KCC: ‘ಕನ್ನಡ ಚಲನಚಿತ್ರ ಕಪ್​’ 3ನೇ ಸೀಸನ್​ಗೆ ಅದ್ದೂರಿ ಚಾಲನೆ; 6 ತಂಡಗಳ ನಡುವೆ ಹಣಾಹಣಿ

KCC Matches: Kannada Chalanachitra Cup starter in Chinnaswamy Stadium Bengaluru

ಸಿನಿಮಾ ಸೆಲೆಬ್ರಿಟಿಗಳಿಗೂ ಕ್ರಿಕೆಟ್​ಗೂ ಎಲ್ಲಿಲ್ಲದ ನಂಟು. ಕನ್ನಡದ ನಟರು ಕ್ರಿಕೆಟ್​ ಬಗ್ಗೆ ತುಸು ಜಾಸ್ತಿಯೇ ಆಸಕ್ತಿ ತೋರಿಸುತ್ತಾರೆ. ಕಿಚ್ಚ ಸುದೀಪ್​, ಡಾಲಿ ಧನಂಜಯ್​, ಗಣೇಶ್​, ಶಿವರಾಜ್​ಕುಮಾರ್​, ಧ್ರುವ ಸರ್ಜಾ ಮುಂತಾದ ಸ್ಟಾರ್​ಗಳು ಕನ್ನಡ ಚಲನಚಿತ್ರ ಕಪ್​ನಲ್ಲಿ (Kannada Chalanachitra Cup) ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇಂದು (ಫೆಬ್ರವರಿ 24) ಅದ್ದೂರಿಯಾಗಿ ಕೆಸಿಸಿ ಪಂದ್ಯಗಳು ಆರಂಭ ಆಗಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮ್ಯಾಚ್​ ನಡೆಯುತ್ತಿದೆ. ಆರು ತಂಡಗಳ ನಡುವೆ ಕೆಸಿಸಿ ಫೈಟ್​ ಏರ್ಪಡಲಿದೆ. ಕನ್ನಡದ ಸೆಲೆಬ್ರಿಟಿಗಳ ಜೊತೆ ಅಂತಾರಾಷ್ಟ್ರೀಯ ಆಟಗಾರರು ಕೂಡ ಫೀಲ್ಡ್​ಗೆ ಇಳಿದಿದ್ದಾರೆ. ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ‘ಕನ್ನಡ ಚಲನಚಿತ್ರ ಕಪ್​’ (KCC) ಪಂದ್ಯಗಳು ನಡೆಯಲಿದ್ದು, ಕ್ರೀಡಾಭಿಮಾನಿಗಳು ಮತ್ತು ಕ್ರಿಕೆಟ್​ ಪ್ರಿಯರನ್ನು ಆಕರ್ಷಿಸಿದೆ.

ಎರಡು ಗ್ರೂಪ್​ನ ಆರು ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಎ ಗ್ರೂಪ್​ನಲ್ಲಿ ಕದಂಬ ಲಯನ್ಸ್​, ರಾಷ್ಟ್ರಕೂಟ ಪ್ಯಾಂಥರ್ಸ್​, ವಿಜಯನಗರ ಪ್ಯಾಟ್ರಿಯಾಟ್ಸ್​ ತಂಡಗಳಿವೆ. ಬಿ ಗ್ರೂಪ್​ನಲ್ಲಿ ಗಂಗಾ ವಾರಿಯರ್ಸ್​, ಹೊಯ್ಸಳ ಈಗಲ್ಸ್​, ಒಡೆಯರ್​ ಚಾರ್ಜಸ್​ ಟೀಮ್​ಗಳಿವೆ. ಫೆಬ್ರವರಿ 24ರ ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್, ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ‘ಚಿತ್ರರಂಗ ನನ್ನ ಸ್ವತ್ತಲ್ಲ, ಎಲ್ಲರಿಗೂ ಆಹ್ವಾನ ಕೊಡ್ತೀವಿ’; ಕೆಸಿಸಿ 3ನೇ ಆವೃತ್ತಿ ಬಗ್ಗೆ ಸುದೀಪ್ ಮಾತು

ಫೆಬ್ರವರಿ 25ರಂದು ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್, ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್ ತಂಡಗಳು ನಡುವೆ ಪಂದ್ಯ ಇರಲಿದೆ. 30 ದೇಶಗಳಲ್ಲಿ ಇದು ಪ್ರಸಾರ ಆಗಲಿದೆ.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಕಿಚ್ಚ ಸುದೀಪ್​ ಅವರು ಕೆಸಿಸಿ ಬಗ್ಗೆ ಮಾತನಾಡಿದ್ದರು. ‘ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಹೀಗಾಗಿ, ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್ ನೋಡಿಕೊಂಡು ಬರುತ್ತಾರೆ’ ಎಂದಿದ್ದರು ಸುದೀಪ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

source https://tv9kannada.com/entertainment/kcc-matches-kannada-chalanachitra-cup-starter-in-chinnaswamy-stadium-bengaluru-mdn-au42-525968.html

Views: 0

Leave a Reply

Your email address will not be published. Required fields are marked *