
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 22 : ಬೆಳಗಾವಿಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವ ಮಹಾರಾಷ್ಟ್ರ ಏಕೀರಣ ಸಮೀತಿಯ ಪುಂಡರ ಪುಂಡಾಟ ಪುಂಡಾಟ ಖಂಡಿಸಿ ಇಂದು ಕರ್ನಾಟಕ ನವನಿರ್ಮಾಣ ಸೇನೆ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ
ತಿಪ್ಪೇಶ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯ ಐಮಂಗಲ ಟೋಲ್ ಬಳಿ ಬೆಂಗಳೂರು ಮುಂಬೈ ಮಹಾರಾಷ್ಟ್ರ ಸಾರಿಗೆ ವಾಹನಕ್ಕೆ
ಮಸಿ ಬಳಿದು ಪ್ರತಿಭಟಿಸಿದರು.
ಬೆಳಗಾವಿಯಲ್ಲಿ ಕರ್ನಾಟಕದ ಸರ್ಕಾರಿ ಬಸ್ ನಿರ್ವಾಹಕರ ಮೇಲಿನ ಹಲ್ಲೆ ಖಂಡಿಸಿ ಐಮಂಗಲ ಟೋಲ್ ಬಳಿ ಮಹಾರಾಷ್ಟ್ರ ಬಸ್ ಗೆ
ಕಪ್ಪು ಮಸಿ ಬಳಿದು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ಕರ್ನಾಟಕ ಬಸ್ ನಿರ್ವಾಹಕರ ಮೇಲೆ ಮಹಾರಾಷ್ಟ್ರ
ಏಕೀಕರಣ ಸಮಿತಿಯ ಸದಸ್ಯರು ಹಲ್ಲೆ ಮಾಡಿದ್ದನ್ನ ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಚಿತ್ರದುರ್ಗ ಜಿಲ್ಲಾ ಘಟಕದ
ವತಿಯಿಂದ ಶುಕ್ರವಾರ ರಾತ್ರಿ ಐಮಂಗಲ ಬಳಿಯ ಗುಯಿಲಾಳು ಟೋಲ್ ಬಳಿ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷರಾದ
ತಿಪ್ಪೇಸ್ವಾಮಿ ನೇತೃತ್ವದಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಬಸ್‍ನ ಮೇಲೆ ಕಪ್ಪು ಮಸಿ ಬಳಿದು ಚಾಲಕನಿಗೆ ಕೂಡ ಮಸಿ ಬಳಿದು
ಪ್ರತಿಭಟನೆ ನಡೆಸಿ ತಮ್ಮ ಆಕ್ರೋಷವನ್ನು ಹೊರ ಹಾಕಿದ್ದಾರೆ.
ಇನ್ನೂ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷರಾದ ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಈ
ವೇಳೆ ಹಿರಿಯೂರು ತಾಲ್ಲೂಕಿನ ಅಧ್ಯಕ್ಷರಾದ ಲಕ್ಷ್ನಿಕಾಂತ್, ವಿಧ್ಯಾರ್ಥಿ ಘಟಕದ ಮಂಜುನಾಥ್ ಹಾಗೂ ನಗರಾಧ್ಯಕ್ಷ ರಾಮು
ಸೇರಿದಂತೆ ಅನೇಕರು ಹಾಜರಿದ್ದರು