KCET Exam 2025: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್​ ಬಿಡುಗಡೆ, ಆನ್​ಲೈನ್​ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್‌ ಭಾನುವಾರ ಬಿಡುಗಡೆಯಾಗಿದೆ. ಏಪ್ರಿಲ್ 15 ರಿಂದ 17 ರವರೆಗೆ ನಡೆಯುವ ಪರೀಕ್ಷೆಗೆ 3.6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆನ್​ಲೈನ್​ನಲ್ಲಿ ಹಾಲ್ ಟಿಕೆಟ್ ಮತ್ತು ಮಾದರಿ OMR ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಡೌನ್​ಲೋಡ್ ಮಾಡುವ ವಿಧಾನ ಇಲ್ಲಿದೆ.

This image has an empty alt attribute; its file name is image-48-1024x576.png

ಬೆಂಗಳೂರು, ಏಪ್ರಿಲ್​​ 07: ಕರ್ನಾಟಕದಲ್ಲಿ ಏಪ್ರಿಲ್​ 15ರಿಂದ 17ರ ವರೆಗೆ ಅಂದರೆ ಮೂರು ದಿನಗಳ ಕಾಲ ಸಿಇಟಿ ಪರೀಕ್ಷೆ (Karnataka CET Exam) ನಡೆಯಲಿದೆ. ಹೀಗಾಗಿ ಸಿಇಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ಹಾಲ್ ಟಿಕೆಟ್ (Hall ticket) ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ಕೆಇಎ ಹಾಲ್ ಟಿಕೆಟ್​ ಜೊತೆಗೆ ಮಾದರಿ ಒಎಮ್​ಆರ್ ಶೀಟ್ ಕೂಡ ನೀಡಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ಗೆ ಕೌಟ್ ಡೌನ್ ಶುರುವಾಗಿದೆ. ಕರ್ನಾಟಕ ಈ ವರ್ಷ ಪ್ರಾಧಿಕಾರದ ನೀರಿಕ್ಷೆಗೂ ಮಿರಿ ಅರ್ಜಿಗಳು ಸಲ್ಲಿಕೆಯಾಗಿದೆ. ಈ ವರ್ಷ 3 ಲಕ್ಷ 60 ಸಾವಿರ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 3 ಲಕ್ಷ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಾಧ್ಯತೆ ಇದೆ.

ಹೀಗಾಗಿ ಹತ್ತು ದಿನಕ್ಕೂ ಮೊದಲೇ ಅಂದರೆ ಇಂದು ಸಿಇಟಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು cetonline.karnataka.gov.in ಲಿಂಕ್ ಮೂಲಕ ಹಾಲ್ ಟಿಕೆಟ್​ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ನು ಪ್ರತಿ ಬಾರಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ದಿನ ಒಎಮ್​ಆರ್ ತುಂಬಲು ಪರದಾಟ ಹಾಗೂ ಗೊಂದಲ ಮಾಡಿಕೊಳ್ಳುತ್ತಿದ್ದ ಹಿನ್ನಲೆ ಈ ಬಾರಿ ಪ್ರವೇಶ ಪತ್ರದ ಜೊತೆಗೆ ಒಎಮ್​ಆರ್ ಶೀಟ್ ಕೂಡಾ ನೀಡಲಾಗುತ್ತಿದೆ.

ಸಿಇಟಿ ಪರೀಕ್ಷೆ ಹಾಲ್ ಟಿಕೆಟ್ ಡೌನ್‌ಲೋಡ್​ ಮಾಡಿಕೊಳ್ಳುವುದು ಹೇಗೆ?

  • ಕೆಇಎ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ.
  • ಬಳಿಕ ಪ್ರವೇಶ ವಿಭಾಗಕ್ಕೆ ಹೋಗಿ ಮತ್ತು UGCET-2025 ಆಯ್ಕೆ ಮಾಡಿ.
  • ಯುಜಿ ಸಾಮಾನ್ಯ ಪ್ರವೇಶ ಪರೀಕ್ಷೆ- 2025 ಪ್ರವೇಶ ಪತ್ರ ಎಂಬ ಶೀರ್ಷಿಕೆಯ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಲಾಗಿನ್ ಐಡಿ ಅಥವಾ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
  • ಬಳಿಕ ಸಬ್​ಮೀಟ್​ ಆಪ್ಷನ್​ ಮೇಲೆ ಕ್ಲಿಕ್ ಮಾಡಿ, ನಿಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಎಲ್ಲಾ ಕೇಂದ್ರಗಳಲ್ಲೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.

ಏಪ್ರಿಲ್​ 15ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಏ.16 ಮತ್ತು 17ರಂದು ಇತರೆ ವಿಷಯ ಪರೀಕ್ಷೆ, ಏಪ್ರಿಲ್​ 16 ರಂದು 10:30 ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ, ಏಪ್ರಿಲ್​ 17 ರಂದು ಬೆಳ್ಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿವೆ.

ಸಿಇಟಿ ಪರೀಕ್ಷೆ: ಫೇಸಿಯಲ್ ಅಟೆಂಡೆನ್ಸ್

ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಬಿಗಿ ಕ್ರಮಕ್ಕೆ ಇಲಾಖೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಪರೀಕ್ಷಾ ಕೊಠಡಿಯ ಒಳಗೆ ಯಾವುದೇ ಆಧುನಿಕ ಉಪಕರಣಗಳಾದ ಟ್ಯಾಬ್ಲೆಟ್ ಮೊಬೈಲ್, ಟ್ಯಾಕ್ಸ್ ಕ್ಯಾಲ್ಕುಲೇಟರ್, ಬ್ಲೂಟೂತ್, ಕೈಗಾಡಿಯಾರಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟನೆ ನೀಡಿದೆ. ಜೊತೆಗೆ ಅಕ್ರಮ ತಡೆಯಲು ಈ ವರ್ಷ ಫೇಸಿಯಲ್ ಅಟೆಂಡೆನ್ಸ್ ಕೂಡ ಪರಿಚಯಿಸಲಾಗಿದೆ.

ಪಿಯು ವಿದ್ಯಾರ್ಥಿಗಳು ಫಲಿತಾಂಶ ಉತ್ತಮ ಬರುವ ಸಾಧ್ಯತೆಯ ನಿರೀಕ್ಷೆಯಲ್ಲಿ ಮುಂದಿನ ಶಿಕ್ಷಣದ ಬಗ್ಗೆ ಲಕ್ಷಂತಾರ ವಿದ್ಯಾರ್ಥಿಗಳು ಗಮನ ಹರಿಸಿದ್ದಾರೆ. ಜೊತೆಗೆ ಉನ್ನತ್ತ ಶಿಕ್ಷಣದ ಕಡೆ ಒಲವು ತೊರಿಸಿದ್ದಾರೆ. ಸರ್ಕಾರ ಹಾಗೂ ಉನ್ನತ್ತ ಶಿಕ್ಷಣ ಇಲಾಖೆಯೂ ಇದಕ್ಕೆ ಪೂರಕವಾಗುತ್ತವಂತೆ ಕಾಲೇಜುಗಳನ್ನು ಹೆಚ್ಚಿಸುವ ಯೋಜನೆ ಮಾಡುವ ಅವಶ್ಯಕತೆ ಎದುರಾಗಿದೆ.

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *