ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್.

ಕುಂದಾಪುರದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದು ಕೆಲ ದಿನಗಳ ಬಳಿಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್‌ ಮುಗಿದಿದ್ದು, ಮೂರನೇ ಹಂತದ 60 ದಿನಗಳ ಶೆಡ್ಯೂಲ್‌ ಇತ್ತೀಚೆಗೆ ಶುರುವಾಗಿದೆ.ಸಿನಿಮಾದ ಅರ್ಧದಷ್ಟು ಚಿತ್ರೀಕರಣವನ್ನು ಪೂರ್ಣಗೊಂಡಿದ್ದು, ಉಳಿದ ಭಾಗದ ಚಿತ್ರೀಕರಣ ಈಗ ನಡೆಯುತ್ತಿದೆ. ಇದಲ್ಲದೆ, ರಿಷಬ್ ಕುದುರೆ ಸವಾರಿ ಮತ್ತು ಪುರಾತನ ಸಮರ ಕಲೆಯಾದ ಕಳರಿಪಯಟ್ಟು ತರಬೇತಿಯನ್ನು ಕಳೆದ ಒಂದು ವರ್ಷದಿಂದ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ʼಕಾಂತಾರ: ಅಧ್ಯಾಯ 1ʼ ಚಲನಚಿತ್ರದಾದ್ಯಂತ ಪ್ರಾಚೀನ ಸಮರ ಕಲೆಗಳು ಹೆಚ್ಚಾಗಿ ಕಾಣಸಿಗಲಿದೆ. ಮೂರನೇ ಹಂತದ ಚಿತ್ರೀಕರಣ 60 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಹಾಡಿನ ಚಿತ್ರೀಕರಣ, ಆಯಕ್ಷನ್ ದೃಶ್ಯ ಸೇರಿದಂತೆ ಕಥೆಯ ಸ್ವರೂಪಕ್ಕೆ ವಿಶಿಷ್ಟವಾದ ಹಲವಾರು ದೃಶ್ಯಗಳ ಶೂಟ್ ಆಗಲಿದೆ ಎಂದು ವರದಿಯಾಗಿದೆ.

ಹೊಂಬಾಳೆ ಫಿಲ್ಮ್ಸ್ ʼಕಾಂತಾರ -1ʼ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. 2025 ರ ಅಕ್ಟೋಬರ್‌ 2 ರಂದು ʼಕಾಂತಾರ ಚಾಪ್ಟರ್‌ -1ʼ ಸಿನಿಮಾ ವರ್ಲ್ಡ್‌ ವೈಡ್‌ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಭಾನುವಾರ(ನ.17ರಂದು) ಅನೌನ್ಸ್‌ ಮಾಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಈಗಾಗಲೇ ಟೀಸರ್‌ ಮೂಲಕ ʼಕಾಂತಾರ-1ʼ ಕುತೂಹಲ ಹೆಚ್ಚಾಗಿಸಿದೆ. ರಿಷಬ್‌ ಶೆಟ್ಟಿ ನಿರ್ದೇಶಕ ಹಾಗೂ ಪ್ರಮುಖ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಇತರೆ ಪಾತ್ರವರ್ಗದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರ ಪ್ರೀಕ್ವೆಲ್‌ʼ ಪಂಜರ್ಲಿ ದೈವದ ಹುಟ್ಟು ಮತ್ತು ಇತಿಹಾಸದ ಕಥೆಯನ್ನೊಳಗೊಳ್ಳಲಿದೆ ಎನ್ನಲಾಗಿದೆ. ರಿಷಬ್‌ ಶೆಟ್ಟಿ ಅವರು ಪ್ರಶಾಂತ್‌ ವರ್ಮಾ ನಿರ್ದೇಶನದ ʼಜೈ ಹನುಮಾನ್‌ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ.

Leave a Reply

Your email address will not be published. Required fields are marked *