ಚಿತ್ರದುರ್ಗ ಡಿ. 01
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕನ್ನಡ ಭಾಷೆ ಅತ್ಯಂತ ಶ್ರೇಷ್ಠ ಹಿನ್ನೆಲೆಯನ್ನು ಹೊಂದಿದೆ. ಬಳಕೆ ಜಾಸ್ತಿಯಾದರೆ ಉಪಯೋಗ ಹೆಚ್ಚಾಗುತ್ತದೆ. ಬಳಕೆ ಕಡಿಮೆಯಾದರೆ ಉಪಯೋಗವು ಕಡಿಮೆಯಾಗುತ್ತದೆ. ಇಂಗ್ಲಿಷ್‍ನ ಅವಲಂಬನೆ ಕಡಿಮೆ ಮಾಡಲು ಫೆÇೀನ್‍ನಲ್ಲಿ ಕನ್ನಡದ ಬಳಕೆ ಹೆಚ್ಚು ಮಾಡಿದಾಗ ನಮ್ಮ ಭಾಷೆ ಉನ್ನತ ಸ್ಥಾನ ಗಳಿಸುತ್ತದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು ತಿಳಿಸಿದರು.

ಚಿತ್ರದುರ್ಗ ನಗರದ ಸಿಎಂಸಿ ಬಡಾವಣೆ, ಕೆ,ಹೆಚ್.ಬಿ. ಬಡಾವಣೆ, ಕಣಮಪ್ಪ ಲೇ ಔಟ್ ರಮಾಬಾಯಿ ಅಂಬೇಡ್ಕರ್ ಬಡಾವಣೆ, ಸಹ್ಯಾದ್ರಿ ಲೇ ಔಟ್ ಎಸ್,ಜೆ, ಲೇ ಔಟ್‍ನಲ್ಲಿನ ಕನ್ನಡ ರಾಜ್ಯೋತ್ಸವ ಬಳಗದವತಿ ಯಿಂದ ಹಮ್ಮಿಕೊಂಡಿದ್ದ 3ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಬಾವುಟವು ಹೊಂದಿರುವ ಹಳದಿ ಮತ್ತು ಕೆಂಪುಬಣ್ಣವನ್ನು ನೋಡಿದರೆ ರೋಮಾಂಚನವನ್ನು ಉಂಟು ಮಾಡುತ್ತದೆ. ಕನ್ನಡ ಭಾಷೆ ಅತ್ಯಂತ ಶ್ರೇಷ್ಠ ಹಿನ್ನೆಲೆಯನ್ನು ಹೊಂದಿದೆ. ಮಾತನಾಡುವಾಗ ಬರೆಯುವಾಗ ಹಾಗೂ ವಿಚಾರ ವಿನಿಮಯದ ಸಂದರ್ಭಗಳಲ್ಲಿ ಕನ್ನಡವನ್ನು ಬಳಸಿ. ವಿದೇಶಿಯರೂ ಸಹ ಕನ್ನಡ ಭಾಷೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಾರೆ.
ಕನ್ನಡ ರಾಜ್ಯೋತ್ಸವ ಕೇವಲ ಒಂದು ತಿಂಗಳು ಮಾತ್ರವಿರದೆ ವರ್ಷಪೂರ್ತಿ ಇರಬೇಕು. ಕನ್ನಡ ದಿನೇ ದಿನೇ ತನ್ನ ವಿಶಾಲತೆಯನ್ನು ಕಳೆದುಕೊಳ್ಳುತ್ತಿದೆ. ಅದನ್ನು ತಾವು ಬೆಳೆಸಬೇಕಾಗಿರುವುದರಿಂದ ತಾವೆಲ್ಲ ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಉಸಿರಾಗಿಸಿ ಕೊಳ್ಳಬೇಕೆಂದರು.ಹರಿದು ಹಂಚಿಹೋಗಿದ್ದ ಕನ್ನಡ ನಾಡು ಅಖಂಡ ಕರ್ನಾಟಕವಾಗಿದ್ದು 1956 ನವಂಬರ್ ಒಂದರಲ್ಲಿ. ಕನ್ನಡ ಹುಟ್ಟಿನಿಂದಲೂ ಪ್ರತಿರೋಧವನ್ನು ಎದುರಿಸುತ್ತಲೇ ಕನ್ನಡ ತನ್ನ ಅಸ್ಮಿತೆ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.
