ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 24
ಇಂದು ಕರ್ನಾಟಕ ವಿದ್ಯುತ್ ಮಂಡಳಿಯ ಪಿಂಚಣಿದಾರರ ಸಂಘದ ವತಿಯಿAದ ಚಿತ್ರದುರ್ಗ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 80 ವರ್ಷ ಮೇಲ್ಪಟ್ಟ ಅಧಿಕಾರಿ/ನೌಕರರಿಗೆ ಗೌರವ ಸಮಾರಂಭವನ್ನು ಶನಿವಾರ ಕಚೇರಿಯ ಮಂಭಾಗದಲ್ಲಿ ಏರ್ಪಡಿಸಲಾಗಿತ್ತು.
ಸಮಾರಂಭದ ಗೌರವ ಅಧ್ಯಕ್ಷ ನಿವೃತ್ತ ಮುಖ್ಯ ಇಂಜಿನಿಯರ್ ಕೆ ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಬಿ.ಎಂ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಟಿ ಕೆ ಚಂದ್ರಶೇಖರರಾವ್, ನಿವೃತ್ತ ನಿಯಂತ್ರಣಾಧಿಕಾರಿ ಹೆಚ್ ಓ ದೇವೇಂದ್ರಪ್ಪ, ಎಸ್ ಶಿವಲಿಂಗಪ್ಪ, ಮಹಾಲಿಂಗಯ್ಯ, ಗೋವಿAದಪ್ಪ. ಕ್ಯೂಬನಾಯ್ಕ್. ಸನಾವುಲ್ಲ, ಸ್ಯೆಯದ್ ಮಿಯಾ, ಹೇಮರೆಡ್ಡಿ, ಗಂಗಾಧರಪ್ಪ ಅಲ್ಲದೆ 30 ಮಂದಿ ಪಿಂಚಣಿದಾರರನ್ನು ಸನ್ಮಾನಿಸಲಾಯಿತು. ಈ ವೇಳೆ ಸಂಘದ ಸದಸ್ಯರು ಉಪಸ್ಥಿತರಿದ್ದರು
Views: 11