ಚಿತ್ರದುರ್ಗ, ಫೆಬ್ರವರಿ, 02: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ಫೆಬ್ರವರಿ 5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಆಸಕ್ತ ನಿರುದ್ಯೋಗಿ ಯುವಕ ಯುವತಿಯರು ಭಾಗವಹಿಸಬಹುದಾಗಿದೆ.

ಐಸಿಐಸಿಐ ಬ್ಯಾಂಕ್ (ಟಿವಿಎಸ್ ಟ್ರೈನಿಂಗ್ ಸರ್ವೀಸಸ್) ಮತ್ತು ಕ್ರೇಡಿಟ್ ಅಕ್ಸೆಸ್ ಗ್ರಾಮೀಣ್ ಲಿಮಿಟೆಡ್ನಲ್ಲಿ ಖಾಲಿ ಇರುವ ರಿಲೇಶಿಯನ್ಶಿಪ್ ಮ್ಯಾನೇಜರ್ ಮತ್ತು ಟ್ರೈನೀ ಕೇಂದ್ರ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಈ ಕಂಪನಿಗಳಿಗೆ ಕಾರ್ಯನಿರ್ವಹಿಸಲು 18 ರಿಂದ 28 ವರ್ಷದೊಳಗಿನ ಪುರುಷ, ಮಹಿಳೆ ಅಭ್ಯರ್ಥಿಗಳಿಗೆ ನೇರವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಐಸಿಐಸಿಐ ಬ್ಯಾಂಕ್ (ಟಿವಿಎಸ್ ಟ್ರೈನಿಂಗ್ ಸರ್ವೀಸಸ್)ನಲ್ಲಿ ರಿಲೇಶಿಯನ್ಶಿಪ್ ಮ್ಯಾನೇಜರ್ನ 80 ಹುದ್ದೆಗಳು ಖಾಲಿ ಇದ್ದು, ಯಾವುದೇ ಪದವಿ (ಬಿ.ಇ, ಬಿ.ಟೆಕ್ ಮತ್ತು ಎಂಬಿಎ ಅನ್ವಯಿಸುವುದಿಲ್ಲ) ಹೊಂದಿರಬೇಕು. ಪ್ರತಿ ಮಾಹೆ 21 ಸಾವಿರ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬೇಕಿದೆ.
ಕ್ರೇಡಿಟ್ ಅಕ್ಸೆಸ್ ಗ್ರಾಮೀಣ್ ಲಿಮಿಟೆಡ್ನಲ್ಲಿ ಟ್ರೈನೀ ಕೇಂದ್ರ ಮ್ಯಾನೇಜರ್ನ 40 ಹುದ್ದೆಗಳು ಖಾಲಿ ಇದ್ದು, ಪಿಯುಸಿ, ಐಟಿಐ, ಯಾವುದೇ ಪದವಿ ಹೊಂದಿರಬೇಕು. ಮಾಸಿಕ ವೇತನ 13 ಸಾವಿರ ನೀಡಲಾಗುವುದು. ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಕೆಲಸ ನಿರ್ವಹಿಸಬೇಕಿದೆ. ಆಸಕ್ತರು ಬಯೋಡಾಟಾ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಪೋಟೋ, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ದೂರವಾಣಿ ಸಂಖ್ಯೆ 9945587060, 7022459064ಗೆ ಸಂಪರ್ಕಿಸಬಹುದು ಎಂದು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1