ಜೆ.ಎನ್.ಕೋಟೆ| ಕೋಳಿ ಫಾರಂಗೆ ಅನುಮತಿ ನೀಡದಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 16 : ತಾಲ್ಲೂಕಿನ ಜೆ.ಎನ್.ಕೋಟೆ ಗ್ರಾಮದಲ್ಲಿ ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಅಂಧ್ರ ಪ್ರದೇಶದ ಉದ್ಯಮಿಯೋರ್ವರು ಕೋಳಿ ಫಾರಂ ಆರಂಭಿಸಲು ಉದ್ಧೇಶಿಸಿದ್ದು, ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಸಹಾ ಕೋಳಿ ಫಾರಂನ್ನು ಪ್ರಾರಂಭಿಸಬಾರದೆಂದು
ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

ಈ ಸಂಭಂಧ ಚಿತ್ರದುರ್ಗದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗಯನ್ನು
ನಡೆಸಿದ ರೈತರು ಈ ಭಾಗದಲ್ಲಿ ಅಂಧ್ರ ಪ್ರದೇಶದ ಉದ್ಯಮಿಯೋರ್ವರು ಕೋಳಿ ಫಾರಂ ಆರಂಭಿಸಲು ಉದ್ಧೇಶಿಸಿದ್ದು, ಈ ಸಂಬಂಧ
ಕಾಮಗಾರಿ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಅವರು ಗ್ರಾಮ ಪಂಚಾಯಿತಿ ಅನುಮತಿ ಪಡೆದುಕೊಂಡಿಲ್ಲ. ನಾವ್ಯಾರೂ ಕೂಡ ಕೋಳಿ
ಫಾರಂ ವಿರೋಧಿಯಲ್ಲ ಕುಕ್ಕುಟೋದ್ಯಮ ಕೂಡಾ ರೈತ ಅಭಿವೃದ್ಧಿ ಪೂರಕವಾಗಿದ್ದು, ತಾಂತ್ರಿಕತೆ ಮೂಲಕ ಕೋಳಿ ಫಾರಂ ನಿರ್ವಹಣೆ
ಮಾಡಬೇಕಿದೆ. ಹಾಲಿ ಕೋಳಿ ಫಾರಂ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶ ಕೆ.ಎನ್.ಕೋಟಿ, ಕಸವನಹಳ್ಳಿ, ನೆರನಹಾಳು.
ದೊಡ್ಡಸಿದ್ದವ್ವನಹಳ್ಳಿ ಕೇಂದ್ರ ಬಿಂದುವಾಗಿರುತ್ತದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆಯಾಗಿರುತ್ತದೆ. ಬೆಳಗಿನ ಜಾವ
ಸುಮಾರು 5ಗಂಟೆಯಿಂದ ರಾತ್ರಿ 12ರವರೆಗೂ ನೂರಾರು ದ್ವಿಚಕ್ರವಾಹನ ವಾಣಿಜ್ಯ ವಾಹನ ಬಸ್ಸು, ಲಾರಿ, ಶಾಲಾ ವಾಹನಗಳು
ದಿನನಿತ್ಯ ಸಂಚರಿಸುವ ರಸ್ತೆಯಾಗಿರುತ್ತದೆ ಬಸ್ ನಿಲ್ದಾಣವಾಗಿರುತ್ತದೆ. ಪ್ರತಿದಿನ ಕಸವನಹಳ್ಳಿ ಹಾಗೂ ನೆರೇನಹಾಳು ಗ್ರಾಮದ
ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿಯೇ ಬಸ್ ಹತ್ತಿಕೊಂಡು ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ಕೋಳಿ ಫಾರಂ ಆರಂಭಿಸಿದರೆ
ಅದರಿಂದ ಹೊರ ಸೂಸುವ ಕೆಟ್ಟ ವಾಸನೆ ಗ್ರಾಮೀಣ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಈಗಾಗಲೇ ಜಿ.ಎನ್.ಕೋಟೆ ಬಳಿ ಒಂದು ಕೋಳಿ ಫಾರಂ ಇದ್ದು, ಅದನ್ನು ಆರಂಭಿಸುವ ಮುನ್ನ ರೈತರಾರೂ ವಿರೋಧ
ವ್ಯಕ್ತಪಡಿಸಿರಲಿಲ್ಲ. ನಂತರ ಈ ಫಾರಂನಿಂದ ಆದ ಪರಿಸರ ಹಾನಿ ಹಾಗೂ ರೈತರ ಬದುಕಿನ ಮೇಲೆ ಬೀರಿದ ಗಂಭೀರ
ಪರಿಣಾಮಗಳು ನಿತ್ಯವೂ ಇಮ್ಮಡಿಯಾಗುತ್ತಿವೆ. ಜೆ.ಎನ್.ಕೋಟೆಯಿಂದ ಒಂದು ಕಿ.ಮೀ ದೂರದಲ್ಲಿರುವ ಈ ಕೋಳಿ ಫಾರಂ ತ್ಯಾಜ್ಯ
ಒಂದೆಡೆ ಮಳೆ ಬಂದಾಗ ಕೆರೆಗೆ ಹರಿದು ಬಂದು ಕೆರೆಯ ತುಂಬಾ ಕಲುಷಿತವಾಗಿರುತ್ತದೆ. ಮತ್ತೊಂದೆಡೆ ನೊಣಗಳ ಹಾವಳಿ
ವಿಪರೀತವಾಗಿದೆ ಮತ್ತು ಅಲ್ಲಿನ ಸುತ್ತಮುತ್ತ ರೈತರು ಯಾವುದೇ ತರಹದ ತರಕಾರಿ, ಹೂವು ಬೆಳೆಗಳು ಬೆಳೆಯದಂತಹ ಪರಿಸ್ಥಿತಿ
ನಿರ್ಮಾಣವಾಗಿದೆ. ಗ್ರಾಮದಲ್ಲಿ ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗದಂತಹ ವಾತಾವರಣ ಸೃಷ್ಟಿಯಾಗಿದೆ ಮತ್ತು ಬೀದಿ
ನಾಯಿಗಳ ಹಾವಳಿಯಿಂದ ಬಡಪಾಯಿಗಳು ಸಾಕಿದ ಕುರಿ, ಮೇಕೆ, ದನಗಳನ್ನು ಮಾಂಸದ ರುಚಿಯಿಂದ ಸಾಕು ಪ್ರಾಣಿಗಳ ಮೇಲೆ
ಎರಗಿ ಕೊಂದು ಹಾಕಿದ ಘಟನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದಿರುತ್ತದೆ. ಇದರಿಂದ ಗ್ರಾಮದ ಜನರು ಅಸಹನೀಯ
ಪರಿಸ್ತಿತಿಯಲ್ಲಿ ಜನತೆ ಬದುಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಚಿತ್ರದುರ್ಗ ಸಮೀಪದ ಹಂಪಯ್ಯನಮಾಳಿಗೆ ಬಳಿ ಚಿತ್ರದುರ್ಗ ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕವಿದ್ದು, ಇಲ್ಲಿಂದ ಹೊರ
ಸೂಸುವ ಕೆಟ್ಟ ವಾಸನೆ ಹಾಗೂ ನೊಣಗಳ ಹಾವಳಿಯಿಂದ ಅಲ್ಲಿನ ಜನತೆ ಬೇಸತ್ತಿದ್ದಾರೆ. ಇದೇ ಪರಿಸ್ಥಿತಿ ಜೆ.ಎನ್.ಕೋಟೆ
ಆಸುಪಾಸಿನಲ್ಲಿ ಉಲ್ಬಣಗೊಂಡಿದೆ. ಈ ಆಂದ್ರ ಮೂಲದ ಉದ್ಯಮಿ ಗ್ರಾಮ ಪಂಚಾಯಿತಿಂದ ಅನುಮತಿ ಪಡೆಯದೇ ಕಾಮಗಾರಿ

ಆರಂಭಿಸಿರುವುದು ನಿಯಮಾವಳಿ ಮೀರಿ ವರ್ತಿಸುವ ಸಧ್ಯತೆಗಳು ಮೊದಲೆ ಗೋಚರಿಸಿದಂತಾಗಿದೆ. ಆದ್ದರಿಂದ ಕೋಳಿ ಫಾರಂ
ನಿರ್ಮಿಸುವ ಮುನ್ನ ಗ್ರಾಮಸ್ಥರ ಸಭೆ ಕರೆದು ಅವರ ಅಭಿಪ್ರಾಯ ಕೇಳಬೇಕು ಇದರಿಂದ ಪರಿಸರದ ಮೇಲೆ ಆಗುವ ಅನಾಹುತಗಳ
ಪರಿಗಣಿಸಬೇಕು. ಈ ತರಹದ ಯಾವುದೇ ಮುಂಜಾಗ್ರತೆ ಕ್ರಮಗಳ ಕೈಗೊಳ್ಳದೆ, ನಿಯಮಾನುಸಾರ ನಡೆದುಕೊಳ್ಳದೆ
ಕೋಳಿಫಾರಂನ್ನು ಆರಂಭಿಸುವ ಹಂತದಲ್ಲಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಈ ಸಂಬಂಧ ಸ್ಥಳಕ್ಕೆ ಆಗಮಿಸಿ ಜೆ.ಎನ್.ಕೋಟೆ
ಹಾಗೂ ನೆರನಾಳು ಮತ್ತು ಕಸನವನಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರ ಅಹವಾಲು ಆಲಿಸಬೇಕು, ಪರಿಸರ ಮೇಲಾಗುವ
ಪರಿಣಾಮಗಳ ಅವಲೋಕಿಸಬೇಕು. ಯಾರೋ ಓರ್ವ ಉದ್ಯಮಿ ತನ್ನ ಲಾಭಕ್ಕಾಗಿ ಕೈಗೊಳ್ಳುವ ಚಟುವಟಿಕೆಗೆ ರೈತ ಸಮೂಹ
ತೊಂದರೆ ಪಡುವ ಅಗತ್ಯವಿಲ್ಲ. ಹಾಗಾಗಿ ಕೋಳಿ ಫಾರಂಗೆ ಅನುಮತಿ ನೀಡಬಾರದು. ಅವರು ಹಳ್ಳಿಗಳು ಇಲ್ಲದ ಕಡೆ, ಜನವಸತಿ
ಪ್ರದೇಶ ಬಿಟ್ಟು ಕೋಳಿ ಫಾರಂ ಆರಂಭಿಸಿಕೊಳ್ಳಲು ನಮ್ಮದೇನೂ ವಿರೋದವಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಧನಂಜಯ, ರೈತ ಮುಖಂಡರಾದ ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜಿ.ಸುರೇಶ್ ಬಾಬು,
ಕಾಂತರೆಡ್ಡಿ, ಈಶ್ವರಪ್ಪ, ಜಗನ್ನಾಥ್, ಶಿವರುದ್ರಪ್ಪ, ಕೇಶವಪ್ಪ, ಪುರುಷೋತ್ತಮ, ಕಾಂತರಾಜ್, ಮಾರುತಿ, ಚಂದ್ರಶೇಖರ್,
ಶಿವಶಂಕರಪ್ಪ, ಯುಮುನೇಶ್, ತಿಪ್ಪೇಶ್, ಕಾರ್ತಿಕ್ ಚಂದ್ರಮೌಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 13

Leave a Reply

Your email address will not be published. Required fields are marked *