“ಕಣ್ಣೀರಿ ಶ್ರೀಗಳ ಹೇಳಿಕೆ ಬಸವತತ್ವಕ್ಕೆ ಅವಮಾನ” – ರಾಷ್ಟ್ರೀಯ ಬಸವದಳ ಅಧ್ಯಕ್ಷ ಕೆ. ವಿರೇಶ್ ಕುಮಾರ್ ಕಿಡಿ.

ಚಿತ್ರದುರ್ಗ ಅ. 23

ಇಂದಲ್ಲ ನಾಳೆ ಪರಿಪೂರ್ಣ ಬಸವತತ್ವ ಅನುಯಾಯಿಗಳಾಗಿ ಬಸವತತ್ವವನ್ನು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಮಠಗಳು ನಡೆಯಲಿವೆ ಹಾಗೆಂದ ಮಾತ್ರಕ್ಕೆ ಲಿಂಗಾಯತ ಒಕ್ಕೂಟವನ್ನು ನೋಡಿ ತಡೆಯಲಾರದೇ ಹೊಲಸು ಪದಗಳನ್ನು ಬಳಸಿ ಗುರುಲಿಂಗ ಎನ್ನಿಸಿಕೊಂಡ ನಾಲಿಗೆಯನ್ನು ಹೊಲಸು ಮಾಡಿಕೊಂಡಿದ್ದೀರಿ. ಇದು ನಿಮ್ಮ ನಾಲಿಗೆಯಲ್ಲಿ ಗುರುವಿಲ್ಲ, ಕಣ್ಣುಗಳಲ್ಲಿ ಶಿವಲಿಂಗವಿಲ್ಲ, ನಿಮ್ಮ ನಾಸಿಕದಲ್ಲಿ ಆಚಾರಲಿಂಗವಿಲ್ಲ, ನಿಮ್ಮ ಕಿವಿಗಳಲ್ಲಿ ಪ್ರಸಾದಲಿಂಗವಿಲ್ಲ, ನಿಮ್ಮ ಚರ್ಮದಲ್ಲಿ ಜಂಗಮಲಿಂಗಕ್ಕೆ ದೂರ ಎಂದು ಮನಗಾಣಿಸಿದ್ದೀರಿ ಎಂದು ಕೊಲ್ಲಾಪುರದ ಕಾಡು ಸಿದ್ದೇಶ್ವರ ಮಠದ ಕನ್ಹೇರಿ ಶ್ರೀಗಳ ಮಾತಿಗೆ ಚಿತ್ರದುರ್ಗದ ಬಸವ ಧರ್ಮ ಪೀಠದ ಆಶ್ರಯದ ರಾಷ್ಟ್ರೀಯ ಬಸವದಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ.ವಿರೇಶ್ ಕುಮಾರ್ ದೂರಿದ್ದಾರೆ.

ಚಿತ್ರದುರ್ಗ ನಗರದ ಬಸವ ಮಂಟಪದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಲ್ಲಾಪುರದ ಕಾಡುಸಿದ್ದೇಶ್ವರ ಮಠದ ಕಣ್ಣೀರಿಶ್ರೀಗಳು ವಿಶ್ವದ ಎಲ್ಲಾ ತಾಯಂದಿರಿಗೆ ಅವಮಾನವಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ.ಬಸವಾದಿ ಶರಣರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ಹೊತ್ತಂತ ಧರ್ಮಗುರು ಬಸವಣ್ಣನವರ ಪರಂಪರೆಯವರಾದ ವಿರಕ್ತಮಠದ ಗುರುವರ್ಗದವರು. ಲಿಂಗಾಯತರು ಭೌಗೋಳಿಕವಾಗಿ ಮಾತ್ರ ಹಿಂದುಗಳು ಅಂದರೆ ಭಾರತೀಯರು. ಧಾರ್ಮಿಕವಾಗಿ ಜೈನ, ಬೌದ್ಧ, ಕ್ರೈಸ್ತ, ಸಿಬ್ಬ, ಇಸ್ಲಾಂ ಧರ್ಮೀಯರಂತೆ ಲಿಂಗಾಯತ ಸ್ವತಂತ್ರ ಧರ್ಮ. ಲಿಂಗಾಯತ ಧರ್ಮೀಯರು ವೈಜ್ಞಾನಿಕ ತಳಹದಿಯ ಮೇಲೆ ಅಷ್ಟಾಂಗ ಯೋಗವನ್ನೊಳಗೊಂಡ ತ್ರಾಟಕ ಯೋಗಕ್ಕೆ ಪೂರಕವಾದ ಇಷ್ಟಲಿಂಗವನ್ನು ಅಷ್ಟೇ ಪೂಜಿಸಬೇಕು. ದೇವತೆಗಳ ಪೂಜೆಯಾಗಲೀ ಪಂಚಭೂತಗಳ ಪೂಜೆಯಾಗಲೀ ಲಿಂಗಾಯತ ಧರ್ಮದಲ್ಲಿ ನಿಷಿದ್ಧ ಎಂದು ತಿಳಿಸಿದ್ದು ಬಸವಧರ್ಮದ ಆಣತಿಯಂತೆಯೇ ಎಂಬುದನ್ನು ಮರೆತು ವೃತಾ ಆಪಾದನೆಗಳ ಸುರಿಮಳೆಗಳನ್ನು ಗೈಯುವುದಲ್ಲದೆ ವಿನಾಕಾರಣ ಸುಳ್ಳುಗಳನ್ನು ಬಳಸಿ ಬಸವತತ್ವಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದರು.

ಇಲ್ಲಿ ಯಾರೂ ಗುಡಿಗುಂಡಾರಗಳಿಗೆ ಹೋಗುವುದನ್ನು ತಡೆಯುವುದಾಗಲೀ ಅವರವರ ನಂಬಿಕೆಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿಲ್ಲ. ಲಿಂಗಾಯತ ಧರ್ಮೀಯರು ಲಿಂಗಾಯತ ಧರ್ಮೀಯರುಗಳಿಗೆ ಇಂಥಹ ಪೂಜೆಗಳು ನಿಷಿದ್ಧ ಎಂದು ತಿಳಿಸುವ ಸ್ವಾತಂತ್ರ್ಯವಿಲ್ಲವೇ? ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನಕ್ಕೆ ಧಾರ್ಮಿಕ ಸ್ವತಂತ್ರ್ಯ ಬೇಡವೇ? ಹಿಂದೂ ಧರ್ಮ ಎಂದು ಹೇಳಿಕೊಳ್ಳುವವರು ಯಾವ ದೇವಸ್ಥಾನದಲ್ಲಿ ಮುಕ್ತ ಪ್ರವೇಶ ಪೂಜೆ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದಾರೆ. ಇಸ್ಲಾಂ ಧರ್ಮದವರು ಮೇಲು ಕೀಳೆನ್ನದೆ ಹಿರಿಯರು ಕಿರಿಯರು ಎನ್ನದೆ ಸಮಾನವಾಗಿ ಪ್ರಾರ್ಥನೆ ಮಾಡುವುದಿಲ್ಲವೇ? ಯಾರು ಏನೇ ಹೇಳಿದರೂ ಧರ್ಮ ಪ್ರಚಾರ ನಿಲ್ಲುವುದಿಲ್ಲ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಕಣ್ಣೀರಿ ಶ್ರೀಗಳಿಗೆ ಬುದ್ದಿ ಬರುವ ದಿನ ದೂರವಿಲ್ಲ. ತಪ್ಪು ಮಾಡಿದವರನ್ನು ಖಂಡಿಸುವ ಹಕ್ಕು ನಿಮಗಷ್ಟೇ ಏಕೆ ಪ್ರತಿಯೊಬ್ಬ ಮನುಕುಲೋತ್ತಮನಿಗೂ ಇದೆ ಎಂದು ವಿರೇಶ್ ತಿಳಿಸಿದರು.

ಇಂದಲ್ಲ ನಾಳೆ ಪರಿಪೂರ್ಣ ಬಸವತತ್ವ ಅನುಯಾಯಿಗಳಾಗಿ ಬಸವತತ್ವವನ್ನು ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಮಠಗಳು ನಡೆಯಲಿವೆ ಹಾಗೆಂದ ಮಾತ್ರಕ್ಕೆ ಲಿಂಗಾಯತ ಒಕ್ಕೂಟವನ್ನು ನೋಡಿ ತಡೆಯಲಾರದೇ ಹೊಲಸು ಪದಗಳನ್ನು ಬಳಸಿ ಗುರುಲಿಂಗ ಎನ್ನಿಸಿಕೊಂಡ ನಾಲಿಗೆಯನ್ನು ಹೊಲಸು ಮಾಡಿಕೊಂಡಿದ್ದೀರಿ. ಇದು ನಿಮ್ಮ ನಾಲಿಗೆಯಲ್ಲಿ ಗುರುವಿಲ್ಲ, ಕಣ್ಣುಗಳಲ್ಲಿ ಶಿವಲಿಂಗವಿಲ್ಲ, ನಿಮ್ಮ ನಾಸಿಕದಲ್ಲಿ ಆಚಾರಲಿಂಗವಿಲ್ಲ, ನಿಮ್ಮ ಕಿವಿಗಳಲ್ಲಿ ಪ್ರಸಾದಲಿಂಗವಿಲ್ಲ, ನಿಮ್ಮ ಚರ್ಮದಲ್ಲಿ ಜಂಗಮಲಿಂಗಕ್ಕೆ ದೂರ ಎಂದು ಮನಗಾಣಿಸಿದ್ದೀರಿ ವಿರಕ್ತ ಮಠದವರಾಗಿ ಬಸವತತ್ವಕ್ಕೆ ವಿರೋಧವಾದ ಆಚರಣೆಗಳು ನಿಷಿದ್ಧ ಎಂದು ಲಿಂಗಾನಂದ ಸ್ವಾಮೀಜಿಗಳು ಹಾಗೂ ಮಾತೆಮಹಾದೇವಿ ತಾಯಿಯವರು ಮತ್ತು ಬಾಲ್ಕಿ, ಇಳಕಲ್, ಗದಗ, ಪಾಂಡೋಮಟ್ಟಿ ಇಂತಹ ಅನೇಕ ವಿರಕ್ತ ಮಠಗಳು ಘೋಷಿಸುತ್ತಲೇ ಬಂದಿವೆ. ಈಗ ಸುಧಾರಣೆ ಹಾದಿಯಲ್ಲಿ ಇದೆ ಎಂದರು.

ಗೋಷ್ಟಿಯಲ್ಲಿ ಅಕ್ಕನಾಗಲಾಂಬಿಕ ಮಹಿಳಾ ಗಣದ ಅಧ್ಯಕ್ಷರಾದ ಅಕ್ಕಮಹಾದೇವಿ, ಲಿಂಗಾಯತ ಧರ್ಮ ಮಹಾ ಸಭಾದ ಅಧ್ಯಕ್ಷರಾದ ಎಮ.ಬಿ.ಶಂಕರಪ್ಪ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಲಿಂಗಾಯತ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *