ಕಬ್ಜ ಚಿತ್ರ ಬಿಡುಗಡೆ : ಚಿತ್ರದುರ್ಗದಲ್ಲಿ ಪ್ರೇಕ್ಷಕರ ಸಂಭ್ರಮ…!

ಚಿತ್ರದುರ್ಗ, (ಮಾ.17) : ಕನ್ನಡ ಚಿತ್ರರಂಗದ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ.

ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಕಬ್ಜ ಚಿತ್ರ ತೆರೆ ಕಂಡಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮೊದಲ ದಿನದ ಮೊದಲನೇ ಶೋ ನೋಡಲು ಪ್ರೇಕ್ಷಕರು ಆಗಮಿಸಿ,ಕಟೌಟ್ ಗೆ ಕ್ಷೀರಾಭಿಷೇಕ ನೆರವೇರಿಸಿ ಸಿಹಿ ಹಂಚಿ ಅಭಿಮಾನ ಮೆರೆದರು. ಈ ಚಿತ್ರ ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿದರು.

ಚಿತ್ರಮಂದಿರದ ಆವರಣದಲ್ಲಿ ಉಪೇಂದ್ರ ಅವರ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ಸಂಭ್ರಮಿಸಿದರು.

 

The post ಕಬ್ಜ ಚಿತ್ರ ಬಿಡುಗಡೆ : ಚಿತ್ರದುರ್ಗದಲ್ಲಿ ಪ್ರೇಕ್ಷಕರ ಸಂಭ್ರಮ…! first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/K1PAedk
via IFTTT

Leave a Reply

Your email address will not be published. Required fields are marked *