ಅತಿವೃಷ್ಟಿಂದಾದ ಬೆಳೆ ಹಾನಿಯ ಪರಿಹಾರಕ್ಕೆ: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಡಳಿತಕ್ಕ ಮನವಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 25 ಚಳ್ಳಕೆರೆ, ಮೊಳಕಾಲ್ಲೂರು, ಹಿರಿಯೂರು ತಾಲ್ಲೂಕಿನಲ್ಲಿ 2024ರ ಈ ವರ್ಷ ಅತಿವೃಷ್ಟಿಯಿಂದ ಶೇಂಗಾ, ಈರುಳ್ಳಿ ಇನ್ನೂ ಇತರೆ ಬೆಳೆಗಳು ನೆಲದಲ್ಲಿಯೇ ಮೊಳಕೆಯಾಗಿದ್ದು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಡಳಿತಕ್ಕ ಮನವಿ ಸಲ್ಲಿಸಿತು.

ಈ ಬಗ್ಗೆ ಮಾತನಾಡಿದ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷರಾದ ಕೆ. ಪಿ. ಭೂತಯ್ಯ ಚಿತ್ರದುರ್ಗ ಜಿಲ್ಲೆ 17ವರ್ಷಗಳಿಂದ ಅನಾವೃಷ್ಟಿ
ಮತ್ತು ಅತಿವೃಷ್ಟಿಗೆ ತುತ್ತಾಗಿ ರೈತರು ಪ್ರಕೃತಿ ವೈಫಲ್ಯದಿಂದ ಬೆಳೆದ ಬೆಳೆಗಳು ಕೈಗೆ ಸಿಗದೆ ಕೃಷಿಗೆ ಹಾಕಿದ ಬಂಡವಾಳವು ವಾಪಸ್ಸು
ಬಾರದೆ ಸಾಲಗಾರರಾಗಿ ಬರಗಾಲವನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ಅನಾವೃಷ್ಟಿಯಿಂದ ಬೆಳೆಗಳು ಒಣಗಿ ಹೋಗಿದ್ದು, ಈ ವರ್ಷ
ಅತಿವೃಷ್ಟಿಯಿಂದ ಬೆಳೆಗಳು ಕೊಳತು ಹೋಗಿ ಮೊಳಕೆಯಾಗಿರುತ್ತವೆ. ರೈತರು ಮಾಡಿರುವ ಬ್ಯಾಂಕ್ ಸಾಲದ ವಸೂಲಾತಿಗಾಗಿ ರೈತರಿಗೆ
ಕಿರುಕುಳ, ನೋಟೀಸ್ ನೀಡಿ ಹರಾಜು ಹಾಕುವ ಕುರಿತು ಬೆದರಿಸುತ್ತಿದ್ದಾರೆ. ಆ ಕಾರಣ ತಾವುಗಳು ನವೆಂಬರ್ ಮೊದಲ ವಾರದಲ್ಲಿ
ಚಳ್ಳಕೆರೆ, ಮೊಳಕಾಲ್ಕೂರು ತಾಲ್ಲೂಕುಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ
ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ. ಬೆಳೆ ನಷ್ಟ ಪರಿಹಾರ ಮತ್ತು ರೈತರಿಗೆ ಬೆಳೆ ವಿಮೆ ಪರಿಹಾರ ಕೊಡಿಸಿ ಎಲ್ಲಾ ರಾಷ್ಟ್ರೀಕೃತ
ಬ್ಯಾಂಕುಗಳಿಗೂ, ಖಾಸಗಿ ಬ್ಯಾಂಕುಗಳಿಗೂ ವಸೂಲಿಗೆ ಬಾರದಂತೆ ಸೂಚನೆ ನೀಡಬೇಕೆಂದು ಈ ಮೂಲಕ ರೈತಸಂಘ ಜಿಲ್ಲಾಡಳಿತಕ್ಕೆ
ಮನವಿ ಮಾಡಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಧನಂಜಯ, ಚಳ್ಳಕೆರೆ ತಾಲ್ಲೂಕ್ ಅಧ್ಯಕ್ಷ ಹಂಪಣ್ಣ, ತಿಮ್ಮಣ್ಣ, ಕುಮಾರ್‍ಸ್ವಾಮಿ, ರಾಜಣ್ಣ,
ರಾಮಚಂದ್ರಪ್ಪ, ರುದ್ರಪ್ಪ, ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *