Job News: ಅಟೆನ್ಷನ್‌ ಪ್ಲೀಸ್‌; ಸರ್ಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದು, ನಾಳೆ ಕೊನೆಯ ದಿನ.

ಬೆಂಗಳೂರು: ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕು ಎನ್ನುವುದು ಬಹತೇಕರ ಕನಸು. ಅದಕ್ಕಾಗಿ ಅನೇಕರು ಹಲವು ವರ್ಷಗಳಿಂದ ಕಠಿಣ ತಯಾರಿಯಲ್ಲಿ ತೊಡಗಿರುತ್ತಾರೆ. ಇದೀಗ ಅಂತಹದ್ದೊಂದು ಸುವರ್ಣಾವಕಾಶ ಬಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸುಮಾರು 6,740 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಗಮನಿಸಿ ಈ ಪೈಕಿ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದ್ದರೆ ಕೆಲವು ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ನಾಳೆಗೆ ಕೊನೆಗೊಳ್ಳುತ್ತದೆ. ಹೀಗಾಗಿ ಬೇಗ ಬೇಗ ಅಪ್ಲೈ ಮಾಡಿ 

ಗ್ರೂಪ್‌ ಬಿ ಹುದ್ದೆಗಳು

ರಾಜ್ಯ ಸರ್ಕಾರದ 9 ಇಲಾಖೆಗಳ ಉಳಿಕೆ ಮೂಲ ವೃಂದ ಹಾಗೂ ಎಚ್‌ಕೆ ವೃಂದದ ವಿವಿಧ ಗ್ರೂಪ್‌ ಬಿ 327 ಹುದ್ದೆಗಳ ಅರ್ಜಿಗೆ ಇಂದೇ (14-05-2024) ಕೊನೆ ದಿನವಾಗಿದೆ. ಇಂದು ರಾತ್ರಿ 11.59 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ಇದೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಪದವಿ, ಸ್ನಾತಕೋತ್ತರ ಪದವಿ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು.

247 ಪಿಡಿಒ ಹುದ್ದೆಗಳು

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಪಿಡಿಇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆ (ಮೇ 15) ಕೊನೆಯ ದಿನ. ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. 150 ಆರ್‌ಪಿಸಿ ಮತ್ತು 97 ಎಚ್‌ಕೆ ಹುದ್ದೆಗಳು ಸೇರಿ ಒಟ್ಟು 247 ಪೋಸ್ಟ್‌ಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು ಮೇ 15ರ ರಾತ್ರಿ 11 ಗಂಟೆವರೆಗೆ ಅವಕಾಶ ಇದೆ.

1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು

ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಒಟ್ಟು 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫೆ. 20ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆಯ ದಿನ. ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಲುಬಹುದು.

ಯುಪಿಎಸ್‌ಸಿ ಸಿಎಪಿಎಫ್‌ 506 ಹುದ್ದೆಗಳು

ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಾದ ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್‌ ಪಡೆ, ಇಂಡೊ-ಟೆಬೆಟನ್ ಗಡಿ ಪೊಲೀಸ್‌ ಮತ್ತು ಸಶಸ್ತ್ರ ಸೀಮಾ ಬಲ ಪಡೆಗಳಲ್ಲಿ ಅಗತ್ಯ ಗ್ರೂಪ್‌ ಎ ಅಸಿಸ್ಟಂಟ್‌ ಕಮಾಂಡಂಟ್‌ -506 ಹುದ್ದೆಗಳಿಗೆ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ 14-05-2024 ರ 18-00 ಗಂಟೆವರೆಗೆ. 

ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ 4,660 ಹುದ್ದೆಗಳು

ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿ ಖಾಲಿ ಇರುವ ಬರೋಬ್ಬರಿ 4,660 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಇಂದೇ ಕೊನೆಯ ದಿನ. ಕಾನ್‌ಸ್ಟೇಬಲ್‌, ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು ಇದಾಗಿದ್ದು, ಎಸ್ಸೆಸ್ಸೆಲ್ಸಿ ತೆರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು.

Source : https://vistaranews.com/job/job-news-jobs-for-sslc-puc-and-degree-holder-last-date-today/652031.html

Leave a Reply

Your email address will not be published. Required fields are marked *