ಜ್ಯೋತಿ ಸಂಜೀವಿನಿ ಯೋಜನೆ ಯನ್ನು ನಿವೃತ್ತ ನೌಕರರಿಗೂ ಸಹ ಉಚಿತವಾಗಿ ಜಾರಿ ಮಾಡುವಂತೆ ಒತ್ತಾಯ.

ಚಿತ್ರದುರ್ಗ ಆ. 13

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ರಾಜ್ಯ ಸರ್ಕಾರ ತನ್ನ ನೌಕರರಿಗೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನೀಡುವ ಜ್ಯೋತಿ ಸಂಜೀವಿನಿ ಯೋಜನೆ ಯನ್ನು ನಿವೃತ್ತ
ನೌಕರರಿಗೂ ಸಹಾ ಉಚಿತವಾಗಿ ಜಾರಿ ಮಾಡುವಂತೆ ಸರ್ಕಾರವನ್ನು ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ
ಅಧ್ಯಕ್ಷರಾದ ಬಿ.ಕೆ.ಹನುಮಂತಪ್ಪ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾವು ಸಹಾ ಹಲವಾರು ವರ್ಷಗಳ
ಕಾಲ ವಿವಿಧ ಇಲಾಖೆಯಲ್ಲಿ ಸೇವೆಯನ್ನು ಮಾಡುವುದರ ಮೂಲಕ ನಿವೃತ್ತಿಯನ್ನು ಕಾಣಲಾಗಿದೆ ಕರ್ತವ್ಯ ಸಮಯದಲ್ಲಿ
ಆರೋಗ್ಯವಾಗಿ ಇದ್ದ ನಾವುಗಳು ನಿವೃತ್ತಿಯಾದ ನಂತರ ವಿವಿಧ ರೀತಿಯ ಖಾಯಿಲೆಗಳು ಬರುತ್ತವೆ ಇದಕ್ಕೆ ಚಿಕಿತ್ಸೆಯನ್ನು
ಪಡೆಯಲು ಆರ್ಥಿಕವಾಗಿ ನಾವುಗಳು ಸಬಲರಾಗಿಲ್ಲ, ನಮಗೆ ಬರುವ ಪಿಂಚಿಣಿಯಿಂದ ನಾವುಗಳು ನಮ್ಮ ಕುಟುಂಬವನ್ನು ಸಲಹೆ
ಬೇಕಿದೆ ಇದರ ಮಧ್ಯದಲ್ಲಿ ನಮ್ಮ ಆರೋಗ್ಯವನ್ನು ಸಹಾ ಕಾಪಾಡಿಕೊಳ್ಳಬೇಕಿದೆ, ಚಿಕಿತ್ಸೆಯನ್ನು ಪಡೆಯಲು ಲಕ್ಷಾಂತರ ರೂ
ವೆಚ್ಚವಾಗುತ್ತದೆ ಈ ಹಿನ್ನಲೆಯಲ್ಲಿ ನಮಗೂ ಸಹಾ ಸರ್ಕಾರಿ ನೌಕರರಿಗೆ ನೀಡಿದಂತೆ ಜ್ಯೋತಿ ಸಂಜೀವಿನಿ ಯೋಜನೆನ್ನು
ಉಚಿತವಾಗಿ ಜಾರಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಮ್ಮ ನಿವೃತ್ತ ನೌಕರರ ಸಂಘ ಸಮಾಜ ಸೇವೆಯನ್ನು ಮಾಡುವುದರ ಮೂಲಕ ನಮ್ಮ ಬೇಡಿಕೆ ಮಾತ್ರವಲ್ಲದೆ ಸಮಾಜ
ಸೇವೆಯನ್ನು ಮಾಡುವ ಕಾರ್ಯವನ್ನು ಸಹಾ ಮಾಡಲಾಗುತ್ತದೆ. ನಿವೃತ್ತ ನೌಕರರ ಯೋಗ ಕ್ಷೇಮವನ್ನು ವಿಚಾರಿಸುವುದರ ಮೂಲಕ
ಅವರ ಬೇಕು ಬೇಡಗಳನ್ನು ಸಹಾ ನೋಡಿಕೊಳ್ಳಲಾಗುತ್ತಿದೆ. 7ನೇ ವೇತನ ಆಯೋಗವೂ ನಿವೃತ್ತ ನೌಕರರಿಗೆ ಶೇ.10 ರಷ್ಟು ಹೆಚ್ಚಳ
ಮಾಡುವಂತೆ ಸೂಚನೆಯನ್ನು ನೀಡಿದೆ ಆದರೆ ಸರ್ಕಾರ ಇದರ ಬಗ್ಗೆ ಈವರೆವಿಗೂ ಸಹಾ ಮಾತನಾಡಿಲ್ಲ ಕೊಡಲೇ 7ನೇ ವೇತನ
ಸಮಿತಿ ಮಾಡಿರುವ ಶಿಫಾರಸ್ಸುನ್ನು ಜಾರಿ ಮಾಡಬೇಕೆಂದು ಎಂದು ಆಗ್ರಹಿಸಿದ್ದು ಸರ್ಕಾರದ ಇಲಾಖೆಗಳಲ್ಲಿ ಹಿರಿಯ ನಾಗರೀಕರಿಗಲಿ
ನಿವೃತ್ತ ನೌಕರರಾಗಲಿ ಬಂದಾಗ ಅವರನ್ನು ಗೌರವದಿಂದ ಕಂಡು ಅವರ ಕೆಲಸವನ್ನು ಶೀಘ್ರವಾಗಿ ಮಾಡಿಕೊಂಡುವಂತೆ ಸರ್ಕಾರ
ಸುತ್ತೋಲೆಯನ್ನು ಹೊರಡಿಸಿದೆ ಇದನ್ನು ಮಾಡದ ಇಲಾಖೆಯ ಅಧಿಕಾರಿಯ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲು ಸಹಾ
ಅವಕಾಶವನ್ನು ಕಲ್ಪಿಸಿದೆ ನಮ್ಮ ಸಂಘ ನಮ್ಮ ಕೆಲಸದ ಜೊತೆಗೆ ಸಮಾಜಮುಖಿಯಾದ ಕೆಲಸಗಳನ್ನು ಸಹಾ ಮಾಡಲಾಗುತ್ತಿದೆ
ಎಂದರು.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಪರಮೇಶ್ವರಪ್ಪ ಮಾತನಾಡಿ, ಚಿತ್ರದುರ್ಗ
ತಾಲ್ಲೂಕು ನಿವೃತ್ತ ನೌಕರರ ಸಂಘ ಹಾಗೂ ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪಷಾಲಿಟಿ ಸೆಂಟರ್ ಸಂಯುಕ್ತಾಶ್ರಯದಲ್ಲಿ
ನಿವೃತ್ತನೌಕರರ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆ. 16 ರ ಶನಿವಾರ ಬೆಳಿಗ್ಗೆ 10 ರಿಂದ 3ವರೆಗೆ
ನಗರದ ಪ್ರವಾಸಿ ಮಂದಿರದ ಮುಂಭಾಗದ ಮದಕರಿನಾಯಕ ಫ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ಹೃದಯ ರೋಗ, ಕಿಡ್ನಿ ಸಮಸ್ಯೆ ನರರೋಗ, ಮೂತ್ರ ಕೋಶ ಗ್ಯಾಸ್ಟೋ ಸೈನ್ಸ್‍ಸ್ ಸೇರಿದಂತೆ ಇತರೆ ರೋಗಗಳ ಬಗ್ಗೆ
ತಪಾಸಣೆಯನ್ನು ನಡೆಸಲಾಗುವುದು, ಇದರ ಉದ್ಘಾಟನೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ಉದ್ಘಾಟನೆಯನ್ನು ನಡೆಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿಗಳಾದ ರಂಜಿತ್
ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ಆರೋಗ್ಯಾಧಿಕಾರಿಗಳಾದ ರೇಣು ಪ್ರಸಾದ್, ಶಿಕ್ಷಣ
ಇಲಾಖೆಯ ಉಪ ನಿರ್ದೇಶಕರಾದ ಎಂ.ಆರ್.ಮಂಜುನಾಥ್, ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಚಿತ್ರದುರ್ಗ ತಾಲ್ಲೂಕು ನಿವೃತ್ತ

ನೌಕರರ ಸಂಘದ ಗೌರವಾಧ್ಯಕ್ಷರಾದ ನಾಗರಾಜ್ ಸಂಗಂ, ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪಷಾಲಿಟಿ ಸೆಂಟರ್‍ನ ಕೋ-
ಆರ್ಡಿನೇಟರ್ ಪಿ.ನಾಗರಾಜ್, ಎಸ್.ಎ.ಗುಡ್ಡಪ್ಪ, ಚಿತ್ರದುರ್ಗ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ರಮೇಶ್ ಹಾಗೂ ಮದಕರಿ
ನಾಯಕ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕರಾದ ವಸಂತಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಈ ಶಿಬಿರದಲ್ಲಿ ಭಾಗವಹಿಸುವ ನಿವೃತ್ತ ನೌಕರರು ತಮ್ಮ ಹೆಸರುಗಳನ್ನು 9448658291 ದೂರವಾಣಿ ಸಂಖ್ಯೆ ನೊಂದಾಯಿಸಲೂ
ಕೋರಲಾಗಿದ್ದು, ತಪಾಸಣೆಗೆ ಬರುವ ಸಮಯದಲ್ಲಿ ತಮ್ಮ ನಿವೃತ್ತ ನೌಕರರ ಗುರುತಿನ ಚೀಟಿ, ಪಿಪಿಓ ನಂಬರ್, ವಯಸ್ಸಿನ
ದಾಖಲೆಯನ್ನು ತರಬೇಕಿದೆ ಎಂದು ತಿಳಿಸಿದರು.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಖಂಜಾಚಿ ಹಾಲನಾಯ್ಕ್, ನಿರ್ದೇಶಕರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 66

Leave a Reply

Your email address will not be published. Required fields are marked *