
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 11 : ಶ್ರೀ ಪಾಶ್ರ್ವನಾಥ ಶಾಲೆಯಲ್ಲಿ ಶನಿವಾರ ಸಂಕ್ರಾಂತಿ ಸಂಭ್ರಮ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂಬ ಸಂದೇಶವನ್ನು ತಿಳಿಸುವ ಸಂಸ್ಕೃತಿಯನ್ನು ಬಿಂಬಿಸುವ ಸುಗ್ಗಿಯ ಹಬ್ಬ ಸಂಕ್ರಾಂತಿಯನ್ನು
ಇಂದು ಚಿತ್ರದುರ್ಗ ನಗರದ ಶ್ರೀ ಪಾಶ್ರ್ವನಾಥ ಶಾಲೆಯ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಶಾಲೆಯ ಮಕ್ಕಳು ದೇಸಿ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣ ಧರಿಸಿ ಸುಗ್ಗಿಯ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಬೀಸುವಕಲ್ಲು, ನೇಗಿಲು, ಬಣವೆ, ರಾಗಿಯ ರಾಶಿ, ಎತ್ತಿನ ಗಾಡಿ ಹಳ್ಳಿಯ ಸೊಬಗನ್ನು ಬಿಂಬಿಸುವ ರೂಪವನ್ನು ಪ್ರದರ್ಶಿಸಿದರು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನ, ಕಾರ್ಯದರ್ಶಿಗಳಾದ ಸುರೇಶ ಕುಮಾರ್ ಸಿಸೋಡಿಯ ಹಾಗೂ
ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯಿನಿಯಾದ ನಾಜಿಮಾ ಸ್ವಲೇಹಾ ಮೇಡಂ ಶ್ರೀಮತಿ ವಿಜಯಲಕ್ಷ್ಮಿಮೇಡಂ
ಶಾಂತಕುಮಾರಿ ಮೇಡಂ ಹಾಗೂ ಬೋಧಕ ಬೋಧಕೇತರ ವರ್ಗ ಹಾಗೂ ಪೋಷಕರು ಭಾಗವಹಿಸಿ ಕಾರ್ಯಕ್ರಮ
ಯಶಸ್ವಿಗೊಳಿಸಿದರು.