ಬಂದಿದೆ Juice Jacking Scam : ಫೋನ್ ಚಾರ್ಜ್ ಗೆ ಇಟ್ಟರೆ ಸಾಕು ಖಾತೆಯಿಂದ ಹಣ ಮಾಯ ! RBI ಜಾರಿಗೊಳಿಸಿದೆ ಅಲರ್ಟ್

ಜ್ಯೂಸ್ ಜಾಕಿಂಗ್ ಹಗರಣವು ಸೈಬರ್ ಅಪರಾಧಿಗಳು ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನಗಳಿಂದ ಪ್ರಮುಖ ಡೇಟಾವನ್ನು ಕದಿಯಲು ಅಳವಡಿಸಿಕೊಳ್ಳುವ ಒಂದು ವಿಧಾನವಾಗಿದೆ. 

ಬೆಂಗಳೂರು : ಕೆಲವೊಮ್ಮೆ ಫೋನ್ ಬ್ಯಾಟರಿ ಖಾಲಿಯಾಯಿತು  ಎನ್ನುವ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ನಲ್ಲಿ ಇರಿಸುತ್ತಾರೆ. ಆದರೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಬಳಸುವಾಗ ಜಾಗರೂಕರಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಕೆಲವು ವಂಚಕರು ‘ಜ್ಯೂಸ್ ಜಾಕಿಂಗ್’ ಹಗರಣದ ಮೂಲಕ ಜನರನ್ನು ತಮ್ಮ ಜಾಲದಲ್ಲಿ ಸಿಲುಕಿಸಿಕೊಳ್ಳುತ್ತಾರೆ. ಈ ಹಗರಣದ ಬಗ್ಗೆ ಆರ್‌ಬಿಐ ಎಚ್ಚರಿಕೆಯನ್ನೂ ನೀಡಿದೆ. 

ಹಣಕಾಸು ವಲಯದಲ್ಲಿನ ಹಣಕಾಸು ವಂಚನೆಗಳ ಕುರಿತು RBI ಬುಕ್ಲೆಟ್ ಪ್ರಕಾರ,  ಜ್ಯೂಸ್ ಜಾಕಿಂಗ್ ಒಂದು ಹಗರಣವಾಗಿದೆ. ಈ ಮೂಲಕ ಸೈಬರ್ ಕ್ರಿಮಿನಲ್‌ಗಳು ನಿಮ್ಮ ಮೊಬೈಲ್‌ನಿಂದ ಪ್ರಮುಖ ಡೇಟಾವನ್ನು ಕದಿಯುತ್ತಾರೆ. ಈ ಮೂಲಕ ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತಾರೆ. 

ಏನಿದು ಜ್ಯೂಸ್ ಜಾಕಿಂಗ್ ಹಗರಣ ? : 
ಜ್ಯೂಸ್ ಜಾಕಿಂಗ್ ಹಗರಣವು ಸೈಬರ್ ಅಪರಾಧಿಗಳು ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಸಾಧನಗಳಿಂದ ಪ್ರಮುಖ ಡೇಟಾವನ್ನು ಕದಿಯಲು ಅಳವಡಿಸಿಕೊಳ್ಳುವ ಒಂದು ವಿಧಾನವಾಗಿದೆ. ಈ ರೀತಿಯ ಹಗರಣವನ್ನು ನಿರ್ವಹಿಸಲು, ಸೈಬರ್ ಅಪರಾಧಿಗಳು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಮಾಲ್‌ವೇರ್ ಹೊತ್ತ ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ಅನ್ನು ಇನ್ಸ್ಟಾಲ್ ಮಾಡುತ್ತಾರೆ. ಈ ಸೈಬರ್ ಅಪರಾಧಿಗಳು ಯುಎಸ್‌ಬಿ ಪೋರ್ಟ್‌ಗಳು ಅಥವಾ ಚಾರ್ಜಿಂಗ್ ಕಿಯೋಸ್ಕ್‌ಗಳಂತಹ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ಮೂಲಕ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಾರೆ.

ಮೊಬೈಲ್‌ನ ಚಾರ್ಜಿಂಗ್ ಪೋರ್ಟ್ ಅನ್ನು ಫೈಲ್/ಡೇಟಾ ವರ್ಗಾವಣೆಗೆ ಬಳಸಬಹುದು. ಸೈಬರ್ ದುಷ್ಕರ್ಮಿಗಳು ಅಲ್ಲಿ ಸಂಪರ್ಕಗೊಂಡಿರುವ ಫೋನ್‌ಗಳಿಗೆ ಮಾಲ್‌ವೇರ್ ಅನ್ನು ವರ್ಗಾಯಿಸಲು ಸಾರ್ವಜನಿಕ ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸುತ್ತಾರೆ. ಈ ಮೂಲಕ  ಮೊಬೈಲ್ ಫೋನ್‌ನಿಂದ ಇಮೇಲ್‌ಗಳು, ಎಸ್‌ಎಂಎಸ್,  ಪಾಸ್‌ವರ್ಡ್‌ಗಳು ಇತ್ಯಾದಿಗಳಂತಹ ಡೇಟಾವನ್ನು ಕದಿಯುತ್ತಾರೆ.

ಅಪಾಯವನ್ನು ತಪ್ಪಿಸುವುದು ಹೇಗೆ ? : 
ಜ್ಯೂಸ್ ಜ್ಯಾಕ್ ಹಗರಣದಿಂದ ಪಾರಾಗಲು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.  ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಅನ್ನು ಬಳಸುವುದು ಅನಿವಾರ್ಯ ಎಂದಾದರೆ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವ ಮೊದಲು USB ಕೇಬಲ್ ಅನ್ನು ಎಚ್ಚರಿಕೆಯಿಂದ ಪರೀಕ್ಷಿಸಿಕೊಳ್ಳಿ. 

ಜ್ಯೂಸ್ ಜ್ಯಾಕ್ ಹಗರಣದ ಅಪಾಯದಿಂದ ಪಾರಾಗುವ ಇತರ ಕ್ರಮ : 
– ನಿಮ್ಮ ಫೋನ್ ಅನ್ನು ಪಾಸ್‌ವರ್ಡ್‌ನೊಂದಿಗೆ ರಕ್ಷಿಸಿ.
– ಆಂಟಿವೈರಸ್ ಸಾಫ್ಟ್‌ವೇರ್‌ನೊಂದಿಗೆ ನಿಮ್ಮ  ಫೋನ್ ಅನ್ನು ಅಪ್ಡೇಟ್ ಮಾಡಿ. 
– ನಿಮ್ಮ ಫೋನ್ ಅನ್ನು ಅನಧಿಕೃತ ಬಳಕೆಯಿಂದ ರಕ್ಷಿಸಲು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಥವಾ ಫೇಸ್ ಐಡಿ ಬಳಸಿ.
– ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವುದನ್ನು ತಪ್ಪಿಸಿ.

Source : https://zeenews.india.com/kannada/business/rbi-alert-on-juice-jacking-scam-carefull-while-charging-smartphone-at-public-charging-station-148076

Leave a Reply

Your email address will not be published. Required fields are marked *