ಪ್ರಸ್ತುತ ಸಂದರ್ಭದಲ್ಲಿ ಇಂಗ್ಲಿಷ್ ಜಾಗತೀಕರಣ ಭಾಷೆಯಾಗಿ ಅನ್ನದ ಭಾಷೆಯಾಗಿ ನಮ್ಮ ಪ್ರಾದೇಶಿಕ ಭಾಷೆಗಳನ್ನು ಕಳೆದುಕೊಳ್ಳುತ್ತಿz್ದÉೀವೆ. ಮುಂದೊಂದು ದಿನ ಕನ್ನಡ ಭಾಷೆಯ ಹುಡುಕಾಟವನ್ನು ಈ ನಾಡಿನಲ್ಲಿ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಪರಭಾಷಿಕರ ಹಾವಳಿಯಿಂದ ನಮ್ಮ ಕನ್ನಡ ಭಾಷೆಯನ್ನು ಹುಡುಕಾಡಬೇಕು. ಕನ್ನಡಿಗರಿಗೆ ನಮ್ಮ ನಾಡಿನಲ್ಲಿ ಉದ್ಯೋಗ ಕೊಡುವಲ್ಲಿ ಕಠಿಣವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರ್ನಾಟಕ ಸರ್ಕಾರ ಪ್ರತಿಯೊಂದು ಉದ್ಯೋಗಗಳು ಕನ್ನಡಿಗರಿಗೆ ಮೀಸಲು ಇಡಬೇಕು. ಎಲ್ಲವೂ ಕನ್ನಡ ಮಾಯವಾಗಿರಬೇಕು. ಕನ್ನಡ ಕೇವಲ ಭಾವನಾತ್ಮಕ ಭಾಷೆಯಾಗಿರದೆ, ಅನ್ನದ ಭಾಷೆ ಆಗಬೇಕು. ಕರ್ನಾಟಕದಲ್ಲಿ ಕನ್ನಡಿಗ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಉದ್ಯೋಗದಲ್ಲಿ ವ್ಯಾಪಾರದಲ್ಲಿ ಮುಂತಾದ ಹಲವು ಕ್ಷೇತ್ರಗಳಲ್ಲಿ ತುಂಬಾ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಉಪನ್ಯಾಸಕರಾದ ಮಂಜುನಾಥ್ ಮಾತನಾಡಿ, ಕನ್ನಡ ನಾಡು ಅಖಂಡ ಕರ್ನಾಟಕವಾಗಲೂ ಹಿಂದೆ ಹಲವಾರು ಸಂಕಲ್ಪದ ಹೋರಾಟಗಳಾಗಿವೆ. ಕರ್ನಾಟಕದಲ್ಲಿ ಆರಂಭವಾದ ಕನ್ನಡ ಸಂಘಗಳು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸವನ್ನು ಮಾಡಿz್ದÁರೆ. ಕನ್ನಡ ಭಾಷೆಯ ಮೂಲಕ ಐತಿಹಾಸಿಕ, ಪೌರಾಣಿಕ ಕಾವ್ಯಗಳಲ್ಲಿ ಕನ್ನಡ ನಾಡಿನ ಪ್ರದೇಶಗಳು ಹಾಗೂ ಕನ್ನಡ ಭಾಷೆಯ ಮೂಲವನ್ನು ಪ್ರಸ್ತಾಪಿಸುತ್ತಾರೆ. ಕನ್ನಡ ನಾಡಿನ ಸಂಸ್ಕøತಿ ಬಹಳ ವಿಶಿಷ್ಟವಾದದ್ದು. ಕನ್ನಡ ನಾಡು ಸ್ವಾಭಿಮಾನದ ಸಂಕೇತ. ನಮ್ಮ ನಾಡಿನ ಸಂಸ್ಕøತಿ ಶ್ರೀಮಂತವಾದದ್ದು. ನಮ್ಮ ನಾಡು ಅಂತಕರಣದಿಂದ ಕೂಡಿದ ನಾಡು. ನಮ್ಮ ನಾಡು ತ್ಯಾಗದ ನಾಡು. ಕನ್ನಡ ಕನ್ನಡ ಧ್ವಜ ವಿಶೇಷವಾದ ಸಂಕೇತವಾಗಿದೆ. ಕೆಂಪು ಕ್ರಾಂತಿಯ ಸಂಕೇತವಾದರೆ, ಹಳದಿ ಶಾಂತಿಯ ಸಂಕೇತವಾಗಿದೆ. ಅದನ್ನು ಸೌಖ್ಯವಾಗಿಸುವ ಗುಣ ಕನ್ನಡ ಭಾಷೆಗೆ ಇದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಉಜ್ಜನಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆ ಹಿನ್ನೆಲೆಯನ್ನು ನೋಡಿದಾಗ ಕವಿರಾಜ ಮಾರ್ಗ ಮತ್ತು ಪಂಪನಿಂದ ಹಿಡಿದು ಆಧುನಿಕದವರೆಗೂ ಎ¯್ಲÁ ಕವಿಗಳು ಕನ್ನಡವನ್ನು ಕಟ್ಟುವ ಕನ್ನಡವನ್ನು ವಿಸ್ತರಿಸುವ ಕನ್ನಡದ ಅಭಿಮಾನವನ್ನು ಮೂಡಿಸುವಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿz್ದÁರೆ. ಅಂತಹ ಸಾಹಿತ್ಯ ಬರವಣಿಗಳು ನಮಗೆ ಸದಾ ಪ್ರೇರಕ ಪ್ರೋತ್ಸಾಹ ಪ್ರೇರಣೆಯಾಗಿವೆ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ಕನ್ನಡ ಅಭಿಮಾನವನ್ನು ಹೆಚ್ಚಿಸುವ ಕಡೆ ಸರ್ಕಾರಗಳು ಪ್ರಯತ್ನಿಸಬೇಕು. ಕನ್ನಡ ಪರವಾದ ಯಾವುದೇ ನಿಲುವುಗಳನ್ನು, ಕಾನೂನುಗಳನ್ನು ತೆಗೆದುಕೊಳ್ಳಬೇಕು. ನಮ್ಮ ಶಿP್ಷÀಣ ಮೊದಲು ಕನ್ನಡವನ್ನು ಬೆಳೆಸಬೇಕು. ಇಂಗ್ಲಿಷ್ ಶ್ರೇಷ್ಠವೆಂಬ ಪರಿಕಲ್ಪನೆಯಿಂದ ಹೊರಬನ್ನಿ. ಕನ್ನಡದಲ್ಲಿ ಎ¯್ಲÁ e್ಞÁನವು ಇದೆ ಅದನ್ನು ಉದಾಸೀನ ಮಾಡಬೇಡಿ. ಸಂವಿಧಾನ ಘೋಷಿಸಿರುವ 22 ಭಾಷೆಗಳು ರಾಷ್ಟ್ರಭಾಷೆಗಳೇ. ಹಿಂದಿಯನ್ನು ರಾಷ್ಟ್ರದಲ್ಲಿ ಏಕೈಕ ಭಾಷೆ ಆಗಬೇಕು ಎಂಬ ಹುನ್ನಾರಗಳು ನಡೆಯುತ್ತಿವೆ. ಕನ್ನಡಕ್ಕೆ ಎದುರಾಗುವ ಸಂಕಷ್ಟಗಳನ್ನು ಎದುರಿ ಸುವ ಸಂಕಲ್ಪವನ್ನು ಮಾಡೋಣ ಎನ್ನುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ಮುಖ್ಯ ಆಶಯವಾಗಬೇಕು ಜಗತ್ತನ್ನು ಆಳುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗೌನಳ್ಳಿ ಗೋವಿಂದಪ್ಪ, ವೀರೆಂದ್ರ ಕೊಗುಂಡೆ, ನ್ಯಾಯಾವಾದಿ ಶಿವು ಯಾದವ್, ಯಶವಂತ, ಮಂಜುನಾಥ್, ಶ್ರೀನಿವಾಸ್, ಮಲ್ಲೇಶ್, ಹನುಮಂತಪ್ಪ, ತಿಮ್ಮಣ್ಣ ಸೇರಿದಂತೆ ಬಡಾವಣೆಯ ಜನತೆ ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ಪತ್ರಕರ್ತರನ್ನು ಸನ್ಮಾನಿಸಲಾಯಿತು.
Views: 31