ಕರ್ನಾಟಕ ಬ್ಯಾಂಕ್​ ನೇಮಕಾತಿ; ಇಲ್ಲಿದೆ ಹುದ್ದೆಗಳ ವಿವರ -ಅರ್ಜಿ ಸಲ್ಲಿಕೆಗೆ ಮಾರ್ಚ್​ 25 ಕಡೆಯ ದಿನಾಂಕ.

JOBS IN KARNATAKA BANK : ಕರ್ನಾಟಕ ಬ್ಯಾಂಕ್​ನಲ್ಲಿ ಗ್ರೇಡ್​-1ನ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಬ್ಯಾಂಕ್​ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾಸಲಾಗಿದೆ. ಆಫೀಸರ್​ ಸ್ಕೇಲ್​-1 ಕೇಡರ್​ ಹುದ್ದೆಗಳು ಇವಾಗಿವೆ.

ಹುದ್ದೆ ವಿವರ : ಒಟ್ಟು ಹುದ್ದೆ: 75

  • ಚಾರ್ಟರ್ಡ್​​​ ಅಕೌಂಟೆಂಟ್​- 25
  • ಲಾ ಆಫೀಸರ್​- 10
  • ಸ್ಪೆಷಲಿಸ್ಟ್​ ಆಫೀಸರ್​ – 10
  • ಐಟಿ ಸ್ಪೆಷಲಿಸ್ಟ್​​-30

ವಿದ್ಯಾರ್ಹತೆ:

Karnataka Bank invited Application form Candidates for various post

ಅಧಿಸೂಚನೆ (​Karnataka Bank)

ಚಾರ್ಟರ್ಡ್​​​ ಅಕೌಂಟೆಂಟ್​​: ಅಭ್ಯರ್ಥಿಗಳು ಸಿಎ ಮಾಡಿದ್ದು, ಮೊದಲ ಮೂರು ಪ್ರಯತ್ನದಗಳಲ್ಲೇ ಪಾಸ್​ ಆಗಿರಬೇಕು.

ಲಾ ಆಫೀಸರ್​: ಸ್ನಾತಕೋತ್ತರ ಕಾನೂನು ಪದವಿಯನ್ನು ಹೊಂದಿರಬೇಕು.

ಸ್ಪೆಷಲಿಸ್ಟ್ ಆಫೀಸರ್​: ಈ ಹುದ್ದೆಗೆ ಅಭ್ಯರ್ಥಿಗಳು ಎಂಬಿಎ ಪದವಿ ಹೊಂದಿರಬೇಕು.

ಐಟಿ ಸ್ಪೆಷಲಿಸ್ಟ್​: ಅಭ್ಯರ್ಥಿಗಳು ಬಿಇ, ಎಂಸಿಎ, ಎಂಟೆಕ್​ ಪದವಿಯನ್ನು ಶೇ 70ರಷ್ಟು ಅಂಕದಿಂದ ಉತ್ತೀರ್ಣರಾಗಿರಬೇಇ.

ಈ ಹುದ್ದೆಗೆ 2024 ಮತ್ತು 2025ರ ಬ್ಯಾಚ್​ನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್​ಲೈನ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಮಾರ್ಚ್​ 20ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮಾರ್ಚ್​ 25 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು karnatakabank.com ಭೇಟಿ ನೀಡಬಹುದಾಗಿದೆ.

Source : ETV-Bharat

Leave a Reply

Your email address will not be published. Required fields are marked *