ಆಧಾರ್ ಕಾರ್ಡ್ ಉಚಿತ ನವೀಕರಣಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ: ಆನ್‌ಲೈನ್‌ನಲ್ಲಿ ಹೀಗೆ ಅಪ್‌ಡೇಟ್ ಮಾಡಿ!

ಬೆಂಗಳೂರು: ಆಧಾರ್ ವಿವರಗಳನ್ನು ನೀವು ನವೀಕರಿಸಿದ್ದೀರಾ? ನೀವು ಇನ್ನೂ ನವೀಕರಿಸದಿದ್ದರೆ ತಪ್ಪದೇ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ. ಯಾಕೆಂದರೆ ಯುಐಡಿಎಐ ಸಂಸ್ಥೆ ನವೀಕರಣಕ್ಕೆ ನೀಡಿದ್ದ ಅಂತಿಮ ಗಡುವು ಮಾರ್ಚ್ 2024ರ 14ರಂದು ಕೊನೆಗೊಳ್ಳುತ್ತದೆ.ಉಚಿತ ಆಧಾರ್ ನವೀಕರಣ ಸೇವೆಗಳನ್ನು 2023 ರ ಡಿಸೆಂಬರ್ 14 ಕೊನೆಯ ದಿನಾಂಕವಾಗಿತ್ತು.

ಆ ಬಳಿಕ ಮೂರು ತಿಂಗಳ ಅವಧಿಯವರೆಗೆ ವಿಸ್ತರಿಸಲಾಗಿತ್ತು. ಈ ಅವಧಿಯ ಅಂತಿಮ ದಿನಾಂಕ ಮಾರ್ಚ್ ೧೪ ಆಗಿದೆ. ಇದಕ್ಕೂ ಹಿಂದೆ ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿತ್ತು. ಒಂದು ವೇಳೆ ಮಾರ್ಚ್ 14ರ ನಂತರ, ನಿಮ್ಮ ಆಧಾರ್ ವಿವರಗಳನ್ನು ನವೀಕರಿಸಲು ನಿಮಗೆ ಸಾಧ್ಯವಾಗದಿದ್ದರೇ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸದೆ ಈ ಅವಧಿಯ ಲಾಭವನ್ನು ಪಡೆದುಕೊಳ್ಳಿ. ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಸುಗಮಗೊಳಿಸಲು ಮತ್ತು ನಾಗರಿಕರು ತಮ್ಮ ಪ್ರಮುಖ ಆಧಾರ್ ವಿವರಗಳನ್ನು ನವೀಕರಿಸಲು ಅನುವು ಮಾಡಿಕೊಡಲು ಸರ್ಕಾರವು ಕೈಗೊಂಡಿರುವ ಪ್ರಯತ್ನಇದಾಗಿದ್ದು, ಆಧಾರ್ ಭಾರತೀಯರಿಗೆ ಸರ್ಕಾರಿ ಸೌಲಭ್ಯ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಮತ್ತು ಇತರೆ ಹಲವು ಉದ್ದೇಶಗಳಿಗೆ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್ ಅನ್ನು ಅಪ್‌ಡೇಟ್‌ ಮಾಡುವುದು ಬಹಳ ಮುಖ್ಯವಾಗಿದೆ.ಮಾರ್ಚ್ 14ರವರೆಗೆ ಯಾವುದೇ ಶುಲ್ಕವನ್ನು ನೀಡದೇ ಯಾವುದೇ ವ್ಯಕ್ತಿಯು ಉಚಿತವಾಗಿ ಆಧಾರ್ ವಿವರಗಳನ್ನು ನವೀಕರಿಸಬಹುದು. ಅಲ್ಲದೆ, ಈವರೆಗೆ ಹಲವು ಗಡುವು ನೀಡಿದ್ದು, ಇದು ಅಂತಿಮ ವಿಸ್ತರಣೆಯಾಗಿದೆ.

ಯಾಕೆಂದರೆ ಮಾರ್ಚ್ 14ರ ನಂತರ, ಆಧಾರ್ ವಿವರಗಳನ್ನು ನವೀಕರಿಸಲು ಯುಐಡಿಎಐ ಸಂಸ್ಥೆ ಮತ್ತೆ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ.ಆಧಾರ್‌ನಲ್ಲಿ ಯಾವೆಲ್ಲಾ ವಿವರಗಳನ್ನು ಅಪ್ಡೇಟ್ ಮಾಡಬೇಕು?ಆಧಾರ್ ಕಾರ್ಡ್ ಪಡೆದ ಪ್ರತಿಯೊಬ್ಬರೂ ಪ್ರತಿ ಹತ್ತು ವರ್ಷಗಳಿಗೊಮ್ಮೆ ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸಬೇಕು. ಕೇಂದ್ರೀಯ ಗುರುತಿನ ಡೇಟಾ ರೆಪೊಸಿಟರಿಯಲ್ಲಿ (ಸಿಐಡಿಆರ್) ವಿವರಗಳನ್ನು ನವೀಕರಿಸಬೇಕು ಎಂಬ ನಿಯಮವಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅಂತಿಮ ಗಡುವಿನವರೆಗೆ ಈ ಸೇವೆಗಳನ್ನು ಉಚಿತವಾಗಿ ನೀಡಲಿದೆ. ಆಧಾರ್ ಅನ್ನು ನವೀಕರಿಸುವ ಮೂಲಕ, ನೀವು ಆಧಾರ್ ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ, ಮೊಬೈಲ್ ಸಂಖ್ಯೆ ಇತ್ಯಾದಿಗಳಲ್ಲಿ ಯಾವುದೇ ದೋಷಗಳನ್ನು ಸರಿಪಡಿಸಬಹುದು, ಅಥವಾ ಅಪ್ಡೇಟ್ ಮಾಡಬಹುದು.ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಯೋಚನೆ ಮಾಡುತ್ತಿದ್ದರೆ, ಅದಕ್ಕಾಗಿ ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು.

ಯಾವುದೇ ಶುಲ್ಕವನ್ನು ಪಾವತಿಸದೆ ವಿವರಗಳನ್ನು ಅಪ್‌ಡೇಟ್‌ ಮಾಡಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

ಆಧಾರ್‌ನ ಅಧಿಕೃತ ವೆಬ್‌ಸೈಟ್‌ಗೆ https://myaadhaar.uidai.gov.in/ ಹೋಗಿನಿಮ್ಮ ಆಧಾರ್ ಸಂಖ್ಯೆಯನ್ನು , ಸೆಕ್ಯೂರಿಟಿ ಕೋಡ್ ನೊಂದಿಗೆ ಭರ್ತಿ ಮಾಡಿ.

“Send OTP” ಆಯ್ಕೆಯನ್ನು ಕ್ಲಿಕ್ ಮಾಡಿ, ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸುವ ಕೋಡ್ ಅನ್ನು ನಮೂದಿಸಿ.

ಇಲ್ಲಿ ನೀವು “Update Demographics Data” ವನ್ನು ಆಯ್ಕೆ ಮಾಡಿನೀವು ನವೀಕರಿಸಬೇಕಾದ ಹೆಸರು, ವಿಳಾಸ, ಇತ್ಯಾದಿ ವಿವರಗಳನ್ನು ಆಯ್ಕೆಮಾಡಿ.

ನಿಮಗೆ ಮಾಡಬೇಕಾಗಿರುವ ಪ್ರಮುಖ ಬದಲಾವಣೆಗಳನ್ನು ಭರ್ತಿ ಮಾಡಬೇಕು ಮತ್ತು ಅದಕ್ಕೆ ಅಗತ್ಯ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಬೇಕು.

ವಿವರಗಳನ್ನು ಇನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ ಮತ್ತು submit ಬಟನ್ ಕ್ಲಿಕ್ ಮಾಡಿಇದರ ನಂತರ, ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

ಈ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು. ಆಧಾರ್ ರಾಷ್ಟ್ರವ್ಯಾಪಿ ಪೋರ್ಟಬಿಲಿಟಿ ನೀಡುತ್ತದೆ.

ಹೀಗಾಗಿ ನಿಮ್ಮ ಆಧಾರ್ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಎಲ್ಲಿ ಬೇಕಾದರೂ ದೃಢೀಕರಿಸಬಹುದು. ಲಕ್ಷಾಂತರ ಭಾರತೀಯರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಗ್ರಾಮಾಂತರ ಪ್ರದೇಶದಿಂದ ನಗರ ಕೇಂದ್ರಗಳಿಗೆ ವಲಸೆ ಹೋಗುವುದರಿಂದ ಆಧಾರ್ ಕಾರ್ಡ್ ನಿರ್ಣಾಯಕ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *