ನ್ಯಾಯಮೂರ್ತಿ “ಹೆಚ್.ಎನ್.ನಾಗಮೋ ಹನ್ ದಾಸ್ ಆಯೋಗದ ವರದಿ” ತಾರತಮ್ಯ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಚಿತ್ರದುರ್ಗ ಆ. 12

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‍ದಾಸ್ ಆಯೋಗದ ವರದಿ ತಾರತಮ್ಯ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಈ ವರದಿಯನ್ನು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಆಯೋಗದ ಕಾರ್ಯ ವೈಖರಿಯನ್ನು ಟೀಕಿಸಿದ್ದು ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮಗೆ ಆಗಿರುವ ಅನ್ಯಾಯದ ಬಗ್ಗೆ ಮನವರಿಕೆಯನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. 

ಚಿತ್ರದುರ್ಗ ನಗರದ ಭೋವಿ ಗುರು ಪೀಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ಆ ಪಟ್ಟಿಯಲ್ಲಿ ಓಡ್, ಒಡೇ, ಕಲ್ಲು ವಡ್ಡರ್, ಮಣ್ಣು ಒಡ್ಡರ್ ಏಕೆ ಪ್ರಸ್ತಾಪವಾಗಿಲ್ಲ.ಆಳವಾದ ಅಧ್ಯಯನದ ಆಧಾರವಾಗಬೇಕು ಎಂದು ನಡೆದಿರುವ ಗಣತಿ ಭೋವಿ ಸಮುದಾಯಕ್ಕೆ ಅತ್ಯಂತ ಅನ್ಯಾಯವನ್ನು ಮಾಡಿದೆ. ಅಲೆಮಾರಿಗಳಲ್ಲಿ ಭೋವಿ ಸಮುದಾಯ ಸ್ವಂತ ಮನೆ ಮತ್ತು ಗುಡಿಸಲು ಇಲ್ಲದೇ ಊರೂರು ಅಲೆಯುವ ಕುಟುಂಬಗಳನ್ನ ಈ ಗಣತಿಯಲ್ಲಿ ಕೈಬಿಡಲಾಗಿದೆ. ಸಮೀಕ್ಷಾ ಕಾರ್ಯದಲ್ಲಿ ಭೋವಿ ವಡ್ಡರ ಮಣ್ಣು ಮತ್ತು ಕಲ್ಲಿನ ಕೆಲಸವನ್ನೇ ಕೈಬಿಡಲಾಗಿದೆ ಎನ್ನುವ ವಿಚಾರವನ್ನ ಆಯೋಗಕ್ಕೆ ತಿಳಿಸಲು ಸಹ ಸಮೀಕ್ಷೆ ಮುಗಿಯುವವರೆಗೂ ಸರಿಪಡಿಸಿ ಕೊಳ್ಳಲಿಲ್ಲ. ಸರ್ವೇಯಲ್ಲಿ ಭೋವಿ ವಡ್ಡರನ್ನ ಅತಿ ಹೆಚ್ಚು ನಿರ್ಲಕ್ಷ ಮತ್ತು ಕಡೆಗಣನೆ ಮಾಡಿರುವುದರ ಹಿಂದಿನ ಉದ್ದೇಶ ಸರ್ಕಾರವೇ ಉತ್ತರಿಸಬೇಕು ಎಂದಿದ್ದಾರೆ. 

ಕಳೆದ 15 ವರ್ಷದಲ್ಲಿ ಭೋವಿ ಜನಾಂಗದ ಜನಸಂಖ್ಯೆ ಗಣನೀಯವಾಗಿ ಏರಿದ್ದರು ಸಹ ಕೇವಲ 9986 ಜನಗಳನ್ನು ಮಾತ್ರ ತೋರಿಸಿದೆ. ಶೇಕಡ 1 ರಷ್ಟು ಹೆಚ್ಚಳ ಎಂದು ತೋರಿಸಲಾಗಿದೆ, ಆದರೆ ಈ ಸಮುದಾಯ 15%ಕ್ಕಿಂತ ಹೆಚ್ಚಾಗಿರುತ್ತದೆ, ಅರೆ ಅಲೆಮಾರಿ ಸಮುದಾಯವಾಗಿರುವುದರಿಂದ ಸಮೀಕ್ಷೆ ಮಾಡುವವರು ಅವರ ಬಳಿ ಹೋಗಿರುವುದಿಲ್ಲ ಸೌಲಭ್ಯಗಳು ಕಲ್ಪಿಸುವ ಉದ್ದೇಶದಿಂದ ಉಪ ವರ್ಗೀಕರಣದಲ್ಲಿ ಭೋವಿ ಸಮುದಾಯವನ್ನಷ್ಟೇ ವರ್ಗೀಕರಿಸಬೇಕು, ಭೋವಿ ಸಮುದಾಯಕ್ಕೆ ಯಾವುದೆ ಸಮುದಾಯದ ಜೊತೆ ಸೇರಿಸದೇ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲು ಆಗ್ರಹಿಸಿದ್ದು ಮೀಸಲಾತಿ ವಂಚಿತ ಸಮುದಾಯ ಮೀಸಲಾತಿ ಕೊಡಿ ಎಂದು ಹೋರಾಟ ಮಾಡಲು ನೈತಿಕ ಹಕ್ಕಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಮೀಸಲಾತಿ ಇದೇ ಎಂಬ ವಿಚಾರವೇ ತಿಳಿಯದ ಗುಡ್ಡಗಾಡಿನಲ್ಲಿರುವ ಅವಿದ್ಯಾವಂತ, ಅನಾಗರೀಕ, ಶ್ರಮಿಕರಾದ ಭೋವಿ ವಡ್ಡರನ್ನು ಅಧ್ಯಯನಕ್ಕೆ ಆಯೋಗ ಏಕೆ ಒಳಪಡಿಸಲಿಲ್ಲ? ಅವರಿಗೆ ಸ್ವಂತ ಮನೆ, ಗುಡಿಸಲು, ಪಡಿತರ ಚೀಟಿ, ಇದೆಯೇ ಎಂದು ಯಾರು ಪರಿಶೀಲಿಸಬೇಕು? ಆದರೆ ಆಯೋಗದ ವರದಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಧರ್ಮ, ಜಾತಿ, ಪಂಗಡಗಳು ಮತ್ತು ಪ್ರಾಂತ್ಯಗಳು ಇಂದು ಒಂದಲ್ಲ ಒಂದು ರೀತಿಯಾಗಿ ಮೀಸಲಾತಿ ಸವಲತ್ತನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಇಂತಹ ಅನೇಕ ಗೊಂದಲಗಳು ವರದಿಯಲ್ಲಿ ಉಂಟಾಗಿವೆ ಎಂದು ದೂರಿದ್ದಾರೆ. 

ಸರ್ಕಾರದ 38 ಇಲಾಖೆಗಳ ಪೈಕಿ ಆಯೋಗಕ್ಕೆ ವರದಿ ನೀಡಿರುವ 24 ಇಲಾಖೆಗಳು ಮಾಹಿತಿಯನ್ವಯ 2021 ರಿಂದ 2024 ರವರೆಗೆ ಫಲಾನುಭವಿಗಳ ಸಂಖ್ಯೆಯನ್ನು ವಿವರಿಸಲಾಗಿದೆ. ಕೃಷಿ ಇಲಾಖೆ ಫಲಾನುಭವಿಗಳ ಸಂಖ್ಯೆ 3127281 ಆದರೆ ಇದರಲ್ಲಿ ಭೋವಿ ವಡ್ಡರ ಫಲಾನುಭವಿಗಳ ಸಂಖ್ಯೆ 183 ಇದೆ, ಮೀನುಗಾರಿಕೆ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಅರಣ್ಯ ಇಲಾಖೆ, ಶಾಸಕಾಂಗ ಇಲಾಖೆ, ಕಾರ್ಮಿಕ ಇಲಾಖೆ, ಗ್ರಾಮೀಣಾ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹೀಗೆ ಕೆಲವು ಇಲಾಖೆಗಳಲ್ಲಿ ಶೂನ್ಯ ಫಲಾನುಭವಿಗಳಿದ್ದಾರೆ. ಹಾಗಾಗಿ ಭೋವಿ ವಡ್ಡರು ಇಲಾಖೆಗಳಲ್ಲಿ ಸೌಲಭ್ಯಗಳನ್ನು ಪಡೆಯದೇ ಇರುವುದನ್ನು ನೋಡುತ್ತೇವೆ.ಹೆಚ್ಚು ಸಾಮಾಜಿಕ ತಾರತಮ್ಯಕ್ಕೆ ಒಳಗಾದ ಜಾತಿಗಳಲ್ಲಿ ಭೋವಿ ವಡ್ಡರ ಜಾತಿಯು ಒಳಗೊಂಡಿದೆ. ಜಾತಿಗಳ ರಾಜಕೀಯ ಪ್ರಾತಿನಿಧ್ಯವನ್ನು ವರ್ಗೀಕರಿಸಿದಾಗ ಭೋವಿ ಜನಾಂಗ 5ನೇ ಸ್ಥಾನದಲ್ಲಿದೆ. ಪರಿಶಿಷ್ಟ ಜಾತಿಯ ಒಳ ಜಾತಿಗಳ ಫಲಾನುಭವಿಗಳನ್ನು ವರ್ಗೀಕರಿಸಿದಾಗ ಭೋವಿ ವಡ್ಡರು 7ನೇ ಸ್ಥಾನದಲ್ಲಿದ್ದಾರೆ ಎಂದು ನ್ಯಾ. ನಾಗಮೋಹನ್‍ದಾಸ್ ರವರ ವರದಿಯಲ್ಲೇ ತಿಳಿಸಿದ್ದಾರೆ. ಹೀಗಿದ್ದರೂ ಈ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನವನ್ನು ನೀಡುವಲ್ಲಿ ಆಯೋಗ ಕಡೆಗಣಿಸಿದೆ ಎಂದು  ಶ್ರೀಗಳು  ಆರೋಪಿಸಿದರು.

ಅಧಿಕಾರಿಗಳಿಗೆ ತರಬೇತಿ ನೀಡಿಲ್ಲ, ಮತ್ತೊಂದೆಡೆ ಅಧಿಕಾರಿಗಳಿಗೆ ಜ್ಞಾನದ ಕೊರತೆ ಇದೆ ಜನಗಣತಿ ಅರ್ಜಿಯು ಜನಗಣತಿ ಕಾಯ್ದೆಗೆ ಅನುಗುಣವಾಗಿರಲಿಲ್ಲ, ರಾಜ್ಯ ಸರ್ಕಾರ ಎಸ್.ಸಿ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸರಿಯಾದ ಸಮಗ್ರ ಸಮೀಕ್ಷಾ ನಮೂನೆಯನ್ನು ಸಿದ್ಧಪಡಿಸಿಲ್ಲ ಮತ್ತು ಮಾತೃ ಜಾತಿಗಳನ್ನು ಸೂಚಿಸುವ ವಿಧಾನದಲ್ಲಿ ಆಯೋಗ ವಿಫಲವಾಗಿದೆ. ಗಣತಿಗಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಜನಗಣತಿ ಕಾಯ್ದೆಯಡಿ ಆಯುಕ್ತರು ಮತ್ತು ಅದರ ನಿರ್ದೇಶಕರನ್ನು ನೇಮಿಸಬೇಕಾಗಿತ್ತು, ಆ ಕಾರ್ಯ ನಡೆಯಲಿಲ್ಲ, ಸಂವಿಧಾನದ 246ನೇ ವಿಧಿಯ ಅಡಿಯಲ್ಲಿ ಮತ್ತು 7ನೇ ಪರಿಚ್ಛೇದದ ಸರಣಿ ಸಂಖ್ಯೆ 69 ರಲ್ಲಿ ಕೇಂದ್ರ ವಿಷಯವಾಗಿದೆ.ಸುಪ್ರೀಂ ಕೋರ್ಟ್ ತಿಳಿಸಿರುವಂತೆ ಅತೀ ಹಿಂದುಳಿದ ಗುಂಪನ್ನು ವರ್ಗೀಕರಿಸಿ ಆ ಗುಂಪಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸುವಂತೆ ಹೇಳಿದ್ದರೂ ಸಹ ಅನಗತ್ಯವಾಗಿ ಗೊಂದಲವನ್ನು ಉಂಟುಮಾಡುವ ಉದ್ದೇಶದಿಂದ ಮತ್ತು ರಾಜಕೀಯ ಪ್ರೇರಿತವಾಗಿ ಸಮುದಾಯಗಳ ಐಕ್ಯತೆಯನ್ನು ಹೊಡೆಯುತ್ತಿರುವುದು ಖಂಡನೀಯ ಎಂದಿದ್ದಾರೆ. 

ನಾವು ಸಮೀಕ್ಷೆಯ ಕುರಿತು ಪ್ರಾರಂಭದಿಂದಲೂ ಆಯೋಗಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಸರಿಯಾಗಿ ಸಮೀಕ್ಷೆ ನಡೆಯುತ್ತಿಲ್ಲವೆಂದು ಪದೇ ಪದೇ ಎಚ್ಚರಿಕೆ ನೀಡಿದ್ದರು ಸಹ ಲೋಪವೆಸಗಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ಪರಿಪೂರ್ಣ ಸಮೀಕ್ಷೆ ನಡೆಸಲು ಸಾಧ್ಯವಾಗದಿದ್ದಾಗ, ಮನೆ ಮನೆ ಸಮೀಕ್ಷೆ ಪೂರ್ಣ ಪ್ರಮಾಣದ ಸಮೀಕ್ಷೆ ಎಂಬುದು ದೂರದ ಮಾತಾಗಿದೆ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿ ಈ ವರದಿಯನ್ನು ಅಧ್ಯಯನ ಮಾಡಲು ಉಪ ಸಮಿತಿಯನ್ನು ಸರ್ಕಾರ ರಚನೆಯನ್ನು ಮಾಡಬೇಕೆಂದು ಆಗ್ರಹಿಸಿದ್ದಾರೆ. 

ಈಗಾಗಲೇ ನಾಗಮೋಹನ್ ದಾಸ್ ಆಯೋಗದ ವರದಿಯ ಬಗ್ಗೆ ನಮ್ಮ ಸಮುದಾಯದ ಚುನಾಯಿತ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮಗೆ ಆಗಿರುವ ನ್ಯಾಯದ ಬಗ್ಗೆ ಮನವರಿಕೆಯನ್ನು ಮಾಡಿದ್ದಾರೆ. ಇದರ ಬಗ್ಗೆ ನಾವು ಸಹಾ ನಾಳೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮತ್ತೋಮ್ಮ ವರದಿಯ ಬಗೆ ತಿಳಿಸಲಾಗುವುದು ಎಂದರು.  

Views: 5

Leave a Reply

Your email address will not be published. Required fields are marked *