಪದವಿ ಮತ್ತು ಲೆಫ್ಟಿನೆಂಟ್ ಹುದ್ದೆ: ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ನಂತರ, ಜುಲೈ ಮೊದಲ ವಾರದಲ್ಲಿ ಕಟ್ ಆಫ್ ಪರ್ಸೆಂಟೇಜ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಸೇವಾ ಆಯ್ಕೆ ಮಂಡಳಿ ಪ್ರಕ್ರಿಯೆಯು ಆಗಸ್ಟ್ ಮತ್ತು ಸೆಪ್ಟೆಂಬರ್ 2025 ರ ನಡುವೆ ಐದು ದಿನಗಳಲ್ಲಿ ನಡೆಯಲಿದೆ.
ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ ತರಬೇತಿ: ಆಯ್ಕೆ ಬಳಿಕ ಡೆಹ್ರಾಡೂನ್‌ನಲ್ಲಿರುವ ಕೆಡೆಟ್ ತರಬೇತಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಪೂರ್ವ-ಕಮಿಷನ್ ತರಬೇತಿ ನೀಡಲಾಗುತ್ತದೆ, ಇದರ ಅಡಿ 4 ವರ್ಷಗಳ ತರಬೇತಿ ಇರುತ್ತದೆ. ಅಭ್ಯರ್ಥಿಗೆ ಎಂಜಿನಿಯರಿಂಗ್ ಪದವಿಯನ್ನು ನೀಡಲಾಗುತ್ತದೆ. 3 ವರ್ಷಗಳ ತರಬೇತಿಯ ನಂತರ ಅಭ್ಯರ್ಥಿಯು ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಸ್ಟೈಫಂಡ್ ಪಡೆಯುತ್ತಾರೆ. ನಾಲ್ಕು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಯಲ್ಲಿ ನಿಯೋಜಿಸಲಾಗುತ್ತದೆ. ಇನ್ಯಾಕೆ ತಡ ನೀವೂ ಅರ್ಜಿ ಸಲ್ಲಿಸಿ.
ETV Bharat