ಚಿತ್ರದುರ್ಗದಲ್ಲಿ ನಾಳೆ ಕಣಿವೆಮಾರಮ್ಮ ದೇವಿಯ ಮೆರವಣಿಗೆ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನ ಜಾತ್ರೆ ಮಾ. 7 ರಿಂದ ಆರಂಭಗೊಂಡಿದ್ದು, ಮಂಗಳವಾರ ವಿಶೇಷವಾಗಿ ಅಲಂಕರಿಸಿ ಮಧುವಣಗಿತ್ತಿ ಶಾಸ್ತ್ರ ನೆರವೇರಿಸಲಾಯಿತು.

ಹೂವಿನ ಅಲಂಕಾರ ಹಾಗೂ ಸಕಲ ವಾದ್ಯವೃಂದಗಳೊಂದಿಗೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಕಣಿವೆಮಾರಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಸಾಗಲಿದೆ. ನಂತರ ಅನ್ನಸಂತರ್ಪಣೆಯಿರುತ್ತದೆ.

ಅಕ್ಕಿ, ಬೇಳೆ, ಬೆಲ್ಲ, ಧವನ ಧಾನ್ಯ, ಇನ್ನಿತರೆ ವಸ್ತುಗಳನ್ನು ಕೊಡಲಿಚ್ಚಿಸುವವರು ದೇವಸ್ಥಾನದಲ್ಲಿ ಅರ್ಪಿಸಿ ರಸೀದಿ ಪಡೆಯಬಹುದೆಂದು ಭಕ್ತಮಂಡಳಿ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಮೊ: 8951555830, 9448728083, 9480803146 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

The post ಚಿತ್ರದುರ್ಗದಲ್ಲಿ ನಾಳೆ ಕಣಿವೆಮಾರಮ್ಮ ದೇವಿಯ ಮೆರವಣಿಗೆ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/PTtsfM7
via IFTTT

Leave a Reply

Your email address will not be published. Required fields are marked *