Safe and Unsafe of Karnataka Districts on Child Rights : ಮಕ್ಕಳ ಹಕ್ಕುಗಳ ಸೂಚ್ಯಂಕವನ್ನು ಐಎಸ್ಇಸಿ ಬಹಿರಂಗ ಪಡಿಸಿದೆ. ಇದು, ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್, ಸಿದ್ದ ಪಡಿಸಿದ ವರದಿಯಾಗಿದೆ. ಈ ವರದಿಯ ಪ್ರಕಾರ, ರಾಜ್ಯದ ಆರು ಜಿಲ್ಲೆಗಳು ಮಕ್ಕಳ ರಕ್ಷಣೆಯ ವಿಚಾರದಲ್ಲಿ ಸುರಕ್ಷಿತವಾಗಿಲ್ಲ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಹೈಲೈಟ್ಸ್:
- ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿ ಅನ್ ಸೇಫ್
- ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಉಡುಪಿ, ಮಂಡ್ಯ ಜಿಲ್ಲೆಗಳು ಸೇಫ್
- ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ ಸಿದ್ದ ಪಡಿಸಿದ ವರದಿ
ಬೆಂಗಳೂರು: ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಜ್ (ISEC) ಬಿಡುಗಡೆ ಮಾಡಿದ ಮಕ್ಕಳ ಹಕ್ಕುಗಳ ಸೂಚ್ಯಂಕ 2023 ವರದಿ ಪ್ರಕಾರ, ಬೆಂಗಳೂರು ನಗರ ಜಿಲ್ಲೆ ಮಕ್ಕಳ ಸುರಕ್ಷತೆಯಲ್ಲಿ ‘ಸೇಫ್’ ಪಟ್ಟಿಯಲ್ಲಿ ಇಲ್ಲ ಎಂದು ಬಹಿರಂಗವಾಗಿದೆ. ಮಕ್ಕಳ ಹಕ್ಕು, ರಕ್ಷಣೆ, ಪೌಷ್ಟಿಕತೆ, ಶಿಕ್ಷಣದ ಹಕ್ಕು, ಆರೋಗ್ಯ ಮತ್ತು ನ್ಯಾಯಾಂಗ ಸಂಬಂಧಿತ ಆರು ಮಾನದಂಡಗಳ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.
✔️ ಸುರಕ್ಷಿತ ಜಿಲ್ಲೆಗಳ Top-10 ಪಟ್ಟಿ:
ಉಡುಪಿ, ಕೊಡಗು, ಮಂಡ್ಯ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಹಾಸನ, ಚಾಮರಾಜನಗರ.
✔️ ಮಕ್ಕಳಿಗೆ ಅಸುರಕ್ಷಿತವಾಗಿರುವ Top-5 ಜಿಲ್ಲೆಗಳು:
ಕೋಲಾರ, ಯಾದಗಿರಿ, ರಾಯಚೂರು, ಬಳ್ಳಾರಿ, ಧಾರವಾಡ.
✔️ POCSO Act ಅಡಿಯಲ್ಲಿ ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳು:
ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ನಗರ, ಹಾಸನ, ದಕ್ಷಿಣ ಕನ್ನಡ, ಮೈಸೂರು, ಚಿಕ್ಕಬಳ್ಳಾಪುರ.
➡️ ಈ ಜಿಲ್ಲೆಗಳಲ್ಲಿ ಅಪರಾಧದ ಪ್ರಮಾಣ ಇತರ ಜಿಲ್ಲೆಗಳಿಗಿಂತ 8 ಪಟ್ಟು ಹೆಚ್ಚು.
✔️ ಶಿಕ್ಷಣದ ಹಕ್ಕಿನ ಅರಿವು ಹಿಂದುಳಿದ ಜಿಲ್ಲೆಗಳು:
ಯಾದಗಿರಿ, ಗದಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕಲಬುರಗಿ, ರಾಯಚೂರು, ಹಾವೇರಿ.
✔️ ಪೌಷ್ಟಿಕಾಂಶ–ರಕ್ತಹೀನತೆ (Anaemia) ಸಮಸ್ಯೆ:
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 70% ಮಕ್ಕಳಿಗೆ ರಕ್ತಹೀನತೆ;
ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ 50–60% ಪ್ರಮಾಣ.
Views: 34