Jio Phone 5G: ಬಹುನಿರೀಕ್ಷಿತ ಜಿಯೋ ಫೋನ್ 5G ಯ ಮೊದಲ ಫೋಟೋ ಸೋರಿಕೆ: ಬೆಲೆ ಎಷ್ಟು ಗೊತ್ತೇ?

ನೂತನ ಜಿಯೋ ಫೋನ್ 5ಜಿ (Jio Phone 5G) ಸ್ಮಾರ್ಟ್​ಫೋನ್​ನ ಫೋಟೋ ಒಂದು ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಜಿಯೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಕಾಣಬಹುದು. ಇದು ಕಡು ನೀಲಿ ಬಣ್ಣದಲ್ಲಿದೆ.

ರಿಲಯನ್ಸ್ (Reliance) ಒಡೆತನದ ಜಿಯೋ ಕಂಪನಿ ತನ್ನ ಚೊಚ್ಚಲ ಜಿಯೋ ಫೋನ್ 5G ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಇದರ ಬಗ್ಗೆ ಯಾವುದೇ ಫೀಚರ್ಸ್, ಫೋಟೋ ಏನನ್ನೂ ರಿವೀಲ್ ಮಾಡಿರಲಿಲ್ಲ. ಆದರೀಗ ನೂತನ ಜಿಯೋ ಫೋನ್ 5ಜಿ (Jio Phone 5G) ಸ್ಮಾರ್ಟ್​ಫೋನ್​ನ ಫೋಟೋ ಒಂದು ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಅರ್ಪಿತ್ ಪಟೇಲ್ ಎಂಬವರು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಜಿಯೋ ಫೋನ್ 5G ಯ ಫೋಟೋವನ್ನು ಹಂಚಿಕೊಂಡಿದ್ದು, ಕೆಲ ಫೀಚರ್ಸ್ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ. ಇದರ ಬೆಲೆ ಕೂಡ ಅತಿ ಕಡಿಮೆ ಆಗಿದ್ದು, ಗ್ರಾಹಕರಲ್ಲಿ ಕುತೂಹಲ ಕೆರಳಿಸುವಂತೆ ಮಾಡಿದೆ.

ಜಿಯೋ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಕಾಣಬಹುದು. ಇದು ಕಡು ನೀಲಿ ಬಣ್ಣದಲ್ಲಿದೆ. ಜೊತೆಗೆ ಎಲ್ಇಡಿ ಫ್ಲ್ಯಾಷ್​ಗಾಗಿ ಕ್ಯಾಮೆರಾದ ಕೆಳಭಾಗದಲ್ಲಿ ಆಯ್ಕೆ ನೀಡಲಾಗಿದೆ. ಮುಂಭಾಗ ವಾಟರ್‌ಡ್ರಾಪ್ ನಾಚ್ ಹೊಂದಿರಬಹುದು ಎನ್ನಲಾಗಿದೆ. ಜಿಯೋ ಫೋನ್ 5G ಯ ಅಧಿಕೃತ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 10,000 ಕ್ಕಿಂತ ಕಡಿಮೆ ದರ ಇರಬಹುದೆಂದು ಅಂದಾಜಿಸಲಾಗಿದೆ. ಇದರಲ್ಲಿ ಡೈಮೆನ್ಸಿಟಿ 700 SoC ಅಥವಾ Unisoc 5G ಚಿಪ್‌ಸೆಟ್ ಅನ್ನು ಒಳಗೊಂಡಿರಬಹುದು ಎಂದು ಟ್ವಿಟ್ಟರ್ ಬಳಕೆದಾರರು ಹೇಳಿದ್ದಾರೆ.

Source : https://tv9kannada.com/technology/jio-phone-5gs-live-images-have-been-leaked-online-check-exclusive-photo-and-specs-vb-607273.html

Leave a Reply

Your email address will not be published. Required fields are marked *