ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 18 : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಾಂಸ್ಕೃತಿಕ ಮತ್ತು ಮನೋರಂಜನಾ ಕೇಂದ್ರದಲ್ಲಿನ ಅವ್ಯವಹಾರವಾಗಿದ್ದು, ಅದರ ಬಗ್ಗೆ ತನಿಖೆಯಾಗಬೇಕು, ಅಲ್ಲದೇ ಹಾಲಿ ಕಾರ್ಯ ನಿರ್ವಹಿಸುತ್ತಿದ್ದು ಕಾರ್ಯಕಾರಿ ಸಮಿತಿಯ ಅವಧಿಯು ಮುಕ್ತಾಯವಾಗಿರುವ
ಪ್ರಯುಕ್ತ ಮುಂದಿನ ಹೊಸ ಕಾರ್ಯಕಾರಿ ಸಮಿತಿ ಆಗುವವರೆಗೆ ಓರ್ವ ಆಡಳಿತಾಧಿಕಾರಿಯನ್ನು ನೇಮಕಾತಿ ಮಾಡುವಂತೆ ನಿವೃತ್ತ
ನೌಕರರಾದ ನಾಗರಾಜ್ ಸಂಗಮ್, ಹನುಮಂತಪ್ಪ.ಬಿ.ಕೆ, ಪರಮೇಶ್ವರಪ್ಪ.ಹೆಚ್, ಹಾಲುನಾಯ್ಕ.ಎಸ್ ಹಾಗೂ ಇತರೆ ನಿವೃತ್ತ
ನೌಕರರು ಚಿತ್ರದುರ್ಗ ಜಿಲ್ಲೆಯ ಸಹಕಾರ ಸಂಘಗಳ ನೊಂದಣಿ ಅಧಿಕಾರಿಗಳ ಉಪ ನಿಬಂಧಕರಾದ ದೀಲಿಪ್ ಕುಮಾರ್ ರವರಿಗೆ
ಮನವಿ ಮಾಡಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಸರ್ಕಾರಿ ಕೆಲಸಗಳಲ್ಲಿ ವಯೋನಿವೃತ್ತಿ ಹೊಂದಿ ಹಾಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ
ಸಾಂಸ್ಕೃತಿಕ ಮತ್ತು ಮನೋರಂಜನಾ ಕೇಂದ್ರದಲ್ಲಿ ಸದಸ್ಯರಾಗಿ ನೊಂದಣಿಯಾಗಿದ್ದಾರೆ. ಡಿಸೆಂಬರ್ 2024ರ ಮಹಾಸಭೆಯಲ್ಲಿ
ತೀರ್ಮಾನಿಸಿದಂತೆ ಪ್ರತಿ ತಿಂಗಳು ಮನೋರಂಜನಾ ಕೇಂದ್ರದಿಂದ ಬಂದ ಜಮಾ ಖರ್ಚಿನ ವಿವರಗಳನ್ನು ನೋಟಿಸ್ ಬೋರ್ಡಿನಲ್ಲಿ
ಪ್ರದರ್ಶಿನವಾಗಿಲ್ಲ,ಡಿಸೆಂಬರ್ 2024ರ ಮಾಹೆಯಲ್ಲಿ ನಡೆದ ಮಹಾಸಭೆಯಲ್ಲಿ ಮಂಡಿಸಿದ ಜಮಾ ಖರ್ಚಿನಲ್ಲಿ ಸುಮಾರು
ರೂ.84,000/- ಹೆಚ್ಚು ಅವ್ಯವಹಾರ ಕಂಡು ಬಂದಿದ್ದು, ಈ ಹಣದ ಅವ್ಯವಹಾರಕ್ಕೆ ಅಧ್ಯಕ್ಷರಾಗಿದ್ದ ಕೆ.ವಾಸುದೇವರೆಡ್ಡಿ ಹಾಗೂ
ಕಾರ್ಯದರ್ಶಿಯಾದ ಎಂ.ಶಿವಾನಂದಪ್ಪ ಮತ್ತು ಖಜಾಂಚಿಯಾದ ಎಂ.ಚನ್ನಪ್ಪ ನೇರ ಹೊಣೆಗಾರರಾ ಗಿರುತ್ತಾರೆ. ಸಂಘದ ಬೈಲಾ
ಸಂಘದ ಹಾಗೂ ಹಣಕಾಸಿನ ಕಾಯ್ದೆಯಂತೆ ಅಧ್ಯಕ್ಷರು ತುರ್ತು ಸಂದರ್ಭ ಬಂದಾಗ ಮಾತ್ರ ರೂ.5000/- ಗಳನ್ನು ಡ್ರಾ ಮಾಡಲು
ಅಧಿಕಾರ ಹೊಂದಿರುತ್ತಾರೆ. ಆದರೆ ಅಧ್ಯಕ್ಷರಾದ ವಾಸುದೇವರೆಡ್ಡಿ ರವರು ನಿಯಮ ಉಲ್ಲಂಘನೆ ಮಾಡಿ ರೂ.5000/- ಕ್ಕೂ ಹೆಚ್ಚು
ಹಣವನ್ನು ಡ್ರಾ ಮಾಡಿರುತ್ತಾರೆ. ಅಲ್ಲದೇ ಇವರು ಈ ಮೊತ್ತ ಡ್ರಾ ಮಾಡಲು ಕಾರ್ಯಕಾರಿ ಸಮಿತಿಯ ಯಾವುದೇ ಅನುಮತಿಯನ್ನು
ಡ್ರಾ ಮಾಡುವ ಮುಂಚೆ ಪಡೆದಿರುವುದಿಲ್ಲ. ಈಗ ಇವರ ಅವಧಿಯಲ್ಲಿ ಡ್ರಾ ಮಾಡಿ ಖರ್ಚು ಮಾಡಲಾದ ಮೊತ್ತಕ್ಕೆ ನಿಯಮಾನುಸಾರ
ಓಚರ್ಸ್‍ಗಳನ್ನು ನೀಡಬೇಕಾಗಿದ್ದು, ಈ ಓಚರಸ್‍ಗಳನ್ನು ನಮಗೆ ಯಾರಿಗೂ ತೋರಿಸಿಲ್ಲ ಎಂದು ಆರೋಪಿಸಿದ್ದಾರೆ.
ಈ ಮನರಂಜನಾ ಕೇಂದ್ರದ ಸದಸ್ಯರುಗಳ ಲೆಕ್ಕ ಪತ್ರಗಳು ಹಾಗೂ ಓಚರ್‍ಗಳ ಕುರಿತು ಕೇಳಿದ ಸಂದರ್ಭದಲ್ಲಿ ನಿಮಗೆ ಈಗ
ಕೇಳುವ ಅಧಿಕಾರವಿಲ್ಲ. ನೀವು ವರ್ಷಕ್ಕೆ ಒಮ್ಮೆ ಕರೆಯುವ ಮಹಾಸಭಾದಲ್ಲಿ ಅಧಿಕಾರವಿಲ್ಲವೆಂದು ಜೋರು ಧ್ವನಿಯಲ್ಲಿ
ಗದರಿಸಿರುತ್ತಾರೆ. ಅಧ್ಯಕ್ಷರು ಹಣಕಾಸಿನ ವಿಚಾರದಲ್ಲಿ ವಿಕಪಕ್ಷಿತವಾಗಿ ತೀರ್ಮಾನ ತೆಗೆದುಕೊಂಡು ಅಧಿಕಾರ ದುರುಪಯೋಗ
ಪಡಿಸಿಕೊಂಡಿರುತ್ತಾರೆ. ಈ ಮನೋರಂಜನಾ ಕೇಂದ್ರದಲ್ಲಿ ಕಳೆದ 10-15 ವರ್ಷಗಳಿಂದಲೂ ಸಹ ಯಾವುದೇ ಲೆಕ್ಕಪತ್ರಗಳನ್ನು
ನಿಯಾನುಸಾರ ನಿರ್ವಹಿಸದೇ ಕೇವಲ ಆಡಿಟ್ ವರದಿ ಸಲ್ಲಿಸಿ ಮುಚ್ಚಿಹಾಕಿರುತ್ತಾರೆ. ಈ ಬಗ್ಗೆ ಕಳೆದ 10-15ನೇವರ್ಷಗಳಿಂದ
ಮಾಡಲಾದ ಇತರೆ ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೋಧಕರನ್ನು ನೇಮಿಸಿ ಲೆಕ್ಕಪತ್ರಗಳನ್ನು ಪರಿಶೀಲಿಸಬೇಕು. ಕಳೆದ
10-15 ವರ್ಷಗಳಿಂದ ಇದೇ ರೀತಿ ಈ ಮನರಂಜನಾ ಕೇಂದ್ರದ ಅನುದಾನ ದುರುಪಯೋಗವಾಗಿರುವ ಬಗೆ ಎಲ್ಲಾ ಸದಸ್ಯರುಗಳಿಗೆ
ಸಂಶಯ ವ್ಯಕ್ತವಾಗಿರುತ್ತೆ ಎಂದಿದ್ದಾರೆ.
ಈ ಮನೋರಂಜನ ಕೇಂದ್ರದಲ್ಲಿ ಕಳೆದ 10-15 ವರ್ಷದಿಂದ ಜಮಾ ಖರ್ಚು ಸದಸ್ಯತ್ವ ಶುಲ್ಕಗಳನ್ನು ದಯಮಾಡಿ ರಸೀದಿ ಬಿಲ್
ಓಚರ್ಸ್ ಬ್ಯಾಂಕ್ ಪಾಸ್‍ಬುಕ್‍ಗಳನ್ನು ಒಳಗೊಂಡಂತೆ ಪರಿಪೂರ್ಣವಾಗಿ ಪರಿಶೀಲಿಸಿ ಇದರಲ್ಲಿ ಹಣ ದುರುಪಯೋಗ ಮಾಡಿದವರ
ಮೇಲೆ ನಿಯಾನುಸಾರ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ದಿ:31.03.2025ಕ್ಕೆ ಕಾರ್ಯಕಾರಿ ಸಮಿತಿ ಅವಧಿ
ಮುಕ್ತಾಯವಾಗಿರುವ ಪ್ರಯುಕ್ತ ಓರ್ವ ದಕ್ಷ ಆಡಳಿತಾಧಿಕಾರಿರವರನ್ನು ನಿಯಾನುಸಾರ ಈ ಮನರಂಜನಾ ಕೇಂದ್ರಕ್ಕೆ ಮುಂದಿನ
ಹೊಸದಾಗಿ ಕಾರ್ಯಕಾರಿ ಸಮಿತಿ ರಚನೆಯಾಗುವವರೆಗೆ ಇರುವಂತೆ ನೇಮಕಾತಿ ಮಾಡುವಂತೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನಾ ಸಭೆಯನ್ನು ನಡೆಸಿದ ನಿವೃತ್ತ ನೌಕರರು ಚಿತ್ರದುರ್ಗ ತಾಲ್ಲೂಕಿನಲ್ಲಿ ನಿವೃತ್ತ ನೌಕರರ ಸಂಘ ಇಲ್ಲದಿರುವುದನ್ನು
ಮನಗಂಡು ಚಿತ್ರದುರ್ಗ ತಾಲ್ಲೂಕಿನಲ್ಲಿ ನಿವೃತ್ತ ನೌಕರರ ಸಂಘವನ್ನು ರಚನೆ ಮಾಡಲು ತೀರ್ಮಾನ ಮಾಡಿದ್ದು ಇದರ ಬಗ್ಗೆ
ಶೀಘ್ರದಲ್ಲಿಯೇ ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ನಿವೃತ್ತ ನೌಕರರ ಸಭೆಯನ್ನು ಕರೆಯುವುದರ ಮೂಲಕ ನೂತನವಾಗಿ ಸಂಘವನ್ನು
ರಚನೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಯಿತು ಎಂದು ನಾಗರಾಜ್ ಸಂಗಂ ತಿಳಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1