ರೋಟರಿ ಟ್ರಸ್ಟ್-ಯುವಜಯ ಫೌಂಡೇಶನ್ ವತಿಯಿಂದ ಉದ್ಯೋಗ ಆಯ್ಕೆ ಆಪ್ತ ಸಮಾಲೋಚನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 14

ರೋಟರಿ ಟ್ರಸ್ಟ್ ಹಾಗೂ ಯುವಜಯ ಫೌಂಡೇಶನ್ ಸಹಯೋಗದಲ್ಲಿತರಬೇತಿ ಹಾಗೂ ಉದ್ಯೋಗಕ್ಕಾಗಿ ವಿದ್ಯಾವಂತ ನಿರುದ್ಯೋಗ ಯುವಕ-ಯುವತಿಯರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಫೆಬ್ರವರಿ 18 ರಂದು ಬೆಳಗ್ಗೆ 10 ಗಂಟೆಗೆ ರೋಟರಿ ಸಭಾಭವನದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಆಪ್ತ ಸಮಾಲೋಚನೆಯನ್ನು ಆಯೋಜಿಸಿದೆ.

ಕನಿಷ್ಠ ಯಾವುದೇ ಪದವಿ ಹೊಂದಿದವರಿಗೆ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ,ಬ್ಯಾಂಕಿಂಗ್, ಫೈನಾನ್ಸ್, ಇನ್ಸುರೆನ್ಸ್, ಹಣಕಾಸು, ಹಾಗೂ ಸರ್ವಿಸ್ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳಿದ್ದು, ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಪ್ತ ಸಮಾಲೋಚನೆಯಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಪೂರಕ ತರಬೇತಿಯನ್ನು ನೀಡಿ ಆಯ್ಕೆಯಾದ ಕ್ಷೇತ್ರಕ್ಕೆ ಅನುಗುಣವಾಗಿ ಶೇ.100 ಪ್ರತಿಶತ ಉದ್ಯೋಗವಕಾಶಕ್ಕೆ ಪ್ರೇರಣೆ ನೀಡಲಾಗುತ್ತದೆ.

ಈ ಕಾರ್ಯಕ್ರಮವು ಸೀಮಿತ ಕಾಲವಕಾಶದಾಗಿದ್ದು, ಆಸಕ್ತರುಸಮಾಲೋಚನೆಯಲ್ಲಿ ಭಾಗವಹಿಸಬಹುದಾಗಿದ್ದು, ಹೆಸರು ನೋಂದಣಿಗೆ ಸಂಪರ್ಕಿಸಿ- 7411504211

Leave a Reply

Your email address will not be published. Required fields are marked *