ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಡುವುದಕ್ಕೆ ಕರ್ನಾಟಕ ರಾಜ್ಯ ಡಾ,ವಿಷ್ಣುವರ್ಧನ್ ಆದರ್ಶ ಬಳಗ ಆಕ್ಷೇಪ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 25 ಚಿತ್ರದುರ್ಗ ನಗರದ ಬಿ.ಡಿ.ರಸ್ತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಡುವುದಕ್ಕೆ ಕರ್ನಾಟಕ ರಾಜ್ಯ ಡಾ,ವಿಷ್ಣುವರ್ಧನ್ ಆದರ್ಶ ಬಳಗ ಆಕ್ಷೇಪವನ್ನು ವ್ಯಕ್ತಪಡಿಸಿದೆ. 
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಡಾ,ವಿಷ್ಣುವರ್ಧನ್ ಆದರ್ಶ ಬಳಗದ ರಾಜ್ಯಾಧ್ಯಕ್ಷರಾದ ಗೌಸ್‍ಪೀರ್ ಚಿತ್ರದುರ್ಗ ನಗರದ ಬಿ.ಡಿ.ರಸ್ತೆಗೆ ಈಗಾಗಲೇ ಡಾ,ವಿಷ್ಣುವರ್ಧನ ರಸ್ತೆ ಎಂದು 2018ರಲ್ಲಿಯೇ ಸರ್ಕಾರದವತಿಯಿಂದ ಅನುಮತಿಯನ್ನು ಪಡೆಯುವುದರ ಮೂಲಕ ಪಂಚಚಾರ್ಯ ಕಲ್ಯಾಣ ಮಂಟಪದ ಎದುರು ಡಾ,ವಿಷ್ಣುವರ್ಧನ ರಸ್ತೆ ಎಂದು ನಾಮಫಲಕವನ್ನು ಹಾಕಲಾಗಿದೆ. ಈಗ ಅದೇ ರಸ್ತೆಗೆ ನರೇಂದ್ರ ಮೋದಿಯವರ ಹೆಸರನ್ನು ಇಡಲು ನಗರಸಭೆ ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.
ಬಿ.ಡಿ.ರಸ್ತೆಗೆ ಡಾ,ವಿಷ್ಣುವರ್ಧನ ರಸ್ತೆಯಂದು ನಾಮಕರಣ ಮಾಡುವಂತೆ 22-09-2015 ರಂದು ನಗರಸಭೆಗೆ ಪತ್ರವನ್ನು ನೀಡಲಾಗಿತ್ತು. ಇದರಂತೆ ಮಂಜುನಾಥ್ ಗೊಪ್ಪೆಯವರ ನಗರಸಭೆಗೆ ಅಧ್ಯಕ್ಷರಾಗಿದ್ದಾಗ ನಡೆದ ಸಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಸದಸ್ಯರಿಂದ ಅನುಮೋದನೆ ಪಡೆದು ಪತ್ರಿಕೆಗಳಲ್ಲಿ ಇದರ ಬಗ್ಗೆ ಆಕ್ಷೇಪಣೆಯನ್ನು ಮಾಡಿದಾಗ ಯಾವುದೇ ಆಕ್ಷೇಪಣೆ ಬರದಿದ್ದಾಗ ಹಾಗೂ ಪೋಲಿಸ್ ಇಲಾಖೆಯಿಂದಲೂ ಸಹಾ ಯಾವುದೇ ರೀತಿಯ ಅಭ್ಯಂತರ ಇಲ್ಲ ಎಂದು ತಿಳಿಸಿದ್ದಾರೆ. ಅಂತಿಮವಾಗಿ ಹೆಸರಿಡಲು ಜಿಲ್ಲಾಧಿಕಾರಿಗಳವರಿಗೆ ಶಿಫಾರಸ್ಸು ಮಾಡಲಾಯಿತು, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ವಿ.ವಿ.ಜ್ಯೋತ್ಸ್ನ ರವರು ಪೌರಾಯುಕ್ತರ ಅನುಮೋದನೆ ಮೇರೆಗೆ 2017 ನವಂಬರ್ 24 ರಂದು ಪೌರಾಡಳಿತ ನಿದೇಶನಾಯಕ್ಕೆ ಪತ್ರವನ್ನು ಬರೆದರು, ಅಲ್ಲಿಂದ ಪೌರಾಡಳಿತ ನಿದೇಶನಾಯದಿಂದ 218-08-28 ರಂದು ಈ ರಸ್ತೆಗೆ ಡಾ,ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಬಹುದೆಂದು ಅನುಮತಿಯನ್ನು ನೀಡಲಾಯಿತು.ತದ ನಂತರ ಅಲ್ಲಿಂದ ಪಂಚಚಾರ್ಯ ಕಲ್ಯಾಣ ಮಂಟಪದ ಎದುರು ಡಾ,ವಿಷ್ಣುವರ್ಧನ ರಸ್ತೆ ಎಂದು ನಾಮಫಲಕವನ್ನು ಹಾಕಲಾಯಿತು.
ಈಗ ನಿನ್ನೆ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿ.ಡಿ.ರಸ್ತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಡಲು ಸದಸ್ಯರಾದ ಶಶಿಧರ್ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇದರ ಬಗ್ಗೆ ಸಭೆ ಸಮ್ಮತಿಯನ್ನು ಸೂಚಿಸಿದೆ ಎಂದು ತಿಳಿದು ಬಂದಿದೆ.ಈಗಾಗಲೇ ಒಮ್ಮೆ ರಸ್ತೆಗೆ ಹೆಸರನ್ನು ಇಡಲಾಗಿದೆ ಈಗ ಮತ್ತೋಮ್ಮೆ ಅದೆ ರಸ್ತೆಗೆ ಹೆಸರನ್ನು ಇಡುವುದು ಸರಿಯಲ್ಲ ಎಂದು ಗೌಸ್‍ಪೀರ್ ತಿಳಿಸಿದ್ದಾರೆ. 
ಡಾ,ವಿಷ್ಣುವರ್ಧನ್‍ರವರಿಗೆ ತುಂಬಾ ಅನ್ಯಾಯವಾಗುತ್ತಿದೆ ಅವರು ಬದುಕಿದ್ದಾಗಲೂ ಸಹಾ ಸರ್ಕಾರ ಅವರನ್ನು ಗುರುತಿಸಿ ಯಾವುದೇ ಉನ್ನತವಾದ ಪ್ರಶಸ್ತಿಯನ್ನು ನೀಡಲಿಲ್ಲ ಈಗ ಅವರ ಮರಣದ ನಂತರ ಅವರ ಸ್ಮಾರಕವನ್ನು ಸಹಾ ಸರಿಯಾದ ರೀತಿಯಲ್ಲಿ ಅಭೀವೃದ್ದಿಯನ್ನು ಮಾಡದೇ ಸರ್ಕಾರ ಅವರಿಗೆ ಅನ್ಯಾಯ ಮಾಡುತ್ತಿದೆ, ಇದರ ವಿರುದ್ದ ನಾವು ಹಲವಾರು ಬಾರಿ ಹೋರಾಟವನ್ನು ಮಾಡುವುದರ ಮೂಲಕ ಸರ್ಕಾರದ ಗಮನವನ್ನು ಸೆಳೆದರು ಸಹಾ ಯಾವುದೇ ಕಾರ್ಯವಾಗಿಲ್ಲ ಎಂದು ನೊಂದು ನುಡಿದರು.
2025 ಸೆ. 18 ರಂದು ವಿಷ್ಣುವರ್ಧನ್ ರವರಿಗೆ 75 ವರ್ಷ ತುಂಬಲಿದೆ ಇದರ ಅಂಗವಾಗಿ ವಿಷ್ಣುವರ್ಧನ್ ಕಪ್ ಪಂದ್ಯಾವಳಿ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ, ತುರುವನೂರು ರಸ್ತೆಯಲ್ಲಿನ ವಿಷ್ಣುವರ್ಧನ್ ಉದ್ಯಾನವನದಲ್ಲಿ ಅವರ ಪ್ರತಿಮೆ ಹಾಗೂ ಕನ್ನಡದ ಧ್ವಜ ಸ್ಥಂಭವನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದ ಗೌಸ್‍ಪೀರ್ ತಿಳಿಸಿದರು.

Leave a Reply

Your email address will not be published. Required fields are marked *