ಚಿತ್ರದುರ್ಗ ಅ. 08
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಎದುರಿನಲ್ಲಿರುವ ವೀರಶೈವ ಅರ್ಬನ್ ಕ್ರೆಡಿಟ್ ಕೋ. ಆಫ್. ಸೊಸೈಟಿ ಲಿ.ವತಿಯಿಂದ ಧವಳಗಿರಿ ಬಡಾವಣೆಯಲ್ಲಿ ಸೊಸೈಟಿಯಿಂದ ರಜತ ಭವನ” ನಿರ್ಮಿಸುವ ಹಿನ್ನಲೆಯಲ್ಲಿ ವಾಣಿಜ್ಯೋದ್ಯಮಿಗಳು ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., ಸಂಸ್ಥಾಪಕ ಅಧ್ಯಕ್ಷರಾದ ಜೆ.ಎಂ.ಜಯಕುಮಾರ್‍ರವರನ್ನು ರಜತ ಭವನ ಮತ್ತು ರಜತ ಮಹೋತ್ಸವಕ್ಕೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು ಇಂದು ಅವರಿಗೆ ಆದೇಶದ ಪತ್ರವನ್ನು ಸೊಸೈಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ನಿರ್ದೆಶಕರುಗಳ ಸಮ್ಮುಖದಲ್ಲಿ ನೀಡಲಾಯಿತೆಂದು ವೀರಶೈವ ಅರ್ಬನ್ ಕ್ರೆಡಿಟ್ ಕೋ. ಆಫ್. ಸೊಸೈಟಿ ಲಿ.ನ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ತಿಳಿಸಿದ್ದಾರೆ. ಜೆ.ಎಂ.ಜಯಕುಮಾರ್‍ರವರು ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸೊಸೈಟಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ನಿಮ್ಮ ಅವಧಿಯಲ್ಲಿ ಸೊಸೈಟಿಯು ಸ್ವಂತ ಕಟ್ಟಡ ಹೊಂದಿದ್ದು ಮತ್ತು ಧವಳಗಿರಿ ಬಡಾವಣೆಯಲ್ಲಿ ಸೊಸೈಟಿಯಿಂದ ಸಮುದಾಯಭವನ ನಿರ್ಮಿಸುವ ದೂರದೃಷ್ಠಿಯಿಂದ ಚಿತ್ರದುರ್ಗ ನಗರಾಭಿವೃಧಿ ಪ್ರಾಧಿಕಾರದಿಂದ ನಿವೇಶನ ತಮ್ಮ ಅಧಿಕಾರಾವಧಿಯಲ್ಲಿ ಖರೀದಿಸಲಾಗಿದೆ. ಸದರಿ ನಿವೇಶನದಲ್ಲಿ ಸೊಸೈಟಿಯು “ರಜತ” ಮಹೋತ್ಸವದ ಸವಿನೆನಪಿಗಾಗಿ “ರಜತ ಭವನ”ವನ್ನು ನಿರ್ಮಿಸಲು ತಮ್ಮ ಅಧ್ಯಕ್ಷತೆಯಲ್ಲಿಯೇ ಕಟ್ಟಡ ನಿರ್ಮಾಣವಾಗಬೇಕೆಂದು ಆಡಳಿತ ಮಂಡಲಿಯ ಮಾಸಿಕ ಸಭೆಯಲ್ಲಿ ಆಡಳಿತ ಮಂಡಳಿಯು ಸರ್ವಾನುಮತದಿಂದ ತೀರ್ಮಾಸಿದೆ.
ತಾವು ರಜತ ಭವನ ಮತ್ತು ರಜತ ಮಹೋತ್ಸವದ ಅಧ್ಯಕ್ಷತೆ ವಹಿಸಿಕೊಂಡು, ಹಾಲಿ ಆಡಳಿತ ಮಂಡಲಿಯ ಸದಸ್ಯರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿಕೊಳ್ಳಲು ತಮಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ತಾವು ಕೈಗೊಳ್ಳುವ ಎಲ್ಲ ತೀರ್ಮಾನಗಳಿಗೆ ಆಡಳಿತ ಮಂಡಲಿಯು ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪಟೇಲ್ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಜಿ.ಟಿ. ಸುರೇಶ್, ನಿರ್ದೇಶಕರುಗಳಾದ ಎಸ್. ಪರಮೇಶ್ವರಪ್ಪ, ಟಿ.ಮಹಾಂತೇಶ್, ಎಸ್.ವಿ. ನಾಗರಾಜಪ್ಪ, ಎಸ್. ಷಣ್ಮುಖಪ್ಪ (ಕೆ.ಇ.ಬಿ.) ಡಿ.ಎಸ್.ಮಲ್ಲಿಕಾರ್ಜನ್, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಶ್ರೀಮತಿ ಜಯಶ್ರೀ, ಶ್ರೀಮತಿ ಶೈಲಜಾ ಬಾಬು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೊಸೈಟಿಯ ರಜತ ಮಹೋತ್ಸವದ ರಜತ ಭವನ ನಿರ್ಮಾಣಕ್ಕೆ ಅಧ್ಯಕ್ಷರಾದ ಜಯಕುಮಾರ್‍ರವರ ನೇತೃತ್ವದಲ್ಲಿ ಸಮಿತಿಯನ್ನು ರಚನೆಯನ್ನುನ ಮಾಡಲಾಗಿದ್ದು, ಪಟೇಲ್ ಶಿವಕುಮಾರ್ ರವರನ್ನು ಕಾರ್ಯದರ್ಶೀಯನ್ನಾಗಿ, ಉಪಾಧ್ಯಕ್ಷರಾಗಿ ಎಸ್,ಷಣ್ಮುಖಪ್ಪ(ಕೆ.ಇ.ಬಿ.)ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜಪ್ಪ, ನಿರ್ದೆಶಕರನ್ನಾಗಿ ಜಿ.ಟಿ.ಸುರೇಶ್, ಟಿ.ಮಹಾಂತೇಶ್, ಡಿ.ಎಸ್.ಮಲ್ಲಿಕಾರ್ಜನ್, ಬಿ.ಎಂ. ಕರಿಬಸವಯ್ಯ, ಸಿ.ಚಂದ್ರಪ್ಪ, ಶ್ರೀಮತಿ ಜಯಶ್ರೀ, ಶ್ರೀಮತಿ ಶೈಲಜಾ ಬಾಬು ಸಮಿತಿಯಲ್ಲಿ ಸೇರಿದ್ದಾರೆ.
Views: 27