“ಕಡೇ ಕಾರ್ತಿಕ ಮಹೋತ್ಸವ — ಉಚ್ಚಂಗಿಯಲ್ಲಮ್ಮ ಮತ್ತು ಬರಗೇರಮ್ಮ ದೇವಾಲಯಗಳಲ್ಲಿ ಸಾವಿರಾರು ಭಕ್ತರ ದೀಪಾರ್ಚನೆ”

ಚಿತ್ರದುರ್ಗ ಡಿ. 06

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಗ್ರಾಮ ದೇವತೆಗಳಾದ ಉಚ್ಚಂಗಿಯಲ್ಲಮ್ಮ ಹಾಗೂ ಬರಗೇರಮ್ಮ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಅಮ್ಮನವರ ಕಡೇ ಕಾರ್ತಿಕ ಮಹೋತ್ಸವವನ್ನು ನಡೆಸಲಾಯಿತು.

ನಗರದ ದೊಡ್ಡಪೇಟೆಯಲ್ಲಿನ ಉಚ್ಚಂಗಿಯಲ್ಲಮ್ಮ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು, ಸತ್ಯ,ನ್ಯಾಯ, ಧರ್ಮದ ಸಂಕೇತವಾಗಿ ಮೂರು ಸಿಂಹಗಳ ಮೇಲೆ ಅಮ್ಮನವರನ್ನು ಕೊರಿಸಲಾಗಿತ್ತು, ಇದರೊಂದಿಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ಈಶ್ವರನನ್ನು ಕೂರಿಸಿ ಮೇಲಗಡೆಯಲ್ಲಿ ಹೊವಿನ ಅಲಂಕಾರವನ್ನು ಮಾಡಲಾಗಿತ್ತು.

ಹೊಳಲ್ಕರೆ ರಸ್ತೆಯಲ್ಲಿನ ಬರಗೇರಮ್ಮ ದೇವಾಲಯದಲ್ಲಿಯೂ ಸಹಾ ಶುಕ್ರವಾರ ರಾತ್ರಿ ಅಮ್ಮನವರ ಕಡೇ ಕಾರ್ತಿಕವನ್ನು ನಡೆಸಲಾಯಿತು. ಇದೇ ಸಮಯದಲ್ಲಿ ಅಮ್ಮನವರನ್ನು ನಿಂತ ಭಂಗಿಯಲ್ಲಿ ವಿವಿಧ ರೀತಿಯ ಹೊಗಳಿಂದ ಅಲಂಕಾರವನ್ನು ಮಾಡಲಾಗಿತ್ತು. ದೇವಾಲಯದ ಮುಂದೆ ಚಪ್ಪರವನ್ನು ಹಾಕಿ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿತು. ಎರಡು ಕಡೆಗಳಲ್ಲಿಯೂ ಸಹಾ ಭಕ್ತಾಧಿಗಳು ಆಗಮಿಸಿ ಕಾರ್ತಿಕ ಮಹೋತ್ಸವದ ಅಂಗವಾಗಿ ದೀಪಗಳನ್ನು ಹಚ್ಚಲಾಯಿತು.

ಕಾರ್ತೀಕೋತ್ಸವ ಸಾವಿರಾರು ಭಕ್ತರು ಪಾಲ್ಗೊಂಡು, ಹರಕೆಯ ದೀಪ ಬೆಳಗಿ ನೆಚ್ಚಿನ ದೇವರಿಗೆ ಭಕ್ತಿ ಸಮರ್ಪಿಸಿದರು. ಕಾರ್ತೀಕೋತ್ಸವದಲ್ಲಿ ರಾತ್ರಿ ದೀಪ ಬೆಳಗುತ್ತಿರುವ ಮಂಟಪದಲ್ಲಿ ದೇವಿಯನ್ನು ಪೂಜೆಗೆ ಕೂರಿಸಲಾಯಿತು.

ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತರು ದೇವರಿಗೆ ಭಕ್ತಿ ಸಮರ್ಪಿಸಿದರು, ಕಡೆ ಕಾರ್ತಿಕೋತ್ಸ ದೀಪೋತ್ಸವದ ಅಂಗವಾಗಿ ಕಾರ್ತಿಕೋತ್ಸವಕ್ಕೆ ಬಂದ ಭಕ್ತರಿಗಾಗಿ ಪ್ರಸಾದವನ್ನು ನೀಡಲಾಯಿತು

Leave a Reply

Your email address will not be published. Required fields are marked *