ಜೂ.21 ಅತೀ ದೀರ್ಘ ದಿನ ಏಕೆ? ಹಗಲು ದೀರ್ಘವಾಗಿ, ರಾತ್ರಿ ಕಡಿಮೆಯಾಗಲು ಕಾರಣವೇನು?

ಜೂನ್ ಹಾಗೂ ಡಿಸೆಂಬರ್ ವರ್ಷದಲ್ಲಿ ಎರಡು ಬಾರಿ ಅಯನಸಂಕ್ರಾಂತಿಸಂಭವಿಸುತ್ತದೆ. ಹೌದು, ಜೂನ್ 21 ರಂದು ಹಗಲು ದೀರ್ಘವಾಗಿದ್ದು, ರಾತ್ರಿ ಸಣ್ಣದಿರುತ್ತದೆ. ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ಎನ್ನುತ್ತೇವೆ. ಭೂಮಿಯ ಜ್ಯಾಮಿತಿ ಮತ್ತು ಸೂರ್ಯನ ಸುತ್ತ ಅದರ ಚಲನೆಯಿಂದ, ದಕ್ಷಿಣ ಗೋಳಾರ್ಧದಲ್ಲಿ ಬೇಸಿಗೆಯ ಅಯನ ಸಂಕ್ರಾಂತಿ ಹಾಗೂ ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅಯನಸಂಕ್ರಾಂತಿಸಂಭವಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ಬೇಸಿಗೆ ಅಯನ ಸಂಕ್ರಾಂತಿಯು ಜೂನ್ 21 ರಿಂದ 23 ರವರೆಗೆ ಸಂಭವಿಸಿದರೆ, ಇಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯು ಡಿಸೆಂಬರ್ 21 ರಿಂದ 23 ರವರೆಗೆ ನಡೆಯುತ್ತದೆ.

ಏನಿದು ಅತೀ ದೀರ್ಘ ಹಗಲುಳ್ಳ ದಿನ?

ಬೇಸಿಗೆಯ ಅಯನ ಸಂಕ್ರಾಂತಿಯ ದಿನದಂದು ಸೂರ್ಯೋದಯವು ಬೇಗ ಸಂಭವಿಸಿ, ಸೂರ್ಯನು ತಡವಾಗಿ ಅಸ್ತನಾಗುತ್ತಾನೆ. ಸೂರ್ಯನು ತನ್ನ ಕಾಲ್ಪನಿಕ ಉಷ್ಣವಲಯದ ಕರ್ಕಾಟಕ ವೃತ್ತ ಅಥವಾ 23.5 N ಅಕ್ಷಾಂಶದ ಮೇಲೆ ನೇರವಾಗಿ ಚಲಿಸುವಾಗ ಈ ಸಂಕ್ರಾಂತಿ ಸಂಭವಿಸುವುದು. ಇದಕ್ಕೆ ವಿರುದ್ದವಾಗಿ ಉತ್ತರ ಗೋಳಾರ್ಧದಲ್ಲಿ ಅತ್ಯಂತ ಚಿಕ್ಕ ಹಗಲಿದ್ದು ರಾತ್ರಿ ದೊಡ್ಡದಿರುತ್ತದೆ. ಅದಲ್ಲದೇ, ಅತಿ ಚಿಕ್ಕ ಹಗಲು, ಅತಿದೊಡ್ಡ ರಾತ್ರಿಯೂ ಡಿಸೆಂಬರ್ 21 ಮತ್ತೆ ಸಂಭವಿಸುತ್ತದೆ. ಆ ದಿನವನ್ನು ಕೂಡ ಅತಿದೊಡ್ಡ ರಾತ್ರಿಯನ್ನು ಹೊಂದಿರುವ ದಿನ ಎನ್ನಲಾಗುತ್ತದೆ.

ಯಾವೆಲ್ಲಾ ದೇಶಗಳಿಗೆ ದೀರ್ಘ ಹಗಲು?

ಜೂನ್ ಅಯನ ಸಂಕ್ರಾಂತಿ ಅಥವಾ ಬೇಸಿಗೆ ಅಯನ ಸಂಕ್ರಾಂತಿಯಂದು ಯುಕೆ, ಯುಎಸ್‌ಎ, ಕೆನಡಾ, ರಷ್ಯಾ, ಭಾರತ ಮತ್ತು ಚೀನಾ ದೇಶಗಳಿಗೆ ದೀರ್ಘ ಹಗಲುಳ್ಳ ದಿನವಾಗಿದೆ. ಆದರೆ ಚಳಿಗಾಲ ಸಮಯವಾಗಿರುವ ಆಸ್ಟ್ರೇಲಿಯಾ, ಅರ್ಜೆಂಟೀನಾ, ಚಿಲಿ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ದೇಶಗಳಿಗೆ ಕಡಿಮೆ ಹಗಲುಳ್ಳ, ದೀರ್ಘ ರಾತ್ರಿಯುಳ್ಳ ದಿನವಾಗಿದೆ.

Source : https://m.dailyhunt.in/news/india/kannada/tv9kannada-epaper-tvnkan/summer+solstice+2024+ju+21+ati+dirgha+dina+eke+hagalu+dirghavaagi+raatri+kadimeyaagalu+kaaranavenu+-newsid-n618666753?listname=topicsList&topic=for%20you&index=11&topicIndex=0&mode=pwa&action=click

Leave a Reply

Your email address will not be published. Required fields are marked *