Jio New Prepaid Plan: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ. ತನ್ನ ಈ ಯೋಜನೆಗಾಗಿ ಜಿಯೋ ಫುಡ್ ಡಿಲೆವರಿ ವೇದಿಕೆ ಸ್ವೀಗ್ಗಿ ಜೊತೆಗೆ ಕೈಜೋಡಿಸಿದೆ. ಈ ಹೊಸ ಪ್ಲಾನ್ ಬೆಲೆ ರೂ.855 ಆಗಿದ್ದು, ಇದರಲ್ಲಿ ಗ್ರಾಹಕರಿಗೆ ಕಂಪನಿ ಸ್ವೀಗ್ಗಿ ಒನ್ ಲೈಟ್ ಚಂದಾದಾರಿಕೆಯ ಜೊತೆಗೆ ಅನಿಯಮಿತ ಕರೆ ಹಾಗೂ ಉಚಿತ ಡೇಟಾ ಸೌಕರ್ಯಗಳನ್ನು ಒದಗಿಸಲಿದೆ. (Technology News In Kannada)

ಬೆಂಗಳೂರು: ಜಿಯೋ-ಸ್ವೀಗ್ಗಿ ಒಡಂಬಡಿಕೆಯ ಕುರಿತು ಹೇಳುವುದಾದರೆ, ಇದೆ ಮೊದಲಬಾರಿಗೆ ಟೆಲಿಕಾಂ ಕಂಪನಿಯೊಂದು ಫುಡ್ ಡಿಲೆವರಿ ವೇದಿಕೆಯ ಸೇವೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸಾಮಾನ್ಯವಾಗಿ ಟೆಲಿಕಾಂ ಕಂಪನಿಗಳು ತನ್ನ ಪ್ರೀಪೈಡ್ ಯೋಜನೆಗಳ ಜೊತೆಗೆ ಓಟಿಟಿ ವೇದಿಕೆಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತವೆ. ಇದುವರೆಗೆ ಜಿಯೋ ಮೂಲಕ ಚಲಾಯಿಸಲಾಗುತ್ತಿರುವ ಯೋಜನೆಗಳಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಸೋನಿ ಲೀವ್, ಜೀ5, ಅಮೆಜಾನ್ ಪ್ರೈಮ್ ಹಾಗೂ ನೆಟ್ ಫ್ಲಿಕ್ಸ್ ಗಳ ಚಂದಾದಾರಿಕೆ ನೀಡಲಾಗುತ್ತಿತ್ತು. (Technology News In Kannada)
866 ರೂ.ಗಳ ಜಿಯೋ ಪ್ರೀಪೈಡ್ ಯೋಜನೆ
ರಿಲಯನ್ಸ್ ನ ಈ ಹೊಸ ಪ್ರೀಪೈಡ್ ಯೋಜನೆ ಕುರಿತು ಮಾತನಾಡುವುದಾದರೆ. ಇದು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ನಿತ್ಯ 2ಜಿಬಿ 4ಜಿ ಉಚಿತ ಡೇಟಾ ನೀಡಲಾಗುತ್ತದೆ. ಅರ್ಥಾತ್ ಗ್ರಾಹಕರಿಗೆ ಒಟ್ಟು 168 ಜಿಬಿ 4ಜಿ ಡೇಟಾ ಸಿಗಲಿದೆ. ಇದಲ್ಲದೆ ಈ ಯೋಜನೆಯಲ್ಲಿ ದೇಶದ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಧ್ವನಿ ಕರೆಗಳು ಸೌಲಭ್ಯವನ್ನು ಒದಗಿಸಲಾಗುತ್ತದೆ.
ವಿಶೇಷತೆ ಎಂದರೆ ಒಂದು ವೇಳೆ ನೀವು ಜಿಯೋ 5ಜಿ ಬಳಸುತ್ತಿದ್ದರೆ, ಜಿಯೋ ವೆಲ್ ಕಮ್ ಕೊಡುಗೆಯ ಅಡಿ ನೀವು ಅನಿಯಮಿತ 5ಜಿ ಡೇಟಾ ಉಚಿತವಾಗಿ ಬಳಸಬಹುದು. ಈ ಪ್ಲಾನ್ ನ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಇದರಲ್ಲಿ ನಿಮಗೆ ಸ್ವೀಗ್ಗಿ ಒನ್ ಲೈಟ್ ಚಂದಾದಾರಿಗೆ ಮೂರು ತಿಂಗಳ ಅವಧಿಗೆ ಉಚಿತವಾಗಿ ಸಿಗಲಿದೆ.
ಸ್ವೀಗ್ಗಿ ಒನ್ ಲೈಟ್ ಚಂದದಾರಿಕೆಯಲ್ಲಿ ಸಿಗುವ ಸೌಲಭ್ಯಗಳು
>> 149 ರೂ.ಗಳಿಗಿಂತ ಹೆಚ್ಚಿನ ಫುಡ್ ಆರ್ಡರ್ ಗಳ ಮೇಲೆ ಫ್ರೀ ಹೋಮ್ ಡಿಲೆವರಿ.
>> 199 ರೂ .ಗಳಿಗಿಂತ ಹೆಚ್ಚಿನ ಇನ್ಸ್ಟಾಮಾರ್ಟ್ ಆರ್ಡರ್ ಗಳ ಮೇಲೆ ಉಚಿತ ಹೋಮ್ ಡಿಲೆವರಿ.
>> ಫುಡ್ ಹಾಗೂ ಇನ್ಸ್ಟಾಮಾರ್ಟ್ ಆರ್ಡರ್ ಗಳ ಮೇಲೆ ಯಾವುದೇ ಸರ್ಚಾರ್ಜ್ ಇರುವುದಿಲ್ಲ.
>> ರೇಗ್ಯೂಲರ್ ಆರ್ಡರ್ ಗಳನ್ನು ಹೊರತುಪಡಿಸಿ 20 ಸಾವಿರಕ್ಕಿಂತ ಹೆಚ್ಚು ಫುಡ್ ಡಿಲೆವರಿ ರೇಸ್ಟಾರೆಂಟ್ ಗಳಲ್ಲಿ ಶೇ.30 ರಷ್ಟು ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದು.
>> ರೂ.60ಕ್ಕಿಂತ ಹೆಚ್ಚಿನ ಮೊತ್ತದ ಜೀನಿ ಡಿಲೆವರಿಗಳ ಮೇಲೆ ಶೇ. 10 ರಷ್ಟು ಡೀಸ್ಕೌಂಟ್ ಸಿಗಲಿದೆ.
ಜಿಯೋ ಕಳೆದ ಕೆಲ ವಾರಗಳಿಂದ ಗುಂಪು ಚಂದಾದಾರಿಕೆಗಳನ್ನು ಹೊಂದಿದ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೇ ಟೆಲಿಕಾಂ ಕಂಪನಿ ಜಿಯೋ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಹೊಂದಿರುವ ಹೊಸ ವಾರ್ಷಿಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಗಳಲ್ಲಿ 2ಜಿಬಿ ಉಚಿತ ದೈನಂದಿನ ಡೇಟಾ ಕೊಡುಗೆ ನೀಡಲಾಗುತ್ತಿದೆ. ಈ ಪ್ಲಾನ್ ಬೆಲೆ ರೂ.3237 ಗಳಷ್ಟಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